More

    ಕಾಂಗ್ರೆಸ್ ಮಡಿಲಿಗೆ ಬಾದಾಮಿ ಪುರಸಭೆ

    ಬಾದಾಮಿ: ತೀವ್ರ ಕುತೂಹಲ ಮೂಡಿಸಿದ್ದ ಬಾದಾಮಿ ಪುರಸಭೆಯ ಅಧ್ಯಕ್ಷರಾಗಿ 14ನೇ ವಾರ್ಡ್‌ನ ಮಂಜುನಾಥ ಹೊಸಮನಿ, ಉಪಾಧ್ಯಕ್ಷರಾಗಿ 13ನೇ ವಾರ್ಡ್‌ನ ರಾಮವ್ವ ಮಾದರ (ಪೂಜಾರ) ಮೊದಲ ಅವಧಿಗೆ ಸೋಮವಾರ ಆಯ್ಕೆಯಾದರು.

    ಇಲ್ಲಿನ ಪುರಸಭೆ ಸಭಾ ಭವನದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಮಂಜುನಾಥ ಹೊಸಮನಿ, ಬಿಜೆಪಿಯಿಂದ ಬಸವರಾಜ ತೀರ್ಥಪ್ಪನವರ ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ರಾಮವ್ವ ಮಾದರ, ಬಿಜೆಪಿಯಿಂದ ಪದ್ಮಾವತಿ ಕೆರಿಹೊಲದ ನಾಮಪತ್ರ ಸಲ್ಲಿಸಿದ್ದರು.

    ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿದ್ದರಿಂದ ಶಾಸಕ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸದಸ್ಯರು ಕೈ ಎತ್ತುವ ಹಾಗೂ ಸಹಿ ಸಂಗ್ರಹಣೆ ಮೂಲಕ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು.

    ಮಂಜುನಾಥ ಹೊಸಮನಿ, ರಾಮವ್ವ ಮಾದರ ಶಾಸಕ ಸಿದ್ದರಾಮಯ್ಯ ಅವರ ಮತ ಸೇರಿ 14 ಮತಗಳನ್ನು ಪಡೆದು ಆಯ್ಕೆಯಾದರು. ನಾಮಪತ್ರ ಸಲ್ಲಿಸಿದ ಇಬ್ಬರು ಸೇರಿ ಎಲ್ಲ ಬಿಜೆಪಿಯ ಸದಸ್ಯರು ಗೈರು ಉಳಿಯುವ ಮೂಲಕ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ.

    ಚುನಾವಣೆ ಅಧಿಕಾರಿ, ತಹಸೀಲ್ದಾರ್ ಸುಹಾಸ್ ಇಂಗಳೆ ಕಾರ್ಯನಿರ್ವಹಿಸಿದರು. ಭೂಸ್ವಾಧೀನ ಅಧಿಕಾರಿ ಯಶವಂತ, ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಇದ್ದರು.

    ವಿಜಯೋತ್ಸವ
    ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.

    ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡರ, ಮಧು ಯಡ್ರಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಯಲಿಗಾರ, ಡಾ.ಎಂ.ಜಿ.ಕಿತ್ತಲಿ, ರಾಜಮಹಮ್ಮದ ಬಾಗವಾನ, ಪಾಂಡು ಕಟ್ಟಿಮನಿ, ಪರಶುರಾಮ ರೋಣದ, ಶಂಕರ ಕನಕಗಿರಿ, ಮಹಾಂತೇಶ ಹಟ್ಟಿ, ಮಕ್ತುಮ್ ತಾಂಬೋಳಿ, ಪುರಸಭೆ ಸದಸ್ಯರು, ಮುಖಂಡರು ಇದ್ದರು.

    ಪುರಸಭೆ ಎಲ್ಲ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಆಡಳಿತಕ್ಕೆ ವೇಗ ತರುವುದರ ಮೂಲಕ ಪಟ್ಟಣದ ಜನರ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
    ಮಂಜುನಾಥ ಹೊಸಮನಿ ಪುರಸಭೆ ನೂತನ ಅಧ್ಯಕ್ಷ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts