More

    ಬಸವಣ್ಣನವರ ವಿಚಾರಧಾರೆಗಳು ವಿಶ್ವಕ್ಕೆ ಮಾದರಿಯಾಗಿವೆ

    ಬಾಗಲಕೋಟೆ: ಬಸವಣ್ಣನವರು ಸಮಾಜದಲ್ಲಿ ಜಾತಿ, ವರ್ಣ, ಲಿಂಗ ಭೇದ ಎಂಬುದು ಇಲ್ಲ, ನಾವೆಲ್ಲರೂ ಸಮಾನರು ಎಂದು ಸಮಾಜಕ್ಕೆ ಸಂದೇಶ ಸಾರಿದ್ದರಿಂದಲೇ ಬಸವೇಶ್ವರರನ್ನು ವಿಶ್ವಗುರು ಎಂದು ಕರೆಯಲಾಗುತ್ತದೆ ಎಂದು ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಗನ್ನಾಥ ವ್ಹಿ. ಚವ್ಹಾಣ ಅವರು ಹೇಳಿದರು.
    ಬಿ.ವಿ.ವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

    ಸಾಂಸ್ಕೃತಿಕ ಹರಿಕಾರ ಬಸವಣ್ಣನವರನ್ನು ದೇಶದ ಅತ್ಯುತ್ತಮ ಸಮಾಜ ಸೇವಕರಲ್ಲಿ ಒಬ್ಬರು.  ಮಾದಾರ ಚನ್ನಯ್ಯ ಆರಂಭಿಸಿದ ಭಕ್ತಿ ಆಂದೋಲನವನ್ನು ಬಸವಣ್ಣನವರು ಮುಂದುವರೆಸಿದರು. ಭಕ್ತಿ ಚಳುವಳಿಯ ಎರಡನೇ ರೂಪವು ವಚನ ಸಾಹಿತ್ಯವನ್ನು ಆಧರಿಸಿದೆ. ಈ ಸುಧಾರಣೆಗಳ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತಂದರು. ಜಾತಿ, ಬಣ್ಣ, ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಾಸವಿದ್ದರೂ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಬಸವಣ್ಣನವರು ಸಾರಿದರು ಎಂದರು

    ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ  ಡಾ ಎಂ ನಂಜುಂಡಸ್ವಾಮಿ ಮಾತನಾಡಿ, ಮಹಾತ್ಮರ ತತ್ವ ಆದರ್ಶಗಳ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಎಂದರು.

    ಕಾರ್ಯಕ್ರಮದಲ್ಲಿ ಡಾ. ಎಮ್ ಎಮ್ ಹುದ್ದಾರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಆಯ್. ಕ್ಯೂ. ಎ. ಸಿ ಸಂಯೋಜಕರಾದ ಪ್ರೊ ಶ್ರೀಮತಿ ಜಿ.ಎಂ. ನಾವದಗಿ,  ಸಂಸ್ಕೃತಿಕ ಚಟುವಟಿಕೆ ಸಂಯೋಜಕರಾದ  ಪ್ರೊ. ಆರ್‌ಪಿ ಮೇಲಿನಮನಿ ಹಾಗೂ ಮಹಾ ವಿದ್ಯಾಲಯದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸತ್ತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts