More

    ಪ್ರವಾಹ ಪೀಡಿತ ಪ್ರದೇಶಗಳಿಗೆ ತಹಸೀಲ್ದಾರ್ ಭೇಟಿ

    ಬಬಲೇಶ್ವರ: ತಾಲೂಕಿನಲ್ಲಿ ಡೋಣಿ ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳಿಗೆ ಬುಧವಾರ ತಹಸೀಲ್ದಾರ್ ಎಂ.ಎಸ್. ಅರಕೇರಿ ಭೇಟಿ ನೀಡಿ ಪರಿಶೀಲಿಸಿದರು.
    ಧನ್ಯಾಳ, ಸಾರವಾಡ, ದದಾಮಟ್ಟಿ ಹಾಗೂ ತೊನಶ್ಯಾಳ ಗ್ರಾಮಗಳಿಗೆ ತೆರಳಿ ರೈತರ ಜಮೀನುಗಳಲ್ಲಿ ಡೋಣಿ ಪ್ರವಾಹದಿಂದ ನೀರು ನುಗ್ಗಿ ವಿವಿಧ ಬೆಳೆಗಳು ಹಾನಿಯಾಗಿರುವುದನ್ನು ಪರಿಶೀಲಿಸಿದರಲ್ಲದೆ, ಗ್ರಾಮಸ್ಥರು ಮುಂಜಾಗ್ರತ ಕ್ರಮವಾಗಿ ಸುರಕ್ಷಿತವಾಗಿ ಇರಬೇಕೆಂದು ತಿಳಿಸಿದರು.
    ಒಡೆದ ಕೆರೆ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾರವಾಡ ಗ್ರಾಪಂ ವ್ಯಾಪ್ತಿಯಲ್ಲಿ ಚಿಕ್ಕ ನೀರಾವರಿ ಯೋಜನೆಯಡಿ ನಿರ್ಮಿಸಿದ 1ಎಕರೆ 15 ಗುಂಟೆ ವಿಸ್ತಾರವಾದ ಕರೆಗೆ ಅಪಾರ ನೀರು ಹರಿದು ಬಂದು ಕರೆಯ ಒಡ್ಡು ಒಡೆದು ಅಪಾರ ನೀರು ಡೋಣಿ ನದಿಗೆ ಸೇರುತ್ತಿದೆ. ಆದರೆ, ಯಾವುದೇ ಬೆಳೆಗಳಿಗೆ ಹಾನಿ ಸಂಭವಿಸಿಲ್ಲ. ಕೂಡಲೇ ಕರೆಯ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಂಬಂಧಿಸಿದ ಗ್ರಾಪಂ ಅಧಿಕಾರಿಗಳಿಗೆ ತಹಸೀಲ್ದಾರ್ ಎಂ.ಎಸ್. ಅರಕೇರಿ ಸೂಚಿಸಿದರು.
    ಕಂದಾಯ ನಿರೀಕ್ಷಕ ಎಸ್.ಎ. ಗುಮಾಸ್ತೆ, ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಎಸ್. ಯಕ್ಸಂಬಿ, ರವಿಪ್ರಕಾಶ ಕಾಂಬಳೆ ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts