More

    ಆರ್‌ಸಿಬಿಗೆ ಮಾಡು ಇಲ್ಲವೆ ಮಡಿ ಒತ್ತಡ: ಕೆಕೆಆರ್ ಎದುರು ಪ್ಲೆಸಿಸ್ ಪಡೆಗೆ ಸಿಗುವುದೇ ಜಯದ ಹಸಿರು ನಿಶಾನೆ?

    ಕೋಲ್ಕತ: ಐಪಿಎಲ್ 17ನೇ ಆವೃತ್ತಿಯ ಪ್ಲೇಆ್ ರೇಸ್‌ನಲ್ಲಿ ಉಳಿಯಲು ‘ಮಾಡು ಇಲ್ಲವೆ ಮಡಿ’ ಒತ್ತಡದಲ್ಲಿ ಸಿಲುಕಿರುವ ಪ್ರವಾಸಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಭಾನುವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಸವಾಲು ಎದುರಿಸಲಿದೆ. ಜತೆಗೆ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಮೂಲಕ ಟೂರ್ನಿಯಲ್ಲಿ ಪುಟಿದೇಳುವ ಸವಾಲು ್ಾ ಡು ಪ್ಲೆಸಿಸ್ ಬಳಗದ ಮುಂದಿದೆ. ಇನ್ನೊಂದು ಜಯ ದಾಖಲಿಸಿದರೆ ಪ್ಲೇಆ್ ರೇಸ್‌ನಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳುವ ಹಂಬಲದಲ್ಲಿ ಶ್ರೇಯಸ್ ಅಯ್ಯರ್ ಪಡೆ ಕಣಕ್ಕಿಳಿಯಲಿದೆ.

    ಟೂರ್ನಿಯಲ್ಲಿ ಇದುವರೆಗೆ ಉಭಯ ತಂಡಗಳು ಭಿನ್ನ ಲಿತಾಂಶ ಕಂಡಿವೆ. ಆರ್‌ಸಿಬಿ ತಂಡ ಆಡಿರುವ 7 ಪಂದ್ಯಗಳಲ್ಲಿ 1 ಗೆಲುವು, 6 ಸೋಲು ಅನುಭವಿಸಿ 2 ಅಂಕದೊಂದಿಗೆ ಅಂಕಪಟ್ಟಿಯ ಕೊನೇ ಸ್ಥಾನದಲ್ಲಿದೆ. ಸತತ 5 ಸೋಲಿನೊಂದಿಗೆ, ಗೆಲುವಿನ ಲಯಕ್ಕೆ ಮರಳಲು ಪರದಾಡುತ್ತಿರುವ ಆರ್‌ಸಿಬಿ ಮುಂದಿನ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ತವರಿನಿಂದ ಹೊರಗೆ ಆಡಲಿದ್ದು, ಪ್ಲೇಆ್ ರೇಸ್‌ನಲ್ಲಿ ಉಳಿಯಲು ಗೆಲುವಿನ ಜತೆಗೆ ರನ್‌ರೇಟ್ ಸುಧಾರಿಸಿಕೊಳ್ಳುವ ಬಹುದೊಡ್ಡ ಸವಾಲು ಹೊಂದಿದೆ. ಮತ್ತೊಂದೆಡೆ ಕೆಕೆಆರ್ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು, 2 ಸೋಲು ಅನುಭವಿಸಿ 8 ಅಂಕ ಕಲೆಹಾಕಿದೆ. ಆದರೆ ತವರಿನಲ್ಲಿ ಹಿಂದಿನ ಪಂದ್ಯದಲ್ಲಿ 200 ಪ್ಲಸ್ ರನ್ ಪೇರಿಸಿ ಸೋತಿರುವುದು ಕೊಂಚ ಹಿನ್ನಡೆ ಎನಿಸಿದೆ. ಆದರೆ ಆರ್‌ಸಿಬಿ ಎದುರು ಉತ್ತಮ ದಾಖಲೆ ಹೊಂದಿರುವ ಕೆಕೆಆರ್ ಗೆಲುವಿನ ಹಾದಿಗೆ ಮರಳುವ ತವಕದಲ್ಲಿದೆ. ಆರ್‌ಸಿಬಿ ಇನ್ನೊಂದು ಪಂದ್ಯ ಸೋತರೂ 16 ವರ್ಷದ ಬಳಿಕ ಪ್ರಶಸ್ತಿ ಗೆಲ್ಲುವ ಆಸೆ ಬಹುತೇಕ ಕೊನೆಯಾಗಲಿದೆ.

    ಸೇಡು ತೀರಿಸುವ ಜತೆಗೆ ಪುಟಿದೇಳುವ ಸವಾಲು: ಹಾಲಿ ವರ್ಷ 2ನೇ ಬಾರಿಗೆ ಉಭಯ ತಂಡಗಳ ಕಾದಾಟ ನಡೆಸಲಿದ್ದು, ಟೂರ್ನಿಯ ಹಿಂದಿನ ಮೂರು ಮುಖಾಮುಖಿಗಳಲ್ಲಿ ಕೆಕೆಆರ್ ಎದುರು ಆರ್‌ಸಿಬಿ ಗೆಲುವು ದಾಖಲಿಸುವಲ್ಲಿ ವಿಲವಾಗಿದೆ. ಉಭಯ ತಂಡಗಳ ನಡುವೆ ಮಾ.29 ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ 7 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚು ಅವಲಂಬಿತವಾಗಿರುವ ಆರ್‌ಸಿಬಿಗೆ ಬೌಲಿಂಗ್ ವಿಭಾಗದ್ದೇ ಚಿಂತೆ. ಹಿಂದಿನ ಪಂದ್ಯದಲ್ಲಿ 4 ಬೌಲರ್‌ಗಳು 50ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಕನ್ನಡಿಗ ವೈಶಾಕ್ ವಿಜಯ್‌ಕುಮಾರ್ ಕೂಡ ದುಬಾರಿ ಆಗಿದ್ದಾರೆ. ್ಾ ಡು ಪ್ಲೆಸಿಸ್ (232 ರನ್), ವಿರಾಟ್ ಕೊಹ್ಲಿ (361), ದಿನೇಶ್ ಕಾರ್ತಿಕ್ (226) ಪ್ರಮುಖ ಆಟಗಾರರಿಗೆ ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಲಭಿಸಿದರಷ್ಟೇ ಬಲಿಷ್ಠ ನಿರ್ವಹಣೆ ಸಾಧ್ಯ.

    ದುಬಾರಿ ಆಟಗಾರರು ಕಣಕ್ಕೆ: ಟೂರ್ನಿಗೂ ಮುನ್ನ ಮುಂಬೈ ತಂಡದಿಂದ ಆರ್‌ಸಿಬಿಗೆ ವರ್ಗಾವಣೆಗೊಂಡಿರುವ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಅವರಿಂದ ಇದುವರೆಗೆ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ₹11.5 ಕೋಟಿಗೆ ಖರೀದಿಸಲಾಗಿದ್ದ ಅಲ್ಜಾರಿ ಜೋಸ್ೆ ಸಹ ತಂಡಕ್ಕೆ ದುಬಾರಿ ಆಗಿದ್ದಾರೆ. ಜತೆಗೆ ಬದಲಿ ಆಟಗಾರನಾಗಿ ಸ್ಥಾನ ತುಂಬಬಲ್ಲ ಸೂಕ್ತ ಬೌಲರ್‌ಗಳ ಕೊರತೆಯೂ ತಂಡದಲ್ಲಿದೆ. ಲಾಕಿ ರ್ಗ್ಯುಸನ್ ಸಹ ಹಿಂದಿನ ಪಂದ್ಯದಲ್ಲಿ ದುಬಾರಿ ಆಗಿದ್ದಾರೆ. ಸನ್‌ರೈಸರ್ಸ್‌ ವಿರುದ್ಧ ವಿಶ್ರಾಂತಿ ಪಡೆದಿದ್ದ ಸಿರಾಜ್ ಜತೆಗೆ ಗ್ರೀನ್ ತಂಡಕ್ಕೆ ಮರಳುವ ಸಾಧ್ಯತೆಗಳಿವೆ. ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ₹ 24.75 ಕೋಟಿಗೆ ಕೆಕೆಆರ್ ಸೇರಿದ ವೇಗಿ ಮಿಚೆಲ್ ಸ್ಟಾರ್ಕ್ ಸಹ ಕಣಕ್ಕಿಳಿಯಲಿದ್ದು, ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 5 ವಿಕೆಟ್ ಮಾತ್ರ ಪಡೆದಿದ್ದಾರೆ.

    ಹಸಿರು ಜೆರ್ಸಿ:
    ಪ್ರತಿ ವರ್ಷ ಪರಿಸರ ಜಾಗೃತಿಗಾಗಿ ತವರಿನ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದ್ದ ಆರ್‌ಸಿಬಿ, ಈ ಬಾರಿ ಕೋಲ್ಕತದಲ್ಲಿ ಕೆಕೆಆರ್ ವಿರುದ್ಧ ಹಸಿರು ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಆರ್‌ಸಿಬಿ ತವರಿನಿಂದ ಹೊರಗೆ ಮೊದಲ ಬಾರಿ ಹಸಿರು ಜೆರ್ಸಿಯಲ್ಲಿ ಆಡಲಿದೆ. ಈ ಹಸಿರು ಜೆರ್ಸಿ ಶೇ. 100 ಮರುಬಳಕೆಯ ವಸ್ತುಗಳಿಂದ ತಯಾರಿಸಲಾಗಿರುತ್ತದೆ. ಕೋಲ್ಕತದಲ್ಲಿ ಸೂರ್ಯನ ತಾಪ ಹೆಚ್ಚಿದ್ದು, ಪಂದ್ಯದ ಸಮಯದಲ್ಲಿ 41 ಡಿಗ್ರಿ ತಲುಪುವ ಸಾಧ್ಯತೆಗಳಿವೆ ಎನ್ನಲಾಗಿದೆ.

    3: ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ 250 ಪಂದ್ಯ ಆಡಿದ 3ನೇ ಆಟಗಾರ ಎನಿಸಲಿದ್ದಾರೆ. ಧೋನಿ, ರೋಹಿತ್ ಶರ್ಮ ಮೊದಲಿಬ್ಬರು.

    ಮುಖಾಮುಖಿ: 33
    ಆರ್‌ಸಿಬಿ: 14
    ಕೆಕೆಆರ್: 19
    ಆರಂಭ: ಮಧ್ಯಾಹ್ನ 3.30
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts