More

    37 ವರ್ಷದ ಬಳಿಕ ಪದಕ ಗೆದ್ದ ಬ್ಯಾಡ್ಮಿಂಟನ್ ತಂಡ: ಫೈನಲ್‌ನಲ್ಲಿ ಚೀನಾ ಎದುರು ವೀರೋಚಿತ ಸೋಲು

    ಹಾಂಗ್‌ರೆೌ: ಭಾರತದ ಪುರುಷರ ಷಟ್ಲರ್ ತಂಡ ನಿಕಟ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಆತಿಥೇಯ ಚೀನಾ ಎದುರು 2-3ರಿಂದ ಸೋತು ಬೆಳ್ಳಿ ಪದಕಕ್ಕೆ ಸಮಾಧಾನ ಕಂಡಿದೆ. ಇದರೊಂದಿಗೆ ಏಷ್ಯಾಡ್‌ನಲ್ಲಿ ಚೊಚ್ಚಲ ಚಿನ್ನ ಗೆಲ್ಲುವ ಅವಕಾಶ ಕೈಚೆಲ್ಲಿದರೂ, ಪುರುಷ ಷಟ್ಲರ್‌ಗಳ ತಂಡ 37 ವರ್ಷದ ಬಳಿಕ ಪದಕ ಸಾಧನೆ ಮಾಡಿದೆ.

    https://x.com/BAI_Media/status/1708484414639108210?s=20

    ೈನಲ್ ಪಂದ್ಯದ ಮೊದಲ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ 22-20, 14-21, 21-18ರಿಂದ ಯುಕಿ ಶೀ ಎದುರು ಜಯಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ತಂದರು. ನಂತರ ಡಬಲ್ಸ್‌ನಲ್ಲಿ ವಿಶ್ವ ನಂ. 3 ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ 21-15, 21-18 ನೇರ ಗೇಮ್‌ಗಳಿಂದ ವಿಶ್ವ ನಂ.2 ಲಿಯಾಂಗ್ ವೀಕೆಂಗ್- ಚಾಂಗ್ ವಾಂಗ್ ಜೋಡಿಯನ್ನು ಮಣಿಸಿತು. ಇದರೊಂದಿಗೆ ಭಾರತ 2-0 ಮುನ್ನಡೆ ಕಂಡು ಆತಿಥೇಯ ಚೀನಾಗೆ ಆಘಾತ ನೀಡುವ ನಿರೀಕ್ಷೆ ಮೂಡಿಸಿತು.

    https://x.com/BAI_Media/status/1708516851654046033?s=20

    ಕಿಡಂಬಿ, ಮಿಥುನ್‌ಗೆ ಸೋಲು: ಸೆಮೀಸ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು ತಂದಿದ್ದ ಕಿಡಂಬಿ ಶ್ರೀಕಾಂತ್ ಮುಖಾಮುಖಿಯ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಕಣಕ್ಕಿಳಿದರು. ಮೊದಲ ಗೇಮ್‌ನಲ್ಲಿ 22-24 ರಿಂದ ಆಲ್ ಇಂಗ್ಲೆಂಡ್ ಚಾಂಪಿಯನ್ ಲೀ ಶಿ ಫೆಂಗ್ಗ್ ಉತ್ತಮ ಪೈಪೋಟಿ ನೀಡಿದರು. ಬಳಿಕ 2ನೇ ಗೇಮ್‌ನಲ್ಲಿ ಲಯ ತಪ್ಪಿದ ಕಿಡಂಬಿ 9-21ರಿಂದ ನಿರಾಸೆ ಮೂಡಿಸಿದರು. ಡಬಲ್ಸ್‌ನಲ್ಲಿ ಧ್ರುವ ಕಪಿಲ ಮತ್ತು ಕನ್ನಡಿಗ ಸಾಯಿ ಪ್ರತೀಕ್ 6-21, 15-21ರಿಂದ ವಿಶ್ವ ನಂ. 8 ಲಿಯು ಯು ಚೆನ್- ವೂ ಕ್ಸುವಾನ್ ಯೀ ಜೋಡಿಗೆ ಸುಲಭ ತುತ್ತಾದರು. ಇದರೊಂದಿಗೆ ಪಂದ್ಯ 2-2 ಸಮಬಲ ಕಂಡಿತು.
    ಗಾಯದ ಸಮಸ್ಯೆಯಿಂದ ಪದಕ ಸುತ್ತಿನಿಂದ ಹೊರಗುಳಿದ ಎಚ್‌ಎಸ್ ಪ್ರಣಯ್ ಬದಲಿಗೆ ಮೂರನೇ ಸಿಂಗಲ್ಸ್ ಪಂದ್ಯವನ್ನಾಡಿದ ಕನ್ನಡಿಗ ಮಿಥುನ್ ಮಂಜುನಾಥ್ 12-21, 14-21 ರಿಂದ ವೆಂಗ್ ಹಾಂಗ್ ಯಾಂಗ್‌ಗೆ ಶರಣಾದರು. ಸತತ 3 ಪಂದ್ಯಗಳ ಸೋಲಿನೊಂದಿಗೆ ಭಾರತದ ಚಿನ್ನದ ನಿರೀಕ್ಷೆ ಹುಸಿಯಾಯಿತು.

    https://x.com/BAI_Media/status/1708513148981194803?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts