More

    ಬಡವರ ಮನೆ ಪ್ರಾಧಿಕಾರ ರಚನೆ ಮಾಡುವೆ

    ಬೆಳಗಾವಿ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಗೆಲ್ಲಿಸಿದರೆ ಬಡವರ ಮನೆ ಪ್ರಾಧಿಕಾರ ನಿರ್ಮಾಣ ಮಾಡಿ ಕಡಿಮೆ ದರದಲ್ಲಿ ಸೂರು ಕಲ್ಪಿಸಿಕೊಡಲಾಗುವುದು ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಭರವಸೆ ನೀಡಿದ್ದಾರೆ.

    ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಪ್ರಚಾರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮಹಾನಗರದಲ್ಲಿ ಸಾಕಷ್ಟು ಜನರಿಗೆ ವಾಸಿಸಲು ಮನೆಗಳು ಇಲ್ಲ. ನಗರಾಭಿವೃದ್ಧಿ ಪ್ರಾಧಿಕಾರ ಇದ್ದರೂ ಅದು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಪ್ರತಿ ಬಡವನಿಗೆ ಕಡಿಮೆ ಮನೆ ಕಲ್ಪಿಸಿಕೊಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡುತ್ತಿದೆ. ಅಲ್ಲದೆ, ಬಡವರ ಪರವಾಗಿ ಪಕ್ಷ ನಿರಂತರವಾಗಿ ಹೋರಾಟ ನಡೆಸಲಿದೆ ಎಂದರು.

    ಬೆಳಗಾವಿ ನಗರದಲ್ಲಿ ಯುವಕರಿಗೆ ಉದ್ಯೋಗಾವಕಾಶ ಇಲ್ಲ. ನೆರೆಯ ಪುಣೆ ಹಾಗೂ ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ. ಉದ್ಯೋಗ ಸೃಷ್ಟಿಯಾಗಲು ನವೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಯುವಜನರಿಗೆ ಇಲ್ಲಿಯೇ ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

    ನಗರದಲ್ಲಿ ಕುಡಿಯುವ ನೀರಿನ ಸೌಲಭ್ಯ ಸಾಕಷ್ಟಿದೆ. ಅದನ್ನು ವ್ಯವಸ್ಥಿತವಾಗಿ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಒಳಚರಂಡಿ ಸಮಸ್ಯೆಯೂ ಉಲ್ಬಣವಾಗಿದೆ. ನನಗೆ ಜನರು ಆಶೀರ್ವಾದ ಮಾಡಿದರೆ ಪ್ರಾಮಾಣಿಕವಾಗಿ ಈ ಸಮಸ್ಯೆಗೆ ಮುಕ್ತಿ ನೀಡುತ್ತೇನೆ. ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ, ನಗರದ ಹೊರ ವಲಯದಲ್ಲಿ ಟ್ರಕ್ ಟರ್ಮಿನಲ್ ಮಾಡಿ ಸಂಚಾರ ಸಮಸ್ಯೆ ನಾಂದಿ ಹಾಡಲಾಗುವುದು ಎಂದು ತಿಳಿಸಿದರು.

    ಯುವಕರಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿ ಲಕ್ಷಾಂತರ ಜನರನ್ನು ಮುಖ್ಯವಾಹಿನಿಗೆ ತಂದಿರುವ ನಾಗನೂರುಮಠದ ಲಿಂ. ಡಾ. ಶಿವಬಸವ ಸ್ವಾಮೀಜಿ ಅವರು ಸಾಕಷ್ಟು ಜನರಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಹೆಸರು ಶಾಶ್ವತವಾಗಿ ಉಳಿಯಬೇಕು. ಮುಂದಿನ ಪೀಳಿಗೆ ಅವರ ಹೆಸರು ಪ್ರಸ್ತಾಪ ಮಾಡಬೇಕು. ಆದ್ದರಿಂದ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಬಸವ ಸ್ವಾಮೀಜಿ ಅವರ ಹೆಸರು ಇಡಲು ನಿರಂತರವಾಗಿ ಹೋರಾಟ ನಡೆಸುವೆ ಎಂದು ಟೋಪಣ್ಣವರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts