More

    ಆರ್ಥಿಕ ಜಿಹಾದ್ ವಿರುದ್ಧ ಪ್ರಬಲ ಹೋರಾಟ: ಖ್ಯಾತ ಯೋಗಗುರು ಬಾಬಾ ರಾಮದೇವ್ ಘೋಷಣೆ

    ಬಾಬಾ ರಾಮದೇವ್ ಜಗತ್ಪ್ರಸಿದ್ಧ ಯೋಗ ಗುರು. ಪ್ರಖರ ರಾಷ್ಟ್ರೀಯವಾದಿ. ಅಪ್ಪಟ ಸ್ವದೇಶಿ ಚಿಂತಕ, ಪ್ರವರ್ತಕ. ‘ಪತಂಜಲಿ’ ಸಂಸ್ಥೆ ಮೂಲಕ ಸ್ವದೇಶಿ ಉತ್ಪನ್ನಗಳನ್ನು ಒದಗಿಸುತ್ತಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬೃಹತ್ ಯೋಗ ಶಿಬಿರ ನಡೆಸಿಕೊಟ್ಟ ಅವರು, ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿಗೆ ಸಂದರ್ಶನ ನೀಡಿದರು. ಉದ್ಯಮ ಕ್ಷೇತ್ರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ದರ್ಬಾರ್, ಗ್ರಾಹಕರ ಶೋಷಣೆ, ಸ್ವದೇಶಿ ಚಿಂತನೆಗಳ ಅಗತ್ಯತೆ, ಸರ್ಕಾರ ಮತ್ತು ಸಮಾಜದ ಪಾತ್ರ ಸೇರಿ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

    ‘ನಮ್ಮ ದೇಶ ಆಂತರಿಕ ಮತ್ತು ಬಹಿರಂಗ ಆತಂಕಗಳನ್ನು ಎದುರಿಸುತ್ತಲೇ ಬಂದಿದೆ. ಈಗ ಹೊಸದೊಂದು ಜಿಹಾದ್ ಎದುರಾಗಿದೆ. ಅದೇ ಆರ್ಥಿಕ ಜಿಹಾದ್…’ ಹೀಗೆಂದು ಚಿಂತನೆಗೆ ಹಚ್ಚಿದರು ವಿಶ್ವಪ್ರಸಿದ್ಧ ಯೋಗಗುರು, ಸ್ವದೇಶಿ ಚಿಂತಕ ಬಾಬಾ ರಾಮದೇವ್.

    ಆರ್ಥಿಕ ಆತಂಕವಾದಿಗಳೆಂದರೆ ದೇಶದ ಅರ್ಥವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಂಡು ಕಾರ್ಯಾಚರಿಸುತ್ತಿರುವವರು. ನಮ್ಮ ಅರ್ಥ ವ್ಯವಸ್ಥೆಯನ್ನು ಹಾಳುಗೆಡಹಿ, ಭಾರತವನ್ನು ಬಲಹೀನಗೊಳಿಸುವುದೇ ಅವರ ಉದ್ದೇಶ. ಅಂಥವರು ಹೊರಗಿನವರೂ ಇದ್ದಾರೆ, ಒಳಗಿನವರೂ ಇದ್ದಾರೆ. ಅಂಥವರು ದೇಶದಲ್ಲಿ ಅಶಾಂತಿ, ಹಿಂಸೆಯನ್ನೇ ಬಯಸುತ್ತಾರೆ. ನಾವೆಲ್ಲರೂ ಅಂಥವರನ್ನು ಬಹಿಷ್ಕರಿಸಬೇಕು. ದೇಶದ ಅರ್ಥವ್ಯವಸ್ಥೆಗೆ ಪೂರಕವಾಗಿರುವ ಸ್ವದೇಶಿ ಕಂಪನಿಗಳ ವಿರುದ್ಧ ಗುಪ್ತ ಕಾರ್ಯಸೂಚಿ ಹಮ್ಮಿಕೊಂಡು ಅಂಥವರು ಅಪಪ್ರಚಾರ ಮಾಡುತ್ತಾರೆ. ಪತಂಜಲಿ ಉತ್ಪನ್ನಗಳಿಗೂ ಆರ್ಥಿಕ ಜಿಹಾದಿಗಳ ಕಾಟ ಇದ್ದೇ ಇದೆ.

    # ಹಾಗಿದ್ದರೆ ದೇಶದ ಅರ್ಥವ್ಯವಸ್ಥೆಯ ರಕ್ಷಣೆ, ಪ್ರಗತಿಗೆ ಏನು ಮಾಡಬೇಕು?

    ಈ ನಿಟ್ಟಿನಲ್ಲಿ ಸರ್ಕಾರಕ್ಕೆ ‘ಸ್ವದೇಶಿ ಕೇಂದ್ರಿತವಾದ’ದ ಮೂರು ಸಲಹೆ ನೀಡುತ್ತೇನೆ.

    1) ನಮ್ಮ ದೇಶದ ಸಂಪನ್ಮೂಲಗಳನ್ನು ಉಪಯೋಗಿಸಿ ದೇಶದ ಆರ್ಥಿಕತೆಯನ್ನು ಸದೃಢಗೊಳಿಸಲು ಚಿಂತಿಸಬೇಕು. ದೇಶದ ತೈಲೋತ್ಪನ್ನಗಳತ್ತ ಗಮನ ಹರಿಸಬೇಕು. ಮುಂದಿನ 8-10 ವರ್ಷದಲ್ಲಿ 500ರಿಂದ ಸಾವಿರ ಲಕ್ಷ ಕೋಟಿ ರೂ.ಗಳಷ್ಟು ಆದಾಯವನ್ನು ನಾವು ನಮ್ಮ ರೈತರ ಜಮೀನುಗಳಿಂದಲೇ ಪಡೆಯಬಹುದು.

    2) ಖಾದ್ಯ ತೈಲ ವಿಭಾಗದಲ್ಲಿ 1.5-2 ಲಕ್ಷ ಕೋಟಿ ರೂ. ಬೇರೆ ದೇಶದ ಪಾಲಾಗುತ್ತಿದೆ. ಆದ್ದರಿಂದ ದೇಶದ ಖಾದ್ಯ ತೈಲೋತ್ಪನ್ನಗಳ ಘಟಕಗಳನ್ನು ಹೆಚ್ಚು ಹೆಚ್ಚು ಪೋ›ತ್ಸಾಹಿಸಿ, ವಿದೇಶಿ ಅವಲಂಬನೆ ತಪ್ಪಿಸಬೇಕು.

    3) ಯುರೋಪ್, ಇಂಗ್ಲೆಂಡ್, ಅಮೆರಿಕ, ಚೀನಾ, ಜಪಾನ್ ಮೊದಲಾದ ದೇಶಗಳ ಕಂಪನಿಗಳು ನಮ್ಮ ದೇಶದಲ್ಲಿ ವಾರ್ಷಿಕ -ಠಿ; 50 ಲಕ್ಷ ಕೋಟಿಗಿಂತ ಹೆಚ್ಚು ವಹಿವಾಟು ನಡೆಸುತ್ತವೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ವಿದೇಶಿ ಕಂಪನಿಗಳೊಂದಿಗೆ ಸ್ಪರ್ಧೆ ನಡೆಸಬೇಕು. ಮೊಬೈಲ್, ಇಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಐಟಿ, ಮಕ್ಕಳ ಆಟಿಕೆ, ಪಾದರಕ್ಷೆ ಸೇರಿ ಎಲ್ಲ ಉತ್ಪಾದನೆಗಳನ್ನು ದೇಶೀಯವಾಗಿಯೇ ಉತ್ಪಾದಿಸಬೇಕು. ಇದರಿಂದ -ಠಿ; 50 ಲಕ್ಷ ಕೋಟಿಗಳ ಅರ್ಥವ್ಯವಸ್ಥೆ ಪೂರ್ತಿಯಾಗಿ ನಮ್ಮದೇ ಆಗಲು ಸಾಧ್ಯ.

    ವಿರೋಧ ಇಲ್ಲ, ಎಚ್ಚರಿಕೆ ಅಗತ್ಯ: ಎಲ್​ಐಸಿ, ಏರ್ ಇಂಡಿಯಾ ಸೇರಿ ಕೆಲ ಕ್ಷೇತ್ರಗಳಲ್ಲಿ ಖಾಸಗಿಯವರಿಗೆ ಅವಕಾಶ ನೀಡಲು ನನ್ನ ವಿರೋಧ ಇಲ್ಲ. ಆದರೆ ಈ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳು ನುಗ್ಗದಂತೆ ಎಚ್ಚರಿಕೆ ವಹಿಸಬೇಕು. ದೇಶಿ ಕಂಪನಿಗಳಷ್ಟೇ ಅವಕಾಶ ನೀಡಬೇಕು.

    # ವಿದೇಶದಲ್ಲಿರುವ ಕಪ್ಪುಹಣ ಮರಳಿ ಬರುತ್ತದೆಂಬ ಭರವಸೆ ಇದೆಯೆ?

    ಕಪು್ಪಹಣ ವಾಪಸ್ ತರುವುದು ಪ್ರಧಾನಿಯ ಕೆಲಸ. ನಾನು ಕಪ್ಪು ಮನಸ್ಸುಗಳನ್ನು ಸರಿಪಡಿಸಲು ಯೋಗ, ಪ್ರಾಣಾಯಾಮ ಮಾಡಿಸುತ್ತಿದ್ದೇನೆ.

    # ಹಿಂದೆ ನೀವು ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಿದ್ದಿರಿ. ಈಗ ಪರಿಸ್ಥಿತಿ?

    -ಭಾರತ ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಹೇಳುವುದಿಲ್ಲ. ಆದರೆ, ದೇಶಕ್ಕೆ ಉತ್ತಮ ನಾಯಕತ್ವ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ 18 ಗಂಟೆ ಕೆಲಸ ಮಾಡುತ್ತಾರೆ. ಕಳೆದ 6 ವರ್ಷಗಳಲ್ಲಿ ಯಾವುದೇ ದೊಡ್ಡ ಹಗರಣ ದೇಶದಲ್ಲಿ ನಡೆದಿಲ್ಲ. ದೇಶ ನಡೆಸುವವರಲ್ಲಿ ನಿಯತ್ತು, ನೇತೃತ್ವ ಉತ್ತಮವಾಗಿದೆ. ರಾಜಕೀಯ ಸ್ಥಿರತೆ ಇದೆ. ಭ್ರಷ್ಟಾಚಾರ ದೇಶದ ಅರ್ಥವ್ಯವಸ್ಥೆ ಹಾಳು ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿ ಅಂತರಂಗದಿಂದ ಗಟ್ಟಿಯಾಗುವವರೆಗೆ ಇದು ದೂರ ಆಗುವುದಿಲ್ಲ.

    # ಇತ್ತೀಚೆಗೆ ಆಜಾದಿ ಘೋಷಣೆ ಹೆಚ್ಚು ಕೇಳಿಸುತ್ತಿದೆಯಲ್ಲ?

    ಬಡತನ, ಅನಕ್ಷರತೆ, ಬೆಲೆಯೇರಿಕೆ, ನಿರುದ್ಯೋಗದಿಂದ ನನಗೂ ಆಜಾದಿ ಬೇಕು. ಹಿಂಸೆ, ದ್ವೇಷದಿಂದ ಆಜಾದಿ ಬೇಕು. ಸ್ವಾತಂತ್ರ್ಯದ ಹೆಸರಿನಲ್ಲಿ ಮೂರ್ಖರಂತೆ ವರ್ತಿಸುವುದನ್ನು ನಿಲ್ಲಲಿ. ಸಂವಿಧಾನಪರ, ಅಹಿಂಸಾ ಪರ, ಸತ್ಯದ ಪರ , ಕರ್ಮದ ಪರ ಆಧಾರಿತ ಸ್ವಾತಂತ್ರ್ಯ ಬೇಕು. ನನ್ನ ಸ್ವಾತಂತ್ರ್ಯಂದ ಬೇರೊಬ್ಬರ ಸ್ವಾತಂತ್ರ್ಯ ಅಪಾಯಕ್ಕೆ ಒಳಗಾಗಬಾರದು.

    # ಯುವಕರಿಗೆ ನಿಮ್ಮ ಸಂದೇಶ?

    ಬೀಡಿ, ಸಿಗರೇಟ್, ಮದ್ಯ, ಜಂಕ್​ಫುಡ್ ನಶೆಯಂತೆ ಇತ್ತೀಚೆಗೆ ಸಾಮಾಜಿಕ ಜಾಲತಾಣದ ನಶೆ ಜೋರಾಗಿದೆ. ಯುವಕರು ದಿನವಿಡೀ ಮೊಬೈಲ್ ಹಿಡಿದುಕೊಂಡಿರುತ್ತಾರೆ. ಇದರಿಂದ ದೇಶ ಅಭಿವೃದ್ಧಿ ಹೊಂದುತ್ತದೆಯೇ ? ನಿರುದ್ಯೋಗ ಕಡಿಮೆಯಾಗುತ್ತದೆಯೇ? ಇಂತಹ ಬೇಡದ ಕೆಲಸ ನಿಲ್ಲಿಸಿ ಪರಿಶ್ರಮಿಗಳಾಗಿ. ಕ್ರಿಯಾತ್ಮಕರಾಗಿ. ನಶೆಯಿಂದ ದೂರ ಇರಿ. ಮೊಬೈಲ್ ಗೀಳಿನಿಂದ ಮನಸ್ಸಿನಲ್ಲಿ ಅಪರಾಧಿ ಭಾವನೆ ಬೆಳೆಯುತ್ತದೆ, ಮಾನಸಿಕ ಒತ್ತಡ, ಖಿನ್ನತೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮುಕ್ತವಾಗಲು ಯೋಗ, ಪ್ರಾಣಾಯಾಮ ಮಾಡಿ.

    ಸಂಕೇಶ್ವರರ ಸಾಧನೆ ಮಾದರಿ

    ಯಾರು ಪ್ರಾಮಾಣಿಕವಾಗಿ, ಕಠಿಣ ಪರಿಶ್ರಮದಿಂದ ಕೆಲಸ ಮಾಡುತ್ತಾರೋ ಅವರಿಗೆ ‘ಅಚ್ಛೇ ದಿನ್’ ಖಂಡಿತ ಬರುತ್ತವೆ. ವಿಆರ್​ಎಲ್ ಸಮೂಹ ಸಂಸ್ಥೆಗಳನ್ನೇ ನೋಡಿ. ಡಾ. ವಿಜಯ ಸಂಕೇಶ್ವರ ಒಂದು ಟ್ರಕ್​ನಿಂದ ವ್ಯವಹಾರ ಆರಂಭಿಸಿ ಇಂದು 5 ಸಾವಿರ ಟ್ರಕ್​ಗೆ ಬೆಳೆಸಿದ್ದಾರೆ. ಇದನ್ನ ಸರ್ಕಾರ ಮಾಡಿತಾ? ಇದರ ಜೊತೆಗೆ ಕನ್ನಡಿಗರ ಹೆಮ್ಮೆಯ ‘ವಿಜಯವಾಣಿ’, ‘ದಿಗ್ವಿಜಯ’ ಸುದ್ದಿವಾಹಿನಿಯನ್ನು ಮೋದಿ ಸರ್ಕಾರ ನಡೆಸುತ್ತಿದೆಯಾ? ಇಲ್ಲವಲ್ಲ… ಆದ್ದರಿಂದ ನಮ್ಮ ಪರಿಶ್ರಮ, ಪ್ರಾಮಾಣಿಕತೆಯೂ ಬಹಳ ಪ್ರಮುಖ ಪಾತ್ರ ವಹಿಸುತ್ತವೆ.

    ಆದರ್ಶವೊಂದೇ ಪರಿಹಾರ

    ಭ್ರಷ್ಟಾಚಾರ ನಿವಾರಣೆಗೆ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮಕ್ಕಳನ್ನು ಆದರ್ಶವಾದಿಗಳನ್ನಾಗಿಸಬೇಕು. ಇದಕ್ಕೂ ಮೊದಲು ಪಾಲಕರು ಆದರ್ಶ ವ್ಯಕ್ತಿಗಳಾಗಬೇಕು. ಅಧಿಕಾರದಲ್ಲಿರುವವರು ಹೆಚ್ಚಿನ ಆಸೆ ಪಡಬಾರದು. ಸಿಗುವ ಸಂಬಳದಲ್ಲಿಯೇ ಸಂತೃಪ್ತ ಜೀವನ ನಡೆಸಬೇಕು. ಮೋದಿ ಒಬ್ಬರೇ ದುಡಿದರೆ ಆಗುವುದಿಲ್ಲ. ಪ್ರಧಾನಿ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯ ಕನಸು ಬಿತ್ತಿದ್ದಾರೆ. ಈ ಗುರಿ ಈಡೇರಿಕೆ ಸರಳವಾಗಿಲ್ಲ. ಇದಕ್ಕಾಗಿ ಸರ್ಕಾರ ಮತ್ತು ಸಮಾಜ ಒಗ್ಗಟ್ಟಾಗಿ ದುಡಿಯಬೇಕು. ಉದ್ಯಮಕ್ಕೆ ಗೌರವ ಸಿಗಬೇಕು. ಸಿರಿವಂತರೆಂದರೆ ಅನ್ಯಮಾರ್ಗದಲ್ಲಿ ಗಳಿಸಿದ್ದಾರೆಂಬ ಕೆಟ್ಟ ಅಭಿಪ್ರಾಯವನ್ನು ಸರ್ಕಾರ ಹೊಂದುವುದು ಸರಿಯಲ್ಲ. ಕೆಲ ರಾಜಕಾರಣಿಗಳು 60-70 ವರ್ಷಗಳಿಂದ ಈ ರೀತಿಯ ವಿಷಬೀಜ ಬಿತ್ತುತ್ತಿದ್ದಾರೆ. ಆದಾಯ ತೆರಿಗೆ ಪಾವತಿಸುವವರಿಗೆ ಗೌರವ ನೀಡಬೇಕು. ಅವರಿಗೆ ಕಿರುಕುಳ ನೀಡಬಾರದು.

    ಸ್ವದೇಶಿ, ಪರಿಶ್ರಮದ ಪ್ರತಿಬಿಂಬವೇ ಪತಂಜಲಿ

    # ಪತಂಜಲಿ ಬ್ರ್ಯಾಂಡ್ ಬಗ್ಗೆ ಹೇಳುವುದಾದರೆ?

    ಪತಂಜಲಿ ಎಂಬುದು ಕೇವಲ ಹೆಸರಲ್ಲ; ಅದು ಪರಿಶ್ರಮದ ಪ್ರತಿಬಿಂಬ. ಬ್ರ್ಯಾಂಡ್ ಎಂಬುದು ದೊಡ್ಡ ಆಲೋಚನೆ, ಕಠಿಣ ಪರಿಶ್ರಮ, ಪ್ರಾಮಾಣಿಕತೆ, ದೂರದೃಷ್ಟಿ, ಸಾಹಸ, ಧೈರ್ಯದಿಂದ ಬರುವಂಥದ್ದು. ಕೆಲಸದಿಂದಲೇ ಉತ್ತಮ ಹೆಸರು ಬರುತ್ತದೆ. ನಾನು ಯಾವತ್ತೂ ಹೆಸರು, ಬ್ರ್ಯಾಂಡ್ ಅಥವಾ ಗೌರವ ಸಮ್ಮಾನಗಳ ಬಗ್ಗೆ ಯೋಚಿಸುವುದಿಲ್ಲ. ನಾನು ಕೆಲಸದ ಬಗ್ಗೆ ಮಾತ್ರ ಯೋಚಿಸುತ್ತೇನೆ. ಉತ್ತಮ ಕರ್ಮ, ಕಾಯಕವೇ ಕೈಲಾಸ ನಮ್ಮ ಧ್ಯೇಯ.

    ನೀವು ದೊಡ್ಡ ದೊಡ್ಡ ಕೆಲಸ ಮಾಡುವುದಾದರೆ ಸಣ್ಣಪುಟ್ಟ ಕೆಲಸಗಳ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳುತ್ತೀರಿ? ರಿಸ್ಕ್ ತೆಗೆದುಕೊಳ್ಳಿ. ಸವಾಲುಗಳನ್ನು ಸ್ವೀಕರಿಸಿ. ಅಂದಾಗ ಮಾತ್ರ ಯಶಸ್ಸು ಸಾಧ್ಯ. ಪತಂಜಲಿ ಕೂಡ ಇದೇ ಹಾದಿಯಲ್ಲಿ ಸಾಗಿ ಬಂದು ಈಗ ಹೆಮ್ಮರವಾಗಿದೆ.

    # ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಕೂಗು ಕೇಳಿಬರುತ್ತಿದೆ. ಆರೋಪ ಮಾಡುವವರಿಗೆ ಏನು ಹೇಳಬಯಸುತ್ತೀರಿ?

    ಇದನ್ನೇ ನಾನು ‘ಎಕಾನಾಮಿಕ್ ಜಿಹಾದಿ’ ಎನ್ನುವುದು. ದೇಶ, ದೇಶೀಯ ಉತ್ಪನ್ನಗಳು, ದೇಶವಾಸಿಗಳನ್ನು ಗೌರವಿಸದೇ ಒಂದು ಸ್ವದೇಶಿ ಉತ್ಪನ್ನಗಳ

    ಸಂಸ್ಥೆ ಬಗ್ಗೆ ಉಡಾಫೆ ಮಾತು ಹೇಳುವವರು ಎಂದಿಗೂ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಇಂತಹ ಜನರನ್ನ ನೋಡಿ ನನಗೆ ನಗು ಬರುತ್ತದೆ.

    # ವಿದೇಶಿ ಕಂಪನಿಗಳನ್ನು ಪತಂಜಲಿ ಹಿಂದಿಕ್ಕುವುದು ಸುಲಭವೆ?

    ಒಂದೆರಡು ವರ್ಷದಲ್ಲಿ ಪತಂಜಲಿ ಲೀಡಿಂಗ್ ಟಾಪ್ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಏಕೆಂದರೆ ಪತಂಜಲಿ ಉತ್ಪನ್ನಗಳ ಬಗ್ಗೆ ದಕ್ಷಿಣ ಭಾರತ ಸೇರಿ ಇಡೀ ದೇಶದಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಕರ್ನಾಟಕದ ಮೂಲೆ ಮೂಲೆಗಳಲ್ಲೂ ಬೇಡಿಕೆ ಇರುವುದೇ ಇದಕ್ಕೆ ಸಾಕ್ಷಿ.

    # ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳಿಗೆ ಪತಂಜಲಿ ಸ್ಟಿಕರ್ ಅಂಟಿಸುತ್ತೀರಿ ಎಂಬ ಆರೋಪ ಇದೆಯಲ್ಲ?

    ಎಂಥ ದೊಡ್ಡ ಸುಳ್ಳು ಆರೋಪ ಹರಡಿಸುತ್ತಿದ್ದಾರೆ ಕುತಂತ್ರಿಗಳು! ಪತಂಜಲಿ ಉತ್ಪಾದನಾ ಘಟಕಗಳು ಇದ್ದಷ್ಟು ಬೇರೆ ಯಾವುದೇ ಸ್ವದೇಶಿ ಉತ್ಪಾದನಾ ಘಟಕಗಳು ಇಲ್ಲ. ಸಾವಿರಕ್ಕೂ ಹೆಚ್ಚು ಎಕರೆ ಕ್ಷೇತ್ರ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಫ್ಯಾಕ್ಟರಿಗಳನ್ನು ಹೊಂದಿದ್ದೇವೆ. ಒಂದೇ ಒಂದು ಹನಿ ಕಲಬೆರಕೆ ಇಲ್ಲದ, ಶೇಕಡ 100 ಪರಿಶುದ್ಧ ಉತ್ಪನ್ನ ನೀಡುತ್ತಿದ್ದೇವೆ. ಪತಂಜಲಿ ಉತ್ಪನ್ನಗಳ ಪರಿಶುದ್ಧತೆ ಮತ್ತು ಗುಣಮಟ್ಟದ ಬಗ್ಗೆ ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನನ್ನ ಪಾಲಿಗೆ ಈ ದೇಶ ಮಾರುಕಟ್ಟೆಯಲ್ಲ; ಬದಲಾಗಿ ನನ್ನದೇ ಪರಿವಾರ.

    # ಪತಂಜಲಿಯ ಮುಂದಿನ ಗುರಿಗಳು?

    ಪತಂಜಲಿ ಉತ್ಪನ್ನಗಳ ಮುಖಾಂತರ ಪ್ರಸಕ್ತ ವರ್ಷದಲ್ಲೇ ನಾವು -ಠಿ; 23-25 ಸಾವಿರ ಕೋಟಿ ವಹಿವಾಟಿನ ಗುರಿ ತಲುಪುತ್ತೇವೆ. ಒಂದೆರಡು ವರ್ಷದಲ್ಲಿ -ಠಿ; 40-50 ಸಾವಿರ ಕೋಟಿ ವಹಿವಾಟು ನಡೆಸಲಿದ್ದೇವೆ. 5 ವರ್ಷದಲ್ಲಿ ಲಕ್ಷ ಕೋಟಿ ತಲುಪುವ ಕನಸು ಹೊಂದಿದ್ದೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts