More

    ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿಯದೇ ಜಪ…!

    ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಕದನವೇ ಹಾಗೆ. ಎರಡು ತಂಡಗಳ ಆಟಗಾರರು ಮೈದಾನದಲ್ಲಿ ಕಡುವೈರಿಗಳಂತೆ ಕಾದಾಡುವುದು ಸಾಮಾನ್ಯ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಮೈದಾನದಲ್ಲೇ ಪರಸ್ಪರ ನಿಂದಿಸಿಕೊಳ್ಳುವುದನ್ನು ನೋಡಿದ್ದೇವೆ. ಯುಎಇಯಲ್ಲಿ 13ನೇ ಐಪಿಎಲ್ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಿದೆ. ಭಾರತ ತಂಡ ಪ್ರತಿಬಾರಿಯೂ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗಲೂ ಆಟಗಾರರನ್ನು ಟಾರ್ಗೆಟ್ ಮಾಡುವುದು ವಾಡಿಕೆಯಾಗಿ ಬಂದಿದೆ. ಆತಿಥೇಯ ತಂಡದ ಹಾಲಿ ಹಾಗೂ ಮಾಜಿ ಆಟಗಾರರಿಗೆ ಈ ಬಾರಿಯೂ ವಿರಾಟ್ ಕೊಹ್ಲಿಯೇ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಸರಣಿ ಆರಂಭಕ್ಕೂ ಮುನ್ನವೇ ಕೊಹ್ಲಿ ಅವರನ್ನು ಹೆಚ್ಚಾಗಿ ಹೊಗಳುತ್ತಿರುವುದೇ ಇದಕ್ಕೆ ಸಾಕ್ಷಿ..

    ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಶಕ್ತಿಶಾಲಿ. ಕೊಹ್ಲಿ ಯಾವುದೇ ಶೈಲಿಯಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡುವರು. ಆಕ್ರಮಣಕಾರಿ ಹಾಗೂ ಸಮಯೋಚಿತದಿಂದಲೂ ಬ್ಯಾಟಿಂಗ್ ಮಾಡುವ ಕಲೆ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಮಾರ್ಕ್ ಟೇಲರ್ ಅಭಿಪ್ರಾಯಪಟ್ಟಿದ್ದಾರೆ. ‘ನನ್ನ ಪ್ರಕಾರ ಅವರೊಬ್ಬ ಶಕ್ತಿಶಾಲಿ ಆಟಗಾರ. ಅವರ ಆಟದ ಬಗ್ಗೆ ಹೇಳುವ ಅಗತ್ಯವೇ ಇಲ್ಲ’ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಜತೆ ಟೇಲರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅವರೊಬ್ಬ ವರ್ಚಸ್ಸುಳ್ಳ ಆಟಗಾರ. ಅವರ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಸದ್ಯ ಮಟ್ಟಿಗೆ ಅವರೊಬ್ಬ ಬೆಸ್ಟ್ ಆಟಗಾರ ಎಂದು 2005 ರಿಂದ 07 ರವರೆಗೆ ಭಾರತ ತಂಡಕ್ಕೆ ತರಬೇತುದಾರರಾಗಿದ್ದ ಗ್ರೇಗ್ ಚಾಪೆಲ್ ತಿಳಿಸಿದ್ದಾರೆ.

    ಆಸ್ಟ್ರೇಲಿಯಾ ಆಟಗಾರರು ವಿರಾಟ್ ಕೊಹ್ಲಿಯನ್ನು ಮೈದಾನದಲ್ಲಿ ದ್ವೇಷಿಸಲು ಇಷ್ಟಪಡುತ್ತೇವೆ, ಜತೆಗೆ ಅಭಿಮಾನಿಯಾಗಿ ಅವರ ಬ್ಯಾಟಿಂಗ್ ನೋಡಲು ಬಯಸುತ್ತೇನೆ ಎಂದು ಟೆಸ್ಟ್ ತಂಡದ ನಾಯಕ ಟಿಮ್ ಪೈನೆ ತಿಳಿಸಿದ್ದಾರೆ. ಪ್ರತಿಬಾರಿಯೂ ಕೊಹ್ಲಿ ಬಗ್ಗೆಯೇ ಸಾಕಷ್ಟು ಪ್ರಶ್ನೆಗಳು ಕೇಳಿ ಬರುತ್ತವೆ. ಆದರೆ, ನನ್ನ ಪಾಲಿಗೆ ಅವರೊಬ್ಬ ಆಟಗಾರನಷ್ಟೇ. ಅವರ ಬಗ್ಗೆ ಹೆದರಿಕೆ ಇಲ್ಲ ಎಂದು ತಿಳಿಸಿದ್ದಾರೆ. ಕೊಹ್ಲಿಯನ್ನು ದ್ವೇಷಿಸಲು ಇಷ್ಟಪಡುತ್ತೇನೆ. ಆದರೆ ಆಟಗಾರನಾಗಿ ಅವರ ಬ್ಯಾಟಿಂಗ್ ನೋಡುವುದೇ ಚೆಂದ ಎಂದು ಹೇಳಿದ್ದಾರೆ. ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಮುಕ್ತಾಯದ ಬಳಿಕ ಕೊಹ್ಲಿ ಪಿತೃತ್ವ ರಜೆ ಮೇಲೆ ಭಾರತಕ್ಕೆ ವಾಪಸಾಗಲಿದ್ದಾರೆ.

    ಪರಸ್ಪರ ಪ್ಲ್ಯಾಂಕ್ ಚಾಲೆಂಜ್ ಹಾಕಿಕೊಂಡ ಕ್ರಿಕೆಟಿಗರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts