ಕೋವಾಕ್ಸಿನ್ ಹೆಚ್ಚು ದುಬಾರಿ ! ಖಾಸಗಿ ಆಸ್ಪತ್ರೆಗಳಿಗೆ ಒಂದು ಡೋಸ್​​ಗೆ 1,200 ರೂ. ದರ ನಿಗದಿ

ನವದೆಹಲಿ : ಭಾರತ್ ಬಯೋಟೆಕ್​​ ನ ಕೋವಾಕ್ಸಿನ್​ ಕರೊನಾ ಲಸಿಕೆಗೆ ತೆರೆದ ಮಾರುಕಟ್ಟೆಯ ಬೆಲೆಯನ್ನು ಘೋಷಿಸಲಾಗಿದೆ. ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್​ಗೆ 600 ರೂ.ಗಳಂತೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗಳಂತೆ ಮಾರಾಟ ಮಾಡುವುದಾಗಿ ಕಂಪೆನಿ ಹೇಳಿಕೆ ನೀಡಿದೆ. ಉತ್ಪಾದನೆಯ ಅರ್ಧದಷ್ಟು ಲಸಿಕೆಗಳನ್ನು ಈ ಬೆಲೆಗಳಲ್ಲಿ ಭಾರತ್ ಬಯೋಟೆಕ್ ಮಾರಲು ಬಯಸಿದ್ದು, ಉಳಿದ ಅರ್ಧದಷ್ಟನ್ನು ಕೇಂದ್ರ ಸರ್ಕಾರಕ್ಕೆ ಒಂದು ಡೋಸ್​ಗೆ 150 ರೂ.ಗಳಂತೆ ಮಾರಾಟ ಮಾಡಲಿದೆ. ಇದುವರೆಗೆ ಭಾರತದಲ್ಲಿ ನೀಡಲಾಗಿರುವ 13.81 ಕೋಟಿ ಲಸಿಕೆಯ ಡೋಸ್​ಗಳಲ್ಲಿ ಶೇ.9.24 … Continue reading ಕೋವಾಕ್ಸಿನ್ ಹೆಚ್ಚು ದುಬಾರಿ ! ಖಾಸಗಿ ಆಸ್ಪತ್ರೆಗಳಿಗೆ ಒಂದು ಡೋಸ್​​ಗೆ 1,200 ರೂ. ದರ ನಿಗದಿ