More

    ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹಿನ್ನೆಲೆ ನಗರದಾದ್ಯಂತ ಹೈಅಲರ್ಟ್​..!

    ಬೆಂಗಳೂರು: ಇಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹಿನ್ನೆಲೆ ನಗರದಾದ್ಯಂತ ಹೈಅಲರ್ಟ್​ ಘೋಷಿಸಲಾಗಿದೆ.

    ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದಿಂದ ಇಂದು ತೀರ್ಪು ಹೊರಬೀಳಲಿದೆ. ತೀರ್ಪಿನ ಪರ ಹಾಗೂ ವಿರೋಧ ಸಂಬಂಧ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಹದ್ದಿನಕಣ್ಣಿಡಲು ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: ಬ್ಯಾಚುಲರ್ಸ್ ಮೇಲೆ ಖಾಕಿ ಕಣ್ಣು?: ಬಾಡಿಗೆಗೆ ನೆಲೆಸಿರುವ ಅವಿವಾಹಿತರ ಮಾಹಿತಿ ಕೋರಿರುವ ಸುತ್ತೋಲೆ ವೈರಲ್

    ಇನ್ನು ನಗರದಲ್ಲಿ ತೀರ್ಪು ಕುರಿತಾಗಿ ಯಾವುದೇ ಸಂಭ್ರಮಾಚರಣೆ ಅಥವಾ ಮೆರವಣಿಗೆಗೆ ಅವಕಾಶಗಳಿಲ್ಲ. ತೀರ್ಪು ಆರೋಪಿತರ ಪರವಾಗಿ ಬಂದಲ್ಲಿ ಪಿಎಫ್​ಐ ಹಾಗೂ ಮುಸ್ಲಿಂ ಮೂಲಭೂತ ಸಂಘಟನೆಗಳು ಪ್ರತಿಭಟಿಸೋ ಸಾಧ್ಯತೆ ಇವೆ. ಈ‌ ಹಿಂದೆ ಸಂವಿಧಾನ ತಿದ್ದುಪಡಿ ಕಾಯ್ದೆ ಹಾಗೂ ತ್ರಿವಳಿ ತಲಾಖ್ ಜಾರಿ ವೇಳೆ ಪ್ರತಿಭಟನೆ ನಡೆದಿದ್ದವು.

    ಇತ್ತೀಚೆಗೆ ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಹಿನ್ನಲೆ ಸೂಕ್ತ ನಿಗಾವಹಿಸಲಾಗಿದೆ. ಸೂಕ್ತ ಪೊಲೀಸ್ ಬಂದೊಬಸ್ತ್ ಜತೆಗೆ ಸುಗಮ ಸಂಚಾರದ ಕುರಿತು ಕ್ರಮ ಕೈಗೊಳ್ಳಲಾಗಿದೆ. ನಗರದ ಎಲ್ಲಾ ವಿಭಾಗದ ಡಿಸಿಪಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಕಮಲ್ ಪಂತ್​ ಆದೇಶಿಸಿದ್ದಾರೆ. (ದಿಗ್ವಿಜಯ ನ್ಯೂಸ್)

    ಜಾಲತಾಣದಲ್ಲಿ ಹರಿದಾಡ್ತಿರೋ ಫೋಟೋ ಹತ್ರಾಸ್ ಗ್ಯಾಂಗ್​ರೇಪ್​ ಸಂತ್ರಸ್ತೆಯದ್ದಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts