More

    ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ

    ಕನಕಗಿರಿ: ಅಯೋಧ್ಯೆ ಮಾದರಿಯಲ್ಲಿ ಹನುಮ ಜನ್ಮಸ್ಥಳವಾದ ಅಂಜನಾದ್ರಿಯನ್ನೂ ಅಭಿವೃಧ್ಧಿ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು, ಸಂಸದರು ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಪ್ರಧಾನ ಮಂತ್ರಿ ಅಡಿಗಲ್ಲು ನೆರವೇರಿಸಿರುವ ಪ್ರಯುಕ್ತ ಕನಕಾಚಲಪತಿ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿ, ಜ್ಯೋತಿ ಬೆಳೆಗಿಸಿ ಮಾತನಾಡಿದರು.

    ರಾಮ ಮಂದಿರಕ್ಕೆ ಅಡಿಗಲ್ಲು ಹಾಕುವ ಮೂಲಕ 500 ವರ್ಷಗಳ ನಂತರ ಇತಿಹಾಸ ಮರುಕಳಿಸಿದಂತಾಗಿದೆ. ಗಂಗಾವತಿಯ ಅಂಜನಾದ್ರಿಗೂ ಮತ್ತು ಅಯೋಧ್ಯೆ ರಾಮ ಮಂದಿರಕ್ಕೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಅಂಜನಾದ್ರಿ ಅಭಿವೃದ್ಧಿಗೆ ಒತ್ತು ನೀಡಲಾವುದು ಎಂದರು.

    ಪದಾಧಿಕಾರಿಗಳಾದ ರಾಜಾ ಶರತ್ಚಂದ್ರ ನಾಯಕ, ಸುರೇಶ ಗುಗ್ಗಳಶೆಟ್ಟಿ, ಮೃತ್ಯುಜಯ ವಸ್ತ್ರದ್, ಪರುಶೋತ್ತಮರೆಡ್ಡಿ ಮಾದಿನಾಳ, ನಾಗಭೂಷಣ ಜನಾದ್ರಿ, ಹನುಮೇಶ ಯಲಬುರ್ಗಿ, ರಾಚಪ್ಪ ಬ್ಯಾಳಿ, ಕೃಷ್ಣವೇಣಿ ಬೋಂದಾಡೆ, ದೇಮಮ್ಮ ಹುಲಿಹೈದರ್, ಗ್ಯಾನಪ್ಪ ಚಿಕ್ಕಖೇಡಾ, ವೀರೇಶ ತಗ್ಗಿಮನಿ, ಹರೀಶ ಪೂಜಾರ, ತಿಪ್ಪಣ ಮಡಿವಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts