More

    ಆಯುರ್ವೇದ ಬದುಕಿನ ಅವಿಭಾಜ್ಯ ಅಂಗ

    ಗೋಕರ್ಣ: ಬದುಕಿನ ಅತ್ಯಂತ ಪ್ರಧಾನವಾದ ಅವಿಭಾಜ್ಯ ಅಂಗ ಆಯುರ್ವೇದವಾಗಿದೆ. ಪ್ರತಿ ಜೀವಿಯ ದೇಹ ಪ್ರಕೃತಿಯನ್ನು ತಿಳಿಸಬಲ್ಲ ಈ ವಿದ್ಯೆಯಿಂದ ನಮ್ಮ ಸಂಪರ್ಕಕ್ಕೆ ಬರುವವರ ವರ್ತನೆ ಮತ್ತು ವ್ಯಕ್ತಿತ್ವ ಅರಿಯಬಹುದಾಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ಮತ್ತು ವಿವಿವಿ ಆಯುರ್ವೇದ ವಿಭಾಗದ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.

    ಇಲ್ಲಿನ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ಗುರುವಾರ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ತಮ್ಮ ಒಡನಾಡಿಗಳ ಮತ್ತು ಶಿಕ್ಷಕರು ವಿದ್ಯಾರ್ಥಿಗಳ ದೇಹ ಪ್ರಕೃತಿಯನ್ನು ತಿಳಿದಿರಬೇಕು. ಇದು ಶಿಕ್ಷಣಕ್ಕೆ ತುಂಬ ಉಪಕಾರಿಯಾಗಿದ್ದು, ಕಲಿಸುವಿಕೆ ಸುಲಭ ಸಾಧ್ಯವಾಗುತ್ತದೆ. ಮಾನವ ದೇಹ ತ್ರಿ-ದೋಷಗಳಿಂದ ಕೂಡಿರುತ್ತದೆ. ತಾಯಿಯ ಗರ್ಭದಲ್ಲಿರುವಾಗಲೇ ರೂಪಗೊಳ್ಳುವ ದೇಹ ಪ್ರಕೃತಿಯಲ್ಲಿನ ಈ ದೋಷಗಳಿಂದಾಗಿಯೇ ಹುಟ್ಟು ಗುಣ ಸುಟ್ಟರೂ ಹೋಗದು ಎಂಬ ಗಾದೆ ಮಾತು ಪ್ರಖ್ಯಾತವಾಗಿದೆ ಎಂದು ವಿವರಿಸಿದರು.

    ಸಭೆಯಲ್ಲಿ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ, ಸಮನ್ವಯಾಧಿಕಾರಿ ಅಶ್ವಿನಿ ಉಡುಚೆ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts