More

    ಕೇಂದ್ರ ಸಚಿವ ಬಾಬುಲ್ ಸುಪ್ರಿಯೋಗೆ ಕರೊನಾ ಪಾಸಿಟೀವ್; ಟಿಎಂಸಿ ಅಭ್ಯರ್ಥಿ ಸಾವು

    ಕೊಲ್ಕತಾ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಕೊಲ್ಕತಾದ ಟಾಲಿಗುಂಜ್​ನ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರಿಗೆ ಕರೊನಾ ಸೋಂಕು ತಗುಲಿದೆ. ತಮಗೆ ಮತ್ತು ತಮ್ಮ ಪತ್ನಿಗೆ ಕರೊನಾ ಪಾಸಿಟೀವ್ ಬಂದಿದೆ ಎಂದು ಸುಪ್ರಿಯೋ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಹಾಲಿ ಅಸನ್ಸೋಲ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಸುಪ್ರಿಯೋ ಅವರಿಗೆ ಎರಡನೇ ಬಾರಿ ಕರೊನಾ ಸೋಂಕು ತಗುಲಿದ್ದು, ನಾಳೆ ಅಸನ್ಸೋಲ್​ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಮತದಾನದಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ, “ಟಿಎಂಸಿಯ ಗೂಂಡಾಗಳು ಸುಗಮ ಮತದಾನಕ್ಕೆ ಅಡ್ಡಿಪಡಿಸಲು ವ್ಯಾಕುಲರಾಗಿರುವ ಸಮಯದಲ್ಲಿ ನಾನು ಮತದಾನದ ಸ್ಥಳಗಳಲ್ಲಿರಬೇಕಿತ್ತು” ಎಂದೂ ಸುಪ್ರಿಯೋ ಟ್ವೀಟ್ ಮಾಡಿದ್ದಾರೆ. ಸುಪ್ರಿಯೋ ಅಭ್ಯರ್ಥಿಯಾಗಿರುವ ಟಾಲಿಗುಂಜ್​ ಕ್ರೇತ್ರಕ್ಕೆ ಈಗಾಗಲೇ ಮತದಾನ ಮುಗಿದಿದೆ.

    ಇದನ್ನೂ ಓದಿ: 551 ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳು

    ಮತ್ತೊಂದೆಡೆ, ಬಂಗಾಳ ಚುನಾವಣೆಯಲ್ಲಿ ಖರದಾಹದಿಂದ ಟಿಎಂಸಿ ಅಭ್ಯರ್ಥಿಯಾಗಿದ್ದ ಕಜಲ್ ಸಿನ್ಹಾ ಅವರು ಕರೊನಾಗೆ ಬಲಿಯಾಗಿದ್ದಾರೆ. ಟಿಎಂಸಿ ಮುಖ್ಯಸ್ಥೆ ಹಾಗೂ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, “ಸಿನ್ಹಾ ಅವರು ಜನರ ಸೇವೆಯಲ್ಲಿ ನಿರತರಾಗಿದ್ದರು. ಚುನಾವಣೆಗಾಗಿ ಉತ್ತಮ ಪ್ರಚಾರ ಕೂಡ ಮಾಡಿದ್ದರು. ಬಹುಕಾಲದಿಂದ ಟಿಎಂಸಿ ಸದಸ್ಯರಾಗಿದ್ದರು” ಎಂದು ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)

    ಕೋವಾಕ್ಸಿನ್ ಹೆಚ್ಚು ದುಬಾರಿ ! ಖಾಸಗಿ ಆಸ್ಪತ್ರೆಗಳಿಗೆ ಒಂದು ಡೋಸ್​​ಗೆ 1,200 ರೂ. ದರ ನಿಗದಿ

    ಎಲ್ಲರನ್ನೂ ಆಕ್ಸಿಜನ್ ಕೇಳುತ್ತಿರುವ ದೆಹಲಿ ಸರ್ಕಾರ ಮಂಜೂರಾದ ಪ್ಲ್ಯಾಂಟ್​ಗಳನ್ನು ಇನ್ನೂ ಸ್ಥಾಪಿಸಿಲ್ಲ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts