More

    ರಾಜಕೀಯ ವ್ಯವಸ್ಥೆ ಶುದ್ಧ‌ಮಾಡಿಯೇ ತೋರಿಸುತ್ತೇವೆ: ಬಿ. ಎಲ್. ಸಂತೋಷ್

    ಹಾವೇರಿ: ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿಲ್ಲ. ಕೇಂದ್ರದ ಜತೆಗೆ ಚರ್ಚೆ ಮಾಡಿ ಒಳ‌ಮೀಸಲಾತಿ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೇಳಿದರು.

    ನಗರದಲ್ಲಿ ಅಭಿವ್ಯಕ್ತಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಸ್ಥಳೀಯ ಮಂಡಲ ಮಟ್ಟದಲ್ಲಿ ಏನೇ ಆದರೂ ಕೇಂದ್ರದ ಜತೆ ಚರ್ಚೆ ಆಗಿರುತ್ತದೆ. ಒಳ‌ ಮೀಸಲಾತಿ ಕುರಿತು ಕೇಂದ್ರ ಮಟ್ಟದಲ್ಲಿ ಚರ್ಚೆ ಆಗಿ ಕೊನೆ ಕ್ಷಣದಲ್ಲಿ ಒಪ್ಪಿಗೆಯಾಗಿದೆ. ಮೋದಿ, ಅಮಿತ್ ಶಾ, ನಡ್ಡಾ ಅವರಿಗೆ ಗೊತ್ತಿಲ್ಲದೇ‌ ಪ್ರಮುಖ ನಿರ್ಣಯ ಆಗಲ್ಲ. ನಾವು ಕಿಚನ್, ಬೆಡ್ ರೂಮಲ್ಲಿ ಕುಳಿತು ನಿರ್ಣಯ ಮಾಡಲ್ಲ. ಕೇಂದ್ರದ ಮುಂದಿನ ಅಧಿವೇಶನದಲ್ಲಿ ಒಪ್ಪಿಗೆ ಮಾಡುತ್ತೇವೆ ಎಂದರು.

    ಇದನ್ನೂ ಓದಿ: ಚಾಕಲೇಟ್‌ ರ್‍ಯಾಪರ್​​​ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 16.5 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ!

    ದೊಡ್ಡ ಪ್ರಯೋಗ ಮಾಡಿ 72 ಹೊಸಬರಿಗೆ ಟಿಕೆಟ್ ಕೊಡಲಾಗಿದೆ. ಮತ್ತೆ ಓಟು ಹಾಕಿದರೆ ತಳಮಟ್ಟದಲ್ಲಿ ಬದಲಾವಣೆ ಮಾಡಬಹುದು. ಎಲ್ಲ ಉಪ ಜಾತಿಯವರಿಗೆ ಟಿಕೆಟ್ ಕೊಟ್ಟರೆ ಪ್ರಜಾಪ್ರಭುತ್ವ ನಡೆಯುತ್ತದಾ? ಎಂದು ಪ್ರಶ್ನಿಸಿದರು.

    ರಾಜಕೀಯ ವ್ಯವಸ್ಥೆ ಶುದ್ಧ‌ಮಾಡಿಯೇ ತೋರಿಸುತ್ತೇವೆ. ಅದಕ್ಕಾಗಿ ಬಿಜೆಪಿಯನ್ನು ಶುದ್ಧ ಮಾಡುತ್ತಿದ್ದೇವೆ. ಯಾರು ಹಣವನ್ನೇ ಮುಟ್ಟಲ್ಲ ಅಂಥವರೂ ಹಣ ತೆಗೆದುಕೊಳ್ಳುತ್ತಾರೆ. ಇನ್ನೊಂದು ಮೂರು ಸಲ ನಮಗೆ ಓಟು ಕೊಡಿ ಪಂಚಾಯತಿ ಮಟ್ಟದಲ್ಲಿ ದೊಡ್ಡ ಬದಲಾವಣೆ ಮಾಡುತ್ತೇವೆಂದು ಚಾಲೆಂಜ್ ಮಾಡುತ್ತೇನೆ ಎಂದರು.

    ಗಿಳಿ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಮಾಡಿದ ಕುಟುಂಬ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts