More

    1 ಕೋಟಿ 66 ಲಕ್ಷ ರೂ. ನಿವ್ವಳ ಲಾಭ

    ಬಾಗಲಕೋಟೆ: ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘ 2019-20ನೇ ಸಾಲಿನಲ್ಲಿ 1 ಕೋಟಿ 66 ಲಕ್ಷ ರೂ. ನಿವ್ವಳ ಲಾಭವಾಗಿದೆ. ಕಳೆದ 20 ವರ್ಷಗಳಿಂದ ಬ್ಯಾಂಕ್ ಪ್ರಗತಿ ಪಥದತ್ತ ಸಾಗುತ್ತಿದ್ದು, ಈ ವರ್ಷವೂ ಶೇ.15 ರಷ್ಟು ಲಾಭಾಂಶ ನೀಡಲಾಗುವುದು ಎಂದು ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಘೋಷಣೆ ಮಾಡಿದರು.

    ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘ 1000 ಜನ ಸದಸ್ಯರೊಂದಿಗೆ 20 ಲಕ್ಷ ರೂ. ಷೇರು ಬಂಡವಾಳದೊಂದಿಗೆ 2001 ಏಪ್ರಿಲ್ 2 ರಂದು ದುದನಿ-ನಿಂಬಾಳದ ಜಡೆಯಶಾಂತಲಿಂಗ ಸ್ವಾಮೀಜಿ, ಬೀಳೂರ ಮುರುಗೇಂದ್ರ ಸ್ವಾಮೀಜಿ ಅಮೃತ ಹಸ್ತದಿಂದ ಕಾರ್ಯಾರಂಭ ಮಾಡಿತು. ಅಂದಿನಿಂದ ಇಲ್ಲಿವರೆಗೆ ಸಂಘವು ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    2012 ಮಾರ್ಚ್ 31 ರಲ್ಲಿ 1993 ಇದ್ದ ಸದಸ್ಯರ ಸಂಖ್ಯೆ ಇಂದು 5605 ಕ್ಕೆ ಹೆಚ್ಚಳವಾಗಿದೆ. 44.68 ಲಕ್ಷ ರೂ. ಇದ್ದ ಷೇರು ಬಂಡವಾಳ 342.50 ಲಕ್ಷ ರೂ. ವರೆಗೆ ಏರಿಕೆಯಾಗಿದೆ. 1.65 ಲಕ್ಷ ರೂ. ಇದ್ದ ನಿಧಿ 2358.72 ಲಕ್ಷ ರೂ. ವರೆಗೆ ಆಗಿದೆ. 977.77 ಲಕ್ಷ ರೂ. ಇದ್ದ ಠೇವುಗಳು 26,765.31 ಲಕ್ಷ ರೂ. ವರೆಗೆ ಹೆಚ್ಚಳವಾಗಿದೆ. 630.00 ಲಕ್ಷ ರೂ. ವರೆಗೆ ಇದ್ದ ಗುಂತಾವಣೆಗಳು 16,571.77 ಲಕ್ಷ ರೂ. ವೆರೆಗೆ ಹೆಚ್ಚಳವಾಗಿದೆ. 363.33 ಲಕ್ಷ ರೂ.ವರೆಗೆ ಇದ್ದ ಸಾಲಗಳು 11,771.70 ಲಕ್ಷ ರೂ. ಏರಿಕೆಯಾಗಿದೆ. ಆರಂಭದಲ್ಲಿ 1024.41 ಲಕ್ಷ ರೂ.ಇದ್ದ ದುಡಿಯುವ ಬಂಡವಾಳ 29.466.53 ಲಕ್ಷ ರೂ. ವರೆಗೆ ಹೆಚ್ಚಳವಾಗಿದೆ. 13.44 ಲಕ್ಷ ರೂ. ಇದ್ದ ಲಾಭ 166.96 ಲಕ್ಷ ರೂ. ವರೆಗೆ ಹೆಚ್ಚಳವಾಗಿದ್ದು, ಈ ವರ್ಷವು ಕೂಡ ಪ್ರತಿಶತ 15 ರಷ್ಟು ಡಿವಿಡೆಂಟ್ ಕೊಡಲಾಗುವುದು. ಡಿ.20 ರಂದು ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸಂಘದ ವಾರ್ಷಿಕ ಸರ್ವ ಸಾಧಾರಣೆ ಸಭೆ ನಡೆಯಲಿದೆ ಎಂದು ಹೇಳಿದರು.

    ಜಾಮೀನು ಸಾಲ, ಸಂಬಳ ಭದ್ರತೆ ಸಾಲ, ಆಸ್ತಿ ಭದ್ರತೆ ಸಾಲ, ಮನೆ ಕಟ್ಟುವ ಸಾಲ, ವಾಹನ ಸಾಲ, ರೋಖು ಪತ್ತಿನ ಸಾಲ, ಬಂಗಾರದ ಮೇಲೆ ಭದ್ರತೆ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳನ್ನು ನೀಡಲಾಗುತ್ತಿದೆ. ಬಿಇ ಕಾಲೇಜು ಶಾಖೆ, ಎಪಿಎಂಸಿ ಶಾಖೆ, ನವನಗರ, ಮುಧೋಳ ಹಾಗೂ ಅಮೀನಗಡ, ಕಮತಗಿ ಸೇರಿದಂತೆ ಒಟ್ಟು ಆರು ಶಾಖೆ ಸದ್ಯ ಕಾರ್ಯನಿರ್ವಹಿಸುತ್ತಿವೆ ಎಂದರು.

    ಸಂಘದ ಉಪಾಧ್ಯಕ್ಷ ಮುರುಗೆಪ್ಪ ನಾರಾ, ನಿರ್ದೇಶಕರಾದ ಸಿದ್ದಣ್ಣ ಶೆಟ್ಟರ, ಗುರುಬಸವ ಸೂಳಿಭಾವಿ, ಅಶೋಕ ಸಜ್ಜನ (ಬೇವೂರ), ಪ್ರಕಾಶ ರೇವಡಿಗಾರ, ರುದ್ರಪ್ಪ ಅಕ್ಕಿಮರಡಿ, ಮಹೇಶ ಅಂಗಡಿ, ದಾಮೋದರ ರಾಠಿ, ಜಯಪ್ರಕಾಶ ಬೆಂಡಿಗೇರಿ, ರಾಜು ನಾಯ್ಕರ ಸೇರಿದಂತೆ ಸಂಘದ ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ಇದ್ದರು.

    ಆರ್ಥಿಕವಾಗಿ ಹಿಂದುಳಿದವರ ಆರ್ಥಿಕ ಪ್ರಗತಿಗೆ ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘವು ಶ್ರಮಿಸುತ್ತಿದೆ. ಗ್ರಾಹಕರು, ಠೇವಣಿದಾರರ, ಬಾಗಲಕೋಟೆ ವ್ಯಾಪಾರಸ್ಥರು, ಕಾರ್ಮಿಕರ ವಿಶ್ವಾಸ ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ವಿವಿಧ ರೀತಿಯ ಸಾಲಗಳನ್ನು ನೀಡುತ್ತಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಹೊಸ ಶಾಖೆ ಆರಂಭಿಸುವ ಉದ್ದೇಶವಿದೆ. ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಮುಂದುವರಿಯಲಾಗುವುದು.
    ವೀರಣ್ಣ ಚರಂತಿಮಠ ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಶಾಸಕ ಬಾಗಲಕೋಟೆ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts