More

    ಶ್ರೀರಾಮ ಮಂದಿರ ನಿರ್ಮಾಣದ ನಿರ್ವಿಘ್ನತೆಗೆ ಪೂಜೆ

    ಹಗರಿಬೊಮ್ಮನಹಳ್ಳಿ: ಅಯೋಧ್ಯೆಯಲ್ಲಿ ಆ.5 ರಂದು ಶ್ರೀರಾಮಮಂದಿರ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದ ನಿಮಿತ್ತ ಪೂರ್ಣಗೊಳ್ಳುವವರೆಗೆ ಯಾವುದೇ ನಿರ್ವಿಘ್ನತೆ ಬಾರದಿರುವಂತೆ ಪ್ರಾರ್ಥಿಸಿ ತಾಲೂಕಿನ ಎಲ್ಲ ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮೀಜಿ ತಿಳಿಸಿದರು.

    ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. ಪ್ರತಿಯೊಬ್ಬರೂ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಸಂಪನ್ನವಾಗಲು ಸಂಕಲ್ಪ ಮಾಡಬೇಕಿದೆ. ಈಗಾಗಲೇ ಪಟ್ಟಣದ 50ಕ್ಕೂ ಹೆಚ್ಚು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲು ತಿಳಿಸಲಾಗಿದೆ. ತಾಲೂಕಿನ ಎಲ್ಲ ದೇಗುಲಗಳಲ್ಲಿ ಆ.5 ರಂದು ಬೆಳಗ್ಗೆ 8 ರಿಂದ 10 ಗಂಟೆಯೊಳಗೆ ವಿಶೇಷ ಅಲಂಕಾರ ಸಹಿತ ಪೂಜೆ ನೆರವೇರಿಸಲು ತೀರ್ಮಾನಿಸಲಾಗಿದೆ. ಭಕ್ತರು ಹಾಗೂ ಎಲ್ಲ ನಾಗರಿಕರು ಜಾತಿ ಧರ್ಮ ಬೇಧ ಮರೆತು ಯಶಸ್ವಿಗೆ ಪ್ರಾರ್ಥಿಸಬೇಕು ಎಂದರು. ಇನ್ನು ಸಂಜೆ 6 ಗಂಟೆಗೆ ಎಲ್ಲರ ಮನೆಗಳ ಮುಂದೆ ಐದು ಹಣತೆಗಳ ಬೆಳಗಿಸಿ ಶ್ರೀ ರಾಮ ದೇಗುಲ ನಿರ್ಮಾಣಕ್ಕೆ ಶುಭ ಹಾರೈಸಬೇಕು ಎಂದು ತಿಳಿಸಿದ್ದಾರೆ.

    ಈ ವೇಳೆ ಮುಖಂಡರಾದ ಡಾ.ಎಚ್.ಎನ್.ಪಿ.ವಿಠಲ್, ಸಂಸ್ಕಾರ ಭಾರತಿಯ ಶ್ರೀಶೈಲ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಬಸವನಗೌಡ್ರು, ಮುಖ್ಯಶಿಕ್ಷಕರಾದ ಆರ್.ಕೊಟ್ರಪ್ಪ, ಡಿ.ದುರುಗಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts