More

    ಕೆಟ್ಟ ಅಧಿಕಾರಿಗಳಿಂದ ನ್ಯಾಯ ಮರೀಚಿಕೆ

    ಗೋಕಾಕ: ಇಂದಿನ ವ್ಯವಸ್ಥೆಯಲ್ಲಿ ಎಜ್ಯುಕೇಟೆಡ್-ಅನ್‌ಎಜುಕೇಟೆಡ್ ಕ್ರಿಮಿನಲ್‌ಗಳನ್ನು ಟ್ರೀಟ್ ಮಾಡುವ ವಿಧಾನವೇ ಬೇರೆ ಇದೆ ಎಂದು ಐಪಿಎಸ್ ಅಧಿಕಾರಿ ರವಿ ಚಣ್ಣನ್ನವರ ಹೇಳಿದರು.

    ನಗರದ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಸೋಮವಾರ ಶೂನ್ಯ ಸಂಪಾದನ ಮಠದ 16ನೇ ಶರಣ ಸಂಸ್ಕೃತಿ ಉತ್ಸವದ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬಡವನ ಮೇಲೆ ಎಲ್ಲ ಪ್ರಯೋಗಗಳೂ ನಡೆಯುತ್ತವೆ. ಶ್ರೀಮಂತನ ಬೆನ್ನಿಗೆ ನಿಲ್ಲುವವರು, ಪ್ರಭಾವ ಬೀರುವವರ ಸಂಖ್ಯೆ ಹೆಚ್ಚಿದೆ. ಕೆಟ್ಟ ಕಾನೂನಿದ್ದರೂ ಒಳ್ಳೆಯ ಅಧಿಕಾರಿ ಕೈಯಲ್ಲಿ ಪ್ರಾಮಾಣಿಕರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಅಂತೆಯೇ ಒಳ್ಳೆಯ ಕಾನೂನಿದ್ದರೂ ಕೆಟ್ಟ ಅಧಿಕಾರಿ ಕೈಯಲ್ಲಿ ನ್ಯಾಯ ಸಿಗುವುದಿಲ್ಲ. ಮನುಷ್ಯರನ್ನು ಸಮಾಜದ ಆಸ್ತಿಯಾಗಿ ಮಾಡುವತ್ತ ನಮ್ಮ ಚಿತ್ತ ಇರಬೇಕು ಎಂದರು.

    ಶ್ರೀಮಠದಿಂದ ರವಿ ಚಣ್ಣನ್ನವರ ಅವರನ್ನು ಸನ್ಮಾನಿಸಲಾಯಿತು. ಮರಡಿಮಠದ ಪವಾಡೇಶ್ವರ ಶ್ರೀ ಆಶೀರ್ವಚನ ನೀಡಿದರು. ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಶ್ರೀ ವಹಿಸಿದ್ದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪ್ರಶಾಂತ ಕುರಬೇಟ, ಲಕ್ಕಪ್ಪ ಗೌಡರ, ಕೀರ್ತಿ ಸಸಾಲಟ್ಟಿ, ಪವಿತ್ರಾ ಹತ್ತರವಾಟ, ರಿಯಾಜ್ ನದಾಫ್, ಸ್ನೇಹಲ ಗರಗಟ್ಟಿ, ಮಾಲಾ ಐದುಡ್ಡಿ ಇದ್ದರು. ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಶರಣರು, ದಾಸೋಹ ಮೂರ್ತಿಗಳಾದ ಚಂದ್ರಶೇಖರ ಕೊಣ್ಣೂರ, ಪ್ರಸನ್ನ ತಂಬಾಕೆ, ಮಗನನಾಲ್ ಪಟೇಲರನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts