More

    ಅರವಿಂದ್​ ಕೇಜ್ರಿವಾಲ್​ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಕಾಣಿಸಿಕೊಂಡ ‘ಬೇಬಿ ಮಫ್ಲರ್​ಮನ್​’; ಈತ ಸುಮ್ಮನೆ ಬಂದಿದ್ದಲ್ಲ…ಆಪ್​ ಅಧಿಕೃತ ಆಹ್ವಾನವಿತ್ತು !

    ನವದೆಹಲಿ: ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನ ಅರವಿಂದ್ ಕೇಜ್ರಿವಾಲ್​ ಅವರಂತೆಯೇ ವೇಷ ಧರಿಸಿದ್ದ ಪುಟ್ಟ ಮಗುವಿನ ಫೋಟೋ ಕೂಡ ಸಿಕ್ಕಾಪಟೆ ವೈರಲ್​ ಆಗಿತ್ತು.

    ಅರವಿಂದ್ ಕೇಜ್ರಿವಾಲ್​ರಂತೆ ತಲೆಗೆ ಕಪ್ಪು ಮಫ್ಲರ್ ಕಟ್ಟಿಕೊಂಡು, ಆಪ್​ ಟೊಪ್ಪಿ ಹಾಕಿಕೊಂಡು, ಕೇಜ್ರಿವಾಲ್​ ಧರಿಸುವ ತರಹದ್ದೇ ಕನ್ನಡಕ ಹಾಕಿಕೊಂಡು, ಸಾಲದ್ದಕ್ಕೆ ಮೀಸೆಯನ್ನೂ ಬಳಿದುಕೊಂಡು ದೆಹಲಿಯ ಆಪ್​ ಕಚೇರಿ ಎದುರು ಅಂದು ಸಂಭ್ರಮಾಚರಣೆಯ ಹೊತ್ತಲ್ಲಿ ಪಾಲ್ಗೊಂಡಿದ್ದ ಪುಟ್ಟ ಬಾಲಕ ಇಂಟರ್​ನೆಟ್​ನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ.

    ಇದೇ ಮಫ್ಲರ್​ ಬೇಬಿ, ಚೋಟಾ ಕೇಜ್ರಿವಾಲ್​ ಇಂದು ಕೂಡ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅರವಿಂದ್​ ಕೇಜ್ರಿವಾಲ್​ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾನೆ. ಆದರೆ ವಿಶೇಷವೆಂದರೆ ಆತ ಸುಮ್ಮನೆ ಬಂದಿಲ್ಲ.

    ಚುನಾವಣಾ ಫಲಿತಾಂಶದ ದಿನ ಈ ಬಾಲಕನ ವೇಷಕ್ಕೆ ಜನ ಭಲೇ ಎಂದಿದ್ದರು. ಒಂದೇ ದಿನದಲ್ಲಿ ಇವನ ಪ್ರಸಿದ್ಧಿಯನ್ನು ಗುರುತಿಸಿದ ಆಮ್ ಆದ್ಮಿ ಪಕ್ಷ, ಅರವಿಂದ್​ ಕೇಜ್ರಿವಾಲ್​ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಾಲಕನಿಗೆ ಅಧಿಕೃತ ಆಹ್ವಾನ ನೀಡಿತ್ತು.

    ಇಂದು ಕೂಡ ಅರವಿಂದ್ ಕೇಜ್ರಿವಾಲ್​ ಅವರ ವೇಷದಲ್ಲಿಯೇ ಈತ ಬಂದಿದ್ದಾನೆ. ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ವೇದಿಕೆ ಸುತ್ತಮುತ್ತ ಓಡಾಡಿದ್ದಾನೆ. ಕೆಲವರು ಇವನೊಟ್ಟಿಗೆ ಸೆಲ್ಫೀ, ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಲಿಟ್ಲ್​ ಮಫ್ಲರ್​ಮನ್​, ಬೇಬಿ ಅರವಿಂದ್ ಕೇಜ್ರಿವಾಲ್​ ಎಂದು ಆತನನ್ನು ಕರೆಯುತ್ತಿದ್ದಾರೆ.
    ಆಪ್​ ಸಂಸದ ರಾಘವ್​ ಚಾಧಾ ಕೂಡ ಪುಟ್ಟ ಹುಡುಗನೊಂದಿಗೆ ಫೋಟೋ ತೆಗೆದುಕೊಂಡು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts