More

    ಪತಂಜಲಿ ಐಪಿಎಲ್​! ಟ್ವಿಟರ್​ನಲ್ಲಿ ಭರ್ಜರಿ ಟ್ರೆಂಡಿಂಗ್​, ಟ್ರೋಲ್​!

    ಬೆಂಗಳೂರು: ವಿಶ್ವದ ಶ್ರೀಮಂತ ಟಿ20 ಲೀಗ್​ ಐಪಿಎಲ್​ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವದ ಬಗ್ಗೆ ಯೋಗಗುರು ಬಾಬಾ ರಾಮ್​ದೇವ್​ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಆಸಕ್ತಿ ವಹಿಸಿರುವ ಬೆನ್ನಲ್ಲೇ ಟ್ವಿಟರ್​ನಲ್ಲಿ ‘ಪತಂಜಲಿ ಐಪಿಎಲ್​’ ಭರ್ಜರಿ ಟ್ರೆಂಡಿಂಗ್​ಗೆ ಬಂದಿದೆ. ಜತೆಗೆ ಕ್ರಿಕೆಟ್​ ಪ್ರೇಮಿಗಳು ವಿವಿಧ ಟ್ರೋಲ್​ಗಳ ಮೂಲಕ ಈ ಬೆಳವಣಿಗೆಯ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ.

    ಸ್ವದೇಶಿ ಆಯುರ್ವೇದ ಉತ್ಪನ್ನದ ಕಂಪನಿ ವಿಶ್ವದ ಶ್ರೀಮಂತ ಟಿ20 ಲೀಗ್​ನ ಪ್ರಾಯೋಜಕತ್ವಕ್ಕೆ ಮುಂದಾಗಿರುವುದು ಹಲವು ಕ್ರಿಕೆಟ್​ ಪ್ರೇಮಿಗಳಿಗೆ ಅಚ್ಚರಿ ಹುಟ್ಟಿಸಿದೆ. ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇದೊಂದು ದೊಡ್ಡ ಬೆಳವಣಿಗೆ ಎನಿಸಲಿದೆ. ಚೀನಾದ ಮೊಬೈಲ್​ ಕಂಪನಿ ಐಪಿಎಲ್​ ಪ್ರಾಯೋಜಕತ್ವ ತ್ಯಜಿಸಿದ ಬೆನ್ನಲ್ಲೇ, ಕೆಲ ಕ್ರಿಕೆಟ್​ ಪ್ರೇಮಿಗಳು ಸ್ವದೇಶಿ ಪತಂಜಲಿ ಸಂಸ್ಥೆ ಪ್ರಾಯೋಜಕತ್ವ ವಹಿಸಲಿ ಎಂದು ಕಾಲೆಳೆದಿದ್ದರು. ಆದರೆ ಇದೀಗ ನಿಜಕ್ಕೂ ಪತಂಜಲಿ ಸಂಸ್ಥೆ ಐಪಿಎಲ್​ ಪ್ರಾಯೋಜಕತ್ವಕ್ಕೆ ಆಸಕ್ತಿ ತೋರುವ ಮೂಲಕ ಅಭಿಮಾನಿಗಳ ತಮಾಷೆಯನ್ನೇ ನಿಜ ಮಾಡಲು ಮುನ್ನಡೆದಿದೆ.

    ಇದನ್ನೂ ಓದಿ: ಐಪಿಎಲ್​ ಪ್ರಾಯೋಜಕತ್ವ ವಹಿಸಲು ಪತಂಜಲಿ ಆಸಕ್ತಿ!

    ಐಪಿಎಲ್​ಗೆ ಪತಂಜಲಿ ಪ್ರಾಯೋಜಕತ್ವ ವಹಿಸಿದರೆ ಕ್ರಿಕೆಟಿಗರೂ, ಯೋಗಗುರು ಬಾಬಾ ರಾಮ್​ದೇವ್​ ಅವರಂತೆ ಯೋಗ ಮಾಡಲಿದ್ದಾರೆ ಎಂದು ಟ್ರೋಲ್​ಗಳು ಹರಿದಾಡುತ್ತಿವೆ. ಜತೆಗೆ ಚಿಯರ್​ಲೀಡರ್​ಗಳು ಇನ್ನು ಪ್ರತಿ ಬಾರಿ ಬೌಂಡರಿ, ಸಿಕ್ಸರ್ ಸಿಡಿದಾಗ ಸೂರ್ಯನಮಸ್ಕಾರ ಮಾಡುವರೇ ಎಂಬ ಪ್ರಶ್ನೆಯನ್ನೂ ಎಸೆದಿದ್ದಾರೆ. ಪಂದ್ಯಶ್ರೇಷ್ಠ ಆಟಗಾರರಿಗೆ ಇನ್ನು ‘ದಂತಕಾಂತಿ ಪ್ಲೇಯರ್​ ಆಫ್​ ದಿ ಮ್ಯಾಚ್​ ಅವಾರ್ಡ್​’ ನೀಡುವರೇ ಎಂದೂ ಕಾಲೆಳೆಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts