More

    ಬಾಬಾ ಸಾಹೇಬರ ತತ್ವ-ಆದರ್ಶಗಳನ್ನು ಅಳವಡಿಸಿಕೊಳ್ಳಿ

    ಹೂವಿನಹಡಗಲಿ: ಯುವ ಪೀಳಿಗೆ ದೇಶದಲ್ಲಿನ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸುವ ಜತೆಗೆ ನಿರ್ಮೂಲನೆಗೆ ಪಣ ತೊಡಬೇಕು ಎಂದು ಸಿವಿಲ್ ನ್ಯಾಯಾಧೀಶೆ ಡಿ.ಅನುಪಮ ಹೇಳಿದರು.

    ಇದನ್ನೂ ಓದಿ: ವಾಲ್ಮೀಕಿ ತತ್ವಾದರ್ಶ ಬದುಕಿಗೆ ದಾರಿದೀಪ

    ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತ ಸಂಘ, ಸಂಸ್ಥೆಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಸಾರ್ವಜನಿಕರಿಗೆ ಕಾನೂನು ಅರಿವು ನೆರವು ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳನ್ನು ಹೆಚ್ಚು ಓದಿಕೊಳ್ಳಬೇಕು. ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದವರು ಕೇವಲ ಜಯಂತಿ ಆಚರಣೆಗೆ ಮಾತ್ರ ಸೀಮಿತರಾಗಬಾರದು.

    ಅವರ ತತ್ವ ಆದರ್ಶಗಳನ್ನು ನಾವೇಲ್ಲರೂ ಅಳವಡಿಸಿಕೊಳ್ಳಬೇಕು. ಮನುಷ್ಯನ ದುರಾಸೆಯೇ ಭ್ರಷ್ಟಾಚಾರಕ್ಕೆ ಕಾರಣ. ಭವ್ಯ ಭಾರತದ ಪ್ರಜೆಗಳಾದ ನಾವು ಭ್ರಷ್ಟಾಚಾರವನ್ನು ತಡೆಯಬೇಕು ಎಂದರು.

    ವಕೀಲ ಎಸ್.ಎಂ.ಉಮೇಶ್, ವಕೀಲರ ಸಂಘದ ಅಧ್ಯಕ್ಷ ಜಿ.ವಸಂತ ಕುಮಾರ್, ಬಿಇಓ ಮಹೇಶ್ ವಿ.ಪೂಜಾರ, ಸಿಡಿಪಿಒ ರಾಮನಗೌಡ, ಉಪ ತಹಶೀಲ್ದಾರ್ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆಯ ಎಸ್.ಜ್ಯೋತಿ, ವಕೀಲರಾದ ಡಿ.ಸಿದ್ದನಗೌಡ, ಚನ್ನವೀರಯ್ಯ, ಶಾಲೆಯ ಶಿಕ್ಷಕರಾದ ಸುರೇಶ ಅಂಗಡಿ, ದ್ವಾರಕೀಶ್ ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts