More

    ಅಪೌಷ್ಟಿಕ ಮಕ್ಕಳಿಗೆ ಆಯುಷ್ ಆಸರೆ!; ಚಿಣ್ಣರ ತೂಕ ಹೆಚ್ಚಳ, ರಾಜ್ಯಕ್ಕೆ ಮಾದರಿಯಾದ ದಾವಣಗೆರೆ

    | ಡಿ.ಎಂ.ಮಹೇಶ್ ದಾವಣಗೆರೆ

    ರಾಜ್ಯದಲ್ಲೇ ಮೊದಲ ಬಾರಿಗೆ ಅಪೌಷ್ಟಿಕ ಮಕ್ಕಳಿಗೆ ‘ಆಯುಷ್ ಬಾಲಸಂಜೀವಿನಿ’ ಹೆಸರಿನಲ್ಲಿ ದಾವಣಗೆರೆಯಲ್ಲಿ ವಿತರಿಸಿದ್ದ ಔಷಧ ಉತ್ತಮ ಫಲ ನೀಡಿದೆ. ಕಳೆದ ವರ್ಷದಲ್ಲಿ ಕೋವಿಡ್​ನ ಮೂರನೇ ಅಲೆ ಮಕ್ಕಳಲ್ಲಿ ಮಕ್ಕಳಲ್ಲಿ ಗಂಭೀರ ಪರಿಣಾಮ ಬೀರುವ ಆತಂಕವಿತ್ತು. ಜಿಲ್ಲಾ ಆಯುಷ್ ಇಲಾಖೆ ತಜ್ಞರೊಂದಿಗೆ ರ್ಚಚಿಸಿ, ಭಾರತ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ವಯ ನೀಡಿದ ಎರಡು ಔಷಧ ಚಿಣ್ಣರ ಪಾಲಿಗೆ ಸಂಜೀವಿನಿಯಾದವು! ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಹಿಂದಿನ ಬಾರಿ, 2-6 ವರ್ಷ ದೊಳಗಿನ 5163 ಅಪೌಷ್ಟಿಕ ಮಕ್ಕಳನ್ನು ಗುರು ತಿಸಿತ್ತು. ಇದರಲ್ಲಿ 180 ತೀವ್ರ ತರದ ಹಾಗೂ 4983 ಮಧ್ಯಮ ಅಪೌಷ್ಟಿಕ ಮಕ್ಕಳಿದ್ದರು.

    ತಲಾ ಮಗುವಿಗೆ ದಿನಕ್ಕೆರಡು ಬಾರಿಯಂತೆ 100 ದಿನದ ಮಟ್ಟಿಗೆ 500 ಗ್ರಾಂ. ಕೂಷ್ಮಾಂಡು ರಸಾಯನ ಹಾಗೂ 400 ಮಿ.ಲೀ. ಅರವಿಂದಾಸವ ಔಷಧ ನೀಡಲಾಗಿತ್ತು. ಬೂದುಗುಂಬಳಕಾಯಿ ಹಾಗೂ ಇತರ ಗಿಡಮೂಲಿಕೆ ಬಳಸಿ ತಯಾರಿಸಿದ್ದ ಕೂಷ್ಮಾಂಡು ರಸಾಯನ ತೂಕ ನಿರ್ವಹಣೆಯಲ್ಲಿ ಕೆಲಸ ಮಾಡಲಿದೆ. ಕಮಲದ ಹೂವು ಇತರ ಮಿಶ್ರಣದಿಂದ ತಯಾರಿಸಿದ ಅರವಿಂದಾಸವ ಹಸಿವನ್ನು ಹೆಚ್ಚಿಸಲಿದೆ. ಎರಡೂ ಕೂಡ ತೂಕ ಮತ್ತು ಆರೋಗ್ಯದ ಸುಧಾರಣೆ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರಣಕ್ಕೆ ಇದನ್ನು ವಿತರಿಸಲಾಯಿತು.

    ಇದರಿಂದಾಗಿ 3051 ಮಕ್ಕಳಲ್ಲಿ ಶೇ.59 (500 ಗ್ರಾಂನಿಂದ 10 ಕೆಜಿ), 2160 ಮಕ್ಕಳಲ್ಲಿ ಶೇ.41 (500 ಗ್ರಾಂ.ವರೆಗೆ) ತೂಕ ಹೆಚ್ಚಳವಾಯಿತು. ಇದಕ್ಕೆ 9.74 ಲಕ್ಷ ರೂ. ಬಳಸಲಾಯಿತು. ಉತ್ತಮ ಫಲಿತಾಂಶದ ಬಳಿಕ ಜಿಲ್ಲಾ ಆಯುಷ್ ಇಲಾಖೆ ಎರಡನೇ ಬಾರಿಯೂ ಔಷಧ ವಿತರಣೆಗೆ ಮುಂದಾಗಿದೆ.

    ಕೋವಿಡ್ ವೇಳೆ ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯಕ್ರಮ ಫಲ ನೀಡಿದೆ. ಈ ವರ್ಷದಲ್ಲೂ ಅಪೌಷ್ಟಿಕ ಮಕ್ಕಳಿಗೆ ಔಷಧ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಇಲ್ಲಿನ ಪ್ರಗತಿ ವರದಿ ಆಯಷ್​ನ ಕೇಂದ್ರ ಕಚೇರಿ ಗಮನಕ್ಕಿದ್ದು ಉಳಿದ ಜಿಲ್ಲೆಗಳಿಗೆ ಮಾದರಿಯಾಗಬಹುದು.

    | ಡಾ.ಶಂಕರಗೌಡ ಜಿಲ್ಲಾ ಆಯುಷ್ ಅಧಿಕಾರಿ

    ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಈ ಬಾರಿ ಜಿಲ್ಲೆಯಲ್ಲಿ 4291 ಮಧ್ಯಮ ಅಪೌಷ್ಟಿಕ ಹಾಗೂ 107 ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಿದೆ. ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳಲ್ಲಿ 38 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲ ಮಕ್ಕಳಿಗೂ ಔಷಧಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿಗಳ ಮೂಲಕ ತಲುಪಲಿದೆ.

    ಇದರೊಟ್ಟಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಅಪೌಷ್ಟಿಕ ಮಕ್ಕಳಿಗೆ ಮೊಟ್ಟೆ ಹಾಗೂ ಅಂಗನವಾಡಿ ಮಗುವಿಗೆ ನೀಡುವ ಒಂದೂವರೆ ಪಟ್ಟು ಹೆಚ್ಚಿನ ಪೌಷ್ಟಿಕ ಆಹಾರ ಸಿಗುತ್ತಿದೆ. ತೀವ್ರ ಅಪೌಷ್ಟಿಕ ಮಕ್ಕಳನ್ನು ಸಾರ್ವಜನಿಕರು ದತ್ತು ಪಡೆದು ಆಯಾ ಮಗು ಬೆಳವಣಿಗೆ ಆಗುವವರೆಗೆ ಅಗತ್ಯ ಪೌಷ್ಟಿಕ ಆಹಾರ ನೀಡುತ್ತಿರುವುದು ಕೂಡ ಬಲ ತುಂಬಿದೆ.

    ರಾಜ್ಯೋತ್ಸವದಂದು ವಿಶ್ವದಾಖಲೆಯ ಪ್ರಯತ್ನ; 10 ಸಾವಿರ ಅಡಿ ಉದ್ದದ ಕನ್ನಡ ಬಾವುಟ ಪ್ರದರ್ಶನ

    ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts