ಬಾಳೆಹೊನ್ನೂರು: ಕೇಂದ್ರ ಸರ್ಕಾರದ ಪ್ರತಿಷ್ಠಿತ ವಿಜ್ಞಾನ ಜ್ಯೋತಿ ಕಾರ್ಯಕ್ರಮದಲ್ಲಿ ಸೀಗೋಡು ಜವಾಹರ್ ನವೋದಯ ವಿದ್ಯಾಲಯ ಹಲವು ಪ್ರಶಸ್ತಿ ಪಡೆದಿದೆ ಎಂದು ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್‌ಕುಮಾರ್ ತಿಳಿಸಿದ್ದಾರೆ.
ಬಾಲಕಿಯರನ್ನು ವಿಜ್ಞಾನ ಜ್ಯೋತಿ ಕಾರ್ಯಕ್ರಮದಡಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ ಕ್ಷೇತ್ರದಲ್ಲಿ ಸಶಕ್ತಗೊಳಿಸಿ ವಿಜ್ಞಾನದ ಮುಖ್ಯವಾಹಿನಿಗೆ ತರುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಸೀಗೋಡು ವಿದ್ಯಾಲಯದ ಸಾಧನೆ ಗುರುತಿಸಿ ಹೈದರಾಬಾದ್ ವಲಯದಲ್ಲಿ ಅತ್ಯುತ್ತಮ ವಿದ್ಯಾಲಯ ಎಂಬ ಪ್ರಶಸ್ತಿ ಪ್ರದಾನ ಮಾಡಿದೆ. ಹಲವು ವಿದ್ಯಾರ್ಥಿಗಳಿಗೂ ಪ್ರಶಸ್ತಿ ದೊರೆತಿದ್ದು, ವಿಜ್ಞಾನ ಜ್ಯೋತಿ ಯೋಜನೆ ಪ್ರಭಾರ ಶಿಕ್ಷಕ ಎ.ರವಿ ಅವರಿಗೂ ವರ್ಷದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಘೋಷಿಸಿದೆ ಎಂದು ಹೇಳಿದ್ದಾರೆ.