More

    ಶ್ರವಣದೋಷ ಜಾಗೃತಿ ಅವಶ್ಯ; ಡಾ.ಕೆ.ಪಿ. ಕಾಂತರಾಜು ಅಭಿಮತ

    ರಾಮನಗರ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್‌ಸಿಎಚ್ ವಿಭಾಗ, ಜಿಲ್ಲಾ ಎನ್‌ಪಿಪಿಸಿಡಿ ಟಕದ ವತಿಯಿಂದ ವಿಶ್ವ ಶ್ರವಣ ದಿನದ ಅಂಗವಾಗಿ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಶ್ರವಣ ತಪಾಸಣೆ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಪಿ.ಕಾಂತರಾಜು, ಗಾಯ ಅಥವಾ ರೋಗದಿಂದ ಉಂಟಾಗುವ ಕಿವುಡುತನದ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರವಣ ದೋಷವನ್ನು ಆರಂಭದಲ್ಲಿಯೇ ಗುರುತಿಸಿ ಪರೀಕ್ಷಿಸಿ ಚಿಕಿತ್ಸೆ ಪಡೆಯಬೇಕು. ಶ್ರವಣ ದೋಷವುಳ್ಳ ಎಲ್ಲ ವಯೋವಾನದವರಿಗೂ ವೈದ್ಯಕೀಯ ಪುನರ್ವಸತಿ ಕಲ್ಪಿಸುವುದರಿಂದ ಅವರನ್ನು ಶಾಶ್ವತ ಕಿವುಡುತನದಿಂದ ಹೊರ ತರಬಹುದಾಗಿದೆ ಎಂದರು.

    ಜಿಲ್ಲಾ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ನಾಗೇಂದ್ರ ವಾತನಾಡಿ, ವಾನವನ ಪಂಚೇಂದ್ರಿಯಗಳಲ್ಲಿ ಕಿವಿ ಪ್ರಮುಖ ಅಂಗವಾಗಿದೆ. ಸುತ್ತಮುತ್ತಲಿನ ವಿಷಯಗಳ ಆಲಿಕೆ ಇಲ್ಲದಿದ್ದರೆ ಜೀವನ ಕಷ್ಟವಾಗುತ್ತದೆ. ಹಾಗಾಗಿ ಕಿವಿಯ ಬಗ್ಗೆ ಹೆಚ್ಚಿನ ಜಾಗೃತಿ ಅವಶ್ಯ. ನಾವು ಸೇವಿಸುವ ಔಷಧಗಳು ಕೂಡ ಕಿವಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಮದ ವೈದ್ಯರನ್ನು ಸಂಪರ್ಕಿಸಿಯೇ ಚಿಕಿತ್ಸೆ ಪಡೆದು ಅವರು ಸಲಹೆ ಪಾಲಿಸಬೇಕು ಎಂದರು.

    ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ವಾತನಾಡಿ, ಇತ್ತೀಚೆಗೆ ಹುಟ್ಟುವ ಮಕ್ಕಳಲ್ಲಿ ಶ್ರವಣ ಸಮಸ್ಯೆ ಹೆಚ್ಚುತ್ತಿದ್ದು ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳಿಗೆ 5 ಬಾರಿ ಕಿವಿ ತಪಾಸಣೆ ನಡೆಸಿ ಅವರ ಬೆಳವಣಿಗೆಯಲ್ಲಿ ಶ್ರವಣ ಸಮಸ್ಯೆ ಬಾರದಂತೆ ತಡೆಯುವತ್ತ ಗಮನಹರಿಸಬೇಕು ಎಂದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರಾಜು, ಡಿಎಲ್‌ಒ ಡಾ. ಮಂಜುನಾಥ್, ಡಿಎಸ್‌ಒ ಡಾ. ಕಿರಣ್ ಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ. ಶಶಿಕಲಾ, ಬಿಎಚ್‌ಇಒ ಶಂಭುಲಿಂಗಯ್ಯ, ಆರೋಗ್ಯ ಸಿಬ್ಬಂದಿ, ಅರೆ ವೈದ್ಯಕೀಯ ಶಿಬಿರಾರ್ಥಿಗಳು, ಆಶಾ ಮತ್ತು ಅಂಗವನಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts