More

    ಶೂದ್ರರು ಯಾರು? ಪುಸ್ತಕ ಬಿಡುಗಡೆ

    ಬಾದಾಮಿ: ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನೇಕ ಆಯೋಗಗಳನ್ನು ರಚಿಸುತ್ತದೆ. ಆದರೆ, ವರದಿ ಜಾರಿಯಾಗುವುದೇ ಇಲ್ಲ ಎಂದು ಸತ್ಯ ಶೋಧಕ ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಸತ್ಯ ಶೋಧಕ ಸಂಘದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ‘ಶೂದ್ರರು ಯಾರು?’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯಿಸಿ ಅವರು ಮಾತನಾಡಿದರು.

    ಹಾವನೂರ, ದ್ವಾರಕಾನಾಥ, ರವಿ ವರ್ಮ ಕುಮಾರ, ವೆಂಕಟರಾಮ, ಎಚ್.ಕಾಂತರಾಜ ಆಯೋಗ ವರದಿಗಳನ್ನು ಸಲ್ಲಿಸಿದೆ. ಆದರೆ, ಅವು ಇದುವರೆಗೂ ಜಾರಿ ಆಗಿಯೇ ಇಲ್ಲ ಎಂದರು.

    ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಜಿ. ಹಿರೇಮಠ, ಕಾಳಿದಾಸ ಕಾಲೇಜಿನ ಪ್ರಾಚಾರ್ಯ ನಾಗರಾಜ ಹೊಟ್ಟಿ, ಜಿಪಂ ಮಾಜಿ ಉಪಾಧ್ಯಕ್ಷ ಡಾ.ಎಂ.ಎಚ್.ಚಲವಾದಿ, ನಿವೃತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ, ಅಂಜುಮನ್ ಸಂಸ್ಥೆ ಚೇರ್ಮನ್ ಜಮೀಲ್ ನಾಯಕ, ಲಕ್ಷ್ಮಣ ಮರಡಿತೋಟದ, ಅಕ್ಬರ್ ಇಂಡಿಕರ್, ಕೃಷ್ಣಗೌಡ ನಾಡಗೌಡ, ಮುನ್ನಾಬಾಯಿ ಸತಾರಕರ, ಹೇಮಂತ ದೊಡಮನಿ, ಬಿ.ಡಿ. ತಿಮ್ಮನಗೌಡರ ಸೇರಿ ಮತ್ತಿತರರು ಉಪಸ್ಥಿತರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts