More

    ದಿಢೀರ್​ ಖಾತೆ ಬದಲಾವಣೆಗೆ ಇದೇ ಕಾರಣ: ಡಿ.ಕೆ. ಶಿವಕುಮಾರ್

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ಸಿಎಂ ಯಡಿಯೂರಪ್ಪ ಸಚಿವರಿಬ್ಬರ ಖಾತೆಗಳನ್ನು ದಿಢೀರ್​ ಬದಲಾಯಿಸಿದ್ದಾರೆ. ಶ್ರೀರಾಮುಲು ಕೈಯಲ್ಲಿದ್ದ ಆರೋಗ್ಯ ಖಾತೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯನ್ನು ಹಿಂಪಡೆಯುವ ಮೂಲಕ ಬಿಗ್​ ಶಾಕ್​ ಕೊಟ್ಟಿದ್ದಾರೆ.

    ಈ ಮಹತ್ವದ ಬೆಳವಣಿಗೆ ಭಾರೀ ಸಂಚಲನ ಮೂಡಿಸಿದ್ದು, ಸ್ವತಃ ಶ್ರೀರಾಮುಲು ಕೂಡ ಅಸಮಾಧಾನಗೊಂಡಿದ್ದಾರೆ. ಶ್ರೀರಾಮುಲು ಕೈಯಲ್ಲಿದ್ದ ಆರೋಗ್ಯ ಖಾತೆ ಡಾ.ಸುಧಾಕರ್​ಗೆ ಹೆಗಲಿಗೆ ಬೀಳುತ್ತಿದ್ದಂತೆ ಇದಕ್ಕೆ ಕಾರಣ ಏನಿರಬಹುದೆಂದು ತರಹೇವಾರಿ ಚರ್ಚೆಗಳು ಶುರುವಾಗಿವೆ. ಕೋವಿಡ್​ ನಿಯಂತ್ರಿಸಲು ಆರೋಗ್ಯ ಖಾತೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಬ್ಬರ ಬಳಿ ಇದ್ದರೆ ಉತ್ತಮ ಎಂಬ ಸರ್ಕಾರದಿಂದ ಸಬೂಬು ಕೇಳಿಬಂದಿದೆಯಾದರೂ ವಿಪಕ್ಷ ಕಾಂಗ್ರೆಸ್​ ಇದನ್ನು ಅಲ್ಲಗೆಳೆದಿದೆ. ‘ಕರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದ್ದರಿಂದಲೇ ಆರೋಗ್ಯ ಇಲಾಖೆಯ ಸಚಿವರನ್ನು ಬದಲಾಯಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಟೀಕಿಸಿದ್ದಾರೆ.

    ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆ ಸುಧಾಕರ್​ಗೆ ಸಿಎಂ ಕೊಡಲಿದ್ದಾರೆ ಎಂಬ ಮಾಹಿತಿ ಭಾನುವಾರ ರಾತ್ರಿಯೇ ಹೊರಬಿದ್ದಿತ್ತು. ಸೋಮವಾರ ಬೆಳಗ್ಗೆ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಸುಧಾಕರ್​, ‘ರಾಜ್ಯದಲ್ಲಿ ಕರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಹಾಗೂ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಕೆಲಸವನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಜವಾಬ್ದಾರಿಯನ್ನು ನನಗೆ ಒಪ್ಪಿಸಿದ್ದಾರೆ’ ಎಂದಿದ್ದರು.

    ಇದರ ಬೆನ್ನಲ್ಲೇ ಟ್ವೀಟ್​ ಮಾಡಿರುವ ಡಿಕೆಶಿ, ‘ಕೋವಿಡ್​ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದಕ್ಕೆ ಸಾಕ್ಷಿ ಸಚಿವರ ದಿಢೀರ್​ ಬದಲಾವಣೆ. ಈ ಸರ್ಕಾರದ ಅಸಮರ್ಥತೆಯು ಅಪಾರ ಪ್ರಮಾಣದ ಜೀವ ಹಾನಿ ಮತ್ತು ಜನಜೀವನವನ್ನು ಅಪಾಯಕ್ಕೆ ತಳ್ಳಿದೆ ಎಂಬ ನಮ್ಮ ಆರೋಪಕ್ಕೆ ಪೂರಕವಾಗಿ ಆರೋಗ್ಯ ಸಚಿವರ ಬದಲಾವಣೆಯಾಗಿದೆ’ ಎಂದು ಟೀಕಿಸಿದ್ದಾರೆ.

    ಖಾತೆ ಕಿತ್ತುಕೊಂಡ ಬೆನ್ನಲ್ಲೇ ಖಾಸಗಿ ಕಾರನ್ನೇರಿ ಶ್ರೀರಾಮುಲು ಹೊರಟದ್ದೆಲ್ಲಿಗೆ?

    ಖಾತೆ ಬದಲಾವಣೆ: ಸ್ಫೋಟಗೊಂಡ ಶ್ರೀರಾಮುಲು ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts