More

    ಬಡವರಿಗೆ ನಿವೇಶನ ಸೌಲಭ್ಯ ಕಲ್ಪಿಸಲು ಪಟ್ಟು, ಕರವೇ ಸ್ವಾಭಿಮಾನಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ನಿವೇಶನ ರಹಿತ ಬಡವರಿಗೆ ನಿವೇಶನ ಸೌಲಭ್ಯ ಕಲ್ಪಿಸುವ ಜತೆಗೆ ಭೂ ಕಬಳಿಕೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೇವನಹಳ್ಳಿ ಸಮೀಪದ ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಕರವೇ ಸ್ವಾಭಿಮಾನಸೇನೆ ಪ್ರತಿಭಟನೆ ನಡೆಸಿತು.


    ದೇವನಹಳ್ಳಿಯ ರಾಯಸಂದ್ರದಲ್ಲಿನ ಸರ್ಕಾರಿ ಭೂಮಿಯಲ್ಲಿ ನೂರಾರು ಕುಟುಂಬಗಳು ಗುಡಿಸಲು ಹಾಕಿಕೊಂಡು ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಿವೆ. ಇಂತಹ ಬಡವರಿಗೆ ನಿವೇಶನ ಕೊಡಲು ಬದ್ಧತೆ ಇಲ್ಲದ ಅಧಿಕಾರಿಗಳು, ಅಶಕ್ತರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಅಧ್ಯಕ್ಷ ನಿಂಗರಾಜ್ ಗೌಡ ಹೇಳಿದರು.


    ದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸರ್ಕಾರಿ ಜಾಗ, ರಾಜಕಾಲುವೆ ಮತ್ತು ಸ್ಮಶಾನ ಭೂಮಿ, ದೇವಸ್ಥಾನ ಜಾಗಗಳನ್ನು ಭೂಕಬಳಿಕೆದಾರರು ಅಕ್ರಮಿಸಿಕೊಳ್ಳಲು ಅಧಿಕಾರಿಗಳೇ ನೆರವಾಗಿದ್ದಾರೆ ಎಂದು ದೂರಿದರು.


    ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕೆ.ಎಸ್.ಅನುರಾಧಾ ಮಾತನಾಡಿ, ಕೆಲವು ಭೂಕಬಳಿಕೆದಾರರು ಅಧಿಕಾರಿಗಳ ಜತೆ ಸೇರಿ ಬಡವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದರು.


    ಭೂಕಬಳಿಕೆದಾರರು ಮತ್ತು ಕಂದಾಯ ಇಲಾಖೆಯ ಭಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಮತ್ತು ಭ್ರಷ್ಟಚಾರ ನಿಗ್ರಹ ದಳಕ್ಕೆ ದೂರು ನೀಡಲಾಗುವುದು ಎಂದರು.


    ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಲತಾ ಮಾತನಾಡಿ, ಸ್ಥಳ ಪರಿಶೀಲಿಸಿದ ಬಳಿಕ ತಹಸೀಲ್ದಾರರಿಂದ ವಿವರ ಪಡೆದು ಕ್ರಮ ಕೈಗೊಲ್ಳುವುದಾಗಿ ಭರವಸೆ ನೀಡಿದರು.


    ಸಂಘಟನೆ ತಾಲೂಕು ಅಧ್ಯಕ್ಷ ರಾಯಸಂದ್ರ ಸೋಮು, ಉಪಾಧ್ಯಕ್ಷರಾದ ಸಂತೋಷಗೌಡ, ಸುರೇಶಗೌಡ, ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸಗೌಡ, ಮಹಿಳಾ ಘಟಕದ ಉಪಾಧ್ಯಕ್ಷೆ ಶಾರದಾಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಬಿದಲೂರಿನ ಬಿ.ಎ. ಮಂಜುನಾಥ, ಪದಾಧಿಕಾರಿಗಳಾದ ಶ್ರೀನಿವಾಸ್, ಮುನಿನರಸಿಂಹಯ್ಯ, ಮುನಿಶಾಮಪ್ಪ, ದೊಡ್ಡನರಸಿಂಹ , ಮುನಿಕೃಷ್ಣ, ದೇವನಹಳ್ಳಿಯ ಆರ್.ಅಭಿಷೇಕ್, ಹರ್ಷಿತ್ ವಿ, ಪ್ರಶಾಂತ್ ಕೆ., ನವೀನ್‌ಕುಮಾರ್, ನಾಸೀರ್ ಅಹಮದ್, ಪೆದ್ದನಹಳ್ಳಿಯ ಕವಿತಾ, ಪದ್ಮಾವತಿ, ಬ್ಯಾಡರಹಳ್ಳಿಯ ಲೋಕೇಶ್, ಮಮತಾ, ಸಿಂಗ್ರಹಳ್ಳಿ ಕೋದಂಡರಾಮಯ್ಯ, ದೊಡ್ಡಬಳ್ಳಾಪುರದ ಲಕ್ಷ್ಮೀ, ಅಮರಾವತಿ, ಅರುಣ್‌ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts