More

    ’24×7 ಗಂಟೆಯೂ ನಿಮಗಾಗಿ ಲಭ್ಯ ಇರುತ್ತೇನೆ..ಕೇಂದ್ರ, ರಾಜ್ಯಗಳು ಒಗ್ಗಟ್ಟಾಗಿ ಕರೊನಾ ವಿರುದ್ಧ ಹೋರಾಡೋಣ’-ಸಿಎಂಗಳಿಗೆ ಪಿಎಂ ಭರವಸೆ

    ನವದೆಹಲಿ: ದೇಶದಲ್ಲಿ ಲಾಕ್​ಡೌನ್​ ಇದ್ದರೂ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಬದಲಿಗೆ ದಿನೇದಿನೆ ಏರುತ್ತಲೇ ಇದೆ. ಹಾಗಾಗಿ ಲಾಕ್​ಡೌನ್​ ಮುಂದುವರಿಸುವುದು ಅನಿವಾರ್ಯ ಎಂಬುದು ಬಹುತೇಕ ರಾಜ್ಯಗಳ ಅಭಿಪ್ರಾಯ.

    ಇಂದು ಎಲ್ಲ ರಾಜ್ಯಗಳ ಕರೊನಾ ಪರಿಸ್ಥಿತಿ ಬಗ್ಗೆ ವಿವರ ಪಡೆಯಲು, ಲಾಕ್​ಡೌನ್​ ವಿಸ್ತರಣೆಯ ಬಗ್ಗೆ ಅಭಿಪ್ರಾಯ, ಸಲಹೆ ಕೇಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದರು.

    ಬೆಳಗ್ಗೆ 11ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ, ಪಂಜಾಬ್​ನ ಅಮರಿಂದರ್​ ಸಿಂಗ್​, ಬಿಹಾರದ ನಿತೀಶ್​ ಕುಮಾರ್​, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಹರಿಯಾಣದ ಮನೋಹರ್​ ಲಾಲ್​ ಖಟ್ಟರ್​, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್​, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​, ಛತ್ತೀಸ್​ಗಢದ ಭೂಪೇಶ್​ ಬಾಘೇಲ್​, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ಕೇರಲದ ಪಿಣರಾಯಿ ವಿಜಯನ್​, ಒಡಿಶಾದ ನವೀನ್​ ಪಟ್ನಾಯಕ್​, ಪುದುಚೆರಿಯ ವಿ.ನಾರಾಯಣಸ್ವಾಮಿ, ಮಧ್ಯಪ್ರದೇಶದ ಶಿವರಾಜ್​ ಸಿಂಗ್ ಚೌಹಾಣ್ ಸೇರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಪಾಲ್ಗೊಂಡಿದ್ದರು.

    ಹೋಮ್​ ಮೇಡ್​ ಮಾಸ್ಕ್​ ಧರಿಸಿಯೇ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಭರವಸೆಯೊಂದನ್ನು ನೀಡಿದ್ದಾರೆ.

    ನಾನು ನಿಮ್ಮೆಲ್ಲರೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತೇನೆ. ಏನೇ ಮುಖ್ಯವಾದ ವಿಚಾರಗಳಿದ್ದರೂ ನಾವು ಫೋನ್​ನಲ್ಲಿ ಚರ್ಚಿಸಿಕೊಳ್ಳೋಣ. 24×7 ಗಂಟೆಗಳೂ ನಾನು ನಿಮಗಾಗಿ ಲಭ್ಯ ಇರುತ್ತೇನೆ ಎಂದು ಮೋದಿಯವರು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು ಕರೊನಾ ವಿರುದ್ಧ ಹೋರಾಡಬೇಕು. ಕರೊನಾದಿಂದ ಜನರನ್ನು ಉಳಿಸಿಕೊಳ್ಳಲು ನಿಖರ ಕಾರ್ಯತಂತ್ರ ರೂಪಿಸಬೇಕು ಎಂದಿದ್ದಾರೆ.

    ಸಂವಾದದಲ್ಲಿ ಪಂಜಾಬ್​, ಮಹಾರಾಷ್ಟ್ರ, ದೆಹಲಿ ಮುಖ್ಯಮಂತ್ರಿಗಳು ಏಪ್ರಿಲ್​ 30ರವರೆಗೆ ಲಾಕ್​ಡೌನ್​ ವಿಸ್ತರಿಸಲು ಮನವಿ ಮಾಡಿಕೊಂಡಿವೆ.

    ಹಾಗೇ ಕರೊನಾ ವಿರುದ್ಧ ಹೋರಾಟಕ್ಕೆ ಪಶ್ಚಿಮಬಂಗಾಳಕ್ಕೆ ವಿಶೇಷ ಪ್ಯಾಕೇಜ್​ ಬಿಡುಗಡೆ ಮಾಡಿಎ ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

    ಲಾಕ್​ಡೌನ್​ ವಿಸ್ತರಿಸಿದರೂ ಕೃಷಿ ಮತ್ತು ಕೈಗಾರಿಕ ವಲಯಗಳಿಗೆ ಸ್ವಲ್ಪ ವಿನಾಯಿತಿ ನೀಡಬೇಕು ಎಂದು ಪಂಜಾಬ್​ ಸಿಎಂ ಸಲಹೆ ನೀಡಿದ್ದಾರೆ. ಹಾಗೇ ಕರೊನಾ ಟೆಸ್ಟಿಂಗ್​ ಕಿಟ್​ಗಳನ್ನು ಆದಷ್ಟು ಶೀಘ್ರವಾಗಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

    ಮಾ.24ರಂದು ಲಾಕ್​ಡೌನ್​ ಘೋಷಣೆಗೂ ಮೊದಲು ಅಂದರೆ ಮಾ.20ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಇದೀಗ ಎರಡನೇ ಬಾರಿ ಸಭೆ ನಡೆಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts