More

    ಕಳಪೆ ಕಾಮಗಾರಿಗೆ ಗುತ್ತಿಗೆದಾರರೇ ಹೊಣೆ

    ಬಾದಾಮಿ: ಒಂದೇ ಸೂರಿನಡಿ ವಿವಿಧ ಇಲಾಖೆಗಳು ಕೆಲಸ ಮಾಡಲು ಪಟ್ಟಣದ ಎಂಎಲ್‌ಬಿಸಿ ಆವರಣದಲ್ಲಿ ಸುಸಜ್ಜಿತವಾದ ತಾಲೂಕು ಆಡಳಿತ ಭವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ನಿಗದಿತ ಕಾಲಿಮಿತಿಯೊಳಗೆ ಪೂರ್ಣಗೊಳಿಸಬೇಕು. ಕಳಪೆಯಾದರೆ ಸಂಬಂಧಿಸಿದ ಗುತ್ತಿಗೆದಾರರೇ ಹೊಣೆಗಾರರು ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.

    ಎಂಎಲ್‌ಬಿಸಿ ಆವರಣದಲ್ಲಿ 10 ಕೋಟಿ ರೂ. ಮೊತ್ತದ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಿ.ಬಿ.ಚಿಮ್ಮನಕಟ್ಟಿಯವರು ಶಾಸಕರಾಗಿದ್ದಾಗ ಹಳೆಯ ತಹಸೀಲ್ದಾರ್ ಕಟ್ಟಡವನ್ನು ತೆರವುಗೊಳಿಸಿ ತಾಲೂಕು ಆಡಳಿತ ಭವನ ಕಟ್ಟಡ ನಿರ್ಮಿಸಲು ಮಂಜೂರಾತಿ ದೊರೆತಿತ್ತು. ನಾನು ಬಂದು ಪೂಜೆ ಮಾಡಿದ್ದೆ. ಆದರೆ, ಪ್ರಾಚ್ಯವಸ್ತು ಇಲಾಖೆಯವರು ಕಟ್ಟಡ ನಿರ್ಮಿಸಲು ಅವಕಾಶ ಕೊಡಲಿಲ್ಲ. ನಾನು ಸಂಬಂಧಿಸಿದವರ ಜತೆಗೆ ಮಾತನಾಡಿದ್ದೆ. ಆದರೂ ಒಪ್ಪಲಿಲ್ಲ. ಆದ್ದರಿಂದ ಪರ್ಯಾಯವಾಗಿ ನೀರಾವರಿ ಇಲಾಖೆಯಿಂದ ಕಂದಾಯ ಇಲಾಖೆಗೆ 3 ಎಕರೆ ಜಾಗವನ್ನು ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.

    ಮಂತ್ರಿಗಳು, ಲೋಕಸಭಾ ಸದಸ್ಯರು ಬರಬೇಕಾಗಿತ್ತು, ಬರಲಿಲ್ಲ. ಹಾಗಂತ ಕಾಯಲು ಆಗಲ್ಲ. ಬಹಳ ದಿನಗಳಿಂದ ನನೆಗುದಿಗೆ ಬಿದ್ದ ಕಾಮಗಾರಿಯನ್ನು ಚಾಲನೆ ನೀಡಲಾಗಿದೆ. ಮೊದಲಿದ್ದ ಕಟ್ಟಡವನ್ನು ಸರ್ಕಾರಿ ಕಾಲೇಜಿಗೆ ಕೊಡಲಾಗುವುದು. ನಾನು ಕ್ಷೇತ್ರದ ಶಾಸಕನಾಗಿ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಮಾಜಿ ಸಚಿವರಾದ ಎಚ್.ವೈ.ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಎಂ.ಬಿ. ಹಂಗರಗಿ, ಹೊಳೆಬಸು ಶೆಟ್ಟರ, ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಎಂ.ಡಿ. ಯಲಿಗಾರ, ಬಸವರಾಜ ಬ್ಯಾಹಟ್ಟಿ, ಪಿ.ಆರ್. ಗೌಡರ, ತಾಪಂ ಅಧ್ಯಕ್ಷೆ ರೇಣುಕಾ ಕೊಳ್ಳನ್ನವರ, ರಾಜಮಹಮ್ಮದ್ ಬಾಗವಾನ, ಮಧು ಯಡ್ರಾಮಿ, ರೇವಣಸಿದ್ದಪ್ಪ ನೋಟಗಾರ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts