More

    ಬಾಬ್ರಿ ಮಸೀದಿ ಧ್ವಂಸ ಪ್ರಕರಣ, ಸತ್ಯಕ್ಕೆ ಸಿಕ್ಕ ಜಯ – ಈರಣ್ಣ ಕಡಾದಿ

    ಬೆಳಗಾವಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿದ ನ್ಯಾಯಾಲಯವು ಆರೋಪಿತರನ್ನು ಖುಲಾಸೆಗೊಳಿಸಿದ ಹಿನ್ನೆಲೆಯಲ್ಲಿ ಬುಧವಾರ ವಿಶ್ವ ಹಿಂದು ಪರಿಷತ್, ಬಜರಂಗ ದಳದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

    ನಗರದ ಖಡೇಬಜಾರ್ ರಾಮದೇವ ಗಲ್ಲಿಯಲ್ಲಿರುವ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಶ್ವ ಹಿಂದು ಪರಿಷತ್ ಮುಖಂಡ ಕೃಷ್ಣ ಭಟ್, ವಿಜಯ ಜಾಧವ, ಆನಂದ ಕರಲಿಂಗನವರ, ಹೇಮಂತ ಹವಳ, ಬಸವರಾಜ ಬಾಗೋಜಿ, ಅರ್ಜುನ ರಜಫೂತ, ಬಸವರಾಜ ಗಾಣಿಗಿ ಇದ್ದರು.

    ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡಿದ ತೀರ್ಪು ಇದು ಪೂರ್ವ ನಿಯೋಜಿತ ಕೃತ್ಯವಲ್ಲವೆಂದು ಸಾಬೀತಾಗಿದೆ. ಆರೋಪಿತರನ್ನು ಖುಲಾಸೆಗೊಳಿಸಿದ್ದು, ಇದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ರಾಜಕೀಯ ದ್ವೇಶಕ್ಕಾಗಿ ಬಿಜೆಪಿ ವಿರುದ್ಧ ಪಿತೂರಿ ನಡೆಸಿದ್ದ ಕಾಂಗ್ರೆಸ್ ನಾಯಕರು ದೇಶದ ಜನರ ಕ್ಷಮೆಯಾಚಿಸಬೇಕು.
    | ಈರಣ್ಣ ಕಡಾದಿ ರಾಜ್ಯಸಭಾ ಸದಸ್ಯ

    ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಲಖನೌ ಕೋರ್ಟ್ 32 ಆರೋಪಿಗಳನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿದ್ದು ಸ್ವಾಗತಾರ್ಹವಾಗಿದೆ. ಭವ್ಯ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
    | ಆನಂದ ಮಾಮನಿ ವಿಧಾನಸಭೆ ಉಪಸಭಾಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts