More

    ಮ್ಯಾಕ್ಸಿ ಸ್ಫೋಟಕ ಶತಕ, ಆಡಂ ಜಂಪಾ ಸ್ಪಿನ್​ ಮೋಡಿ: ನೆದರ್ಲೆಂಡ್ಸ್​ ವಿರುದ್ಧ ಆಸಿಸ್​ಗೆ 309 ರನ್​ಗಳ ದಾಖಲೆ ಗೆಲುವು

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 24ನೇ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ಆಸ್ಟ್ರೇಲಿಯಾ ತಂಡ 309 ರನ್​ಗಳ ಭಾರೀ ಅಂತರದಿಂದ ದಾಖಲೆಯ ಜಯ ಸಾಧಿಸಿದೆ. ಡೇವಿಡ್​ ವಾರ್ನರ್​ ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್ ಬ್ಯಾಟಿಂಗ್​ ಅಬ್ಬರ ಮತ್ತು ಬೌಲರ್​ಗಳ ದಾಳಿಗೆ ನಲುಗಿದ ನೆದರ್ಲೆಂಡ್ಸ್​, ಆಸಿಸ್​ ವಿರುದ್ಧ ಸುಲಭ ತುತ್ತಾಯಿತು.

    ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 399 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಡೇವಿಡ್​ ವಾರ್ನರ್​ 93 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್​ ನೆರವಿನೊಂದಿಗೆ 104 ರನ್​ಗಳ ಶತಕ ಸಂಭ್ರಮಿಸಿದರು. ಸ್ಟೀವ್​ ಸ್ಮಿತ್​ (71) ಹಾಗೂ ಮಾರ್ನಸ್ ಲ್ಯಾಬುಶೇನ್​ (62) ರನ್​ ಗಳಿಸಿದರೆ, 6ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಗ್ಲೇನ್​ ಮ್ಯಾಕ್ಸ್​ವೆಲ್ ಅಬ್ಬರಿಸಿ ಬೊಬ್ಬಿರಿದರು.​ ಕೇವಲ 44 ಎಸೆತಗಳಲ್ಲಿ 9 ಬೌಂಡರಿ, 8 ಸಿಕ್ಸರ್​ ನೆರವಿನೊಂದಿಗೆ 106 ರನ್​ ಗಳಿಸಿ ಮಿಂಚುವ ಮೂಲಕ ತಮ್ಮ ತಂಡವೂ ಬೃಹತ್​ ಮೊತ್ತ ಕಲೆ ಹಾಕಲು ನೆರವಾದರು.

    ಐರ್ಲೆಂಡ್​ ಪರ ವ್ಯಾನ್​ ಬೀಕ್​ 4 ವಿಕೆಟ್​ ಪಡೆದು ಮಿಂಚಿದರೆ, ಬಾಸ್​ ಡಿ ಲೀಡ್​ 2 ಹಾಗೂ ಆರ್ಯನ್​ ದತ್​ 1 ವಿಕೆಟ್​ ಪಡೆದರು.

    ಆಸಿಸ್​ ನೀಡಿದ 400 ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್​, ಆಸಿಸ್​ ಬೌಲರ್​ಗಳ ದಾಳಿಗೆ ತತ್ತರಿಸಿ 21 ಓವರ್​ಗಳಲ್ಲಿ ಕೇವಲ 90 ರನ್​ಗಳಿಗೆ ಸರ್ವಪತನ ಕಂಡಿತು. ವಿಕ್ರಮ್​ ಸಿಂಗ್​ ಗಳಿಸಿದ 25 ರನ್​ ತಂಡದ ವೈಯಕ್ತಿಕ ಗರಿಷ್ಠ ರನ್​ ಆಗಿದೆ. ಉಳಿದಂತೆ ಯಾವೊಬ್ಬ ಆಟಗಾರನು ಸಹ ಬ್ಯಾಟಿಂಗ್​ ಛಾಪು ಮೂಡಿಸಲಿಲ್ಲ. ಹೀಗಾಗಿ ಅಲ್ಪ ಮೊತ್ತಕ್ಕೆ ಆಸಿಸ್​ ವಿರುದ್ಧ ಮಂಡಿಯೂರಿತು.

    ಆಸಿಸ್​ ಪರ ಬೌಲಿಂಗ್​ನಲ್ಲಿ ಜಾದೂ ಮಾಡಿದ ಆ್ಯಡಂ ಜಂಪಾ 4 ವಿಕೆಟ್​ ಕಬಳಿಸಿ ಗಮನ ಸೆಳೆದರು. ಉಳಿದಂತೆ ಮಿಚೆಲ್​ ಮಾರ್ಷ್​ 2 ವಿಕೆಟ್​ ಪಡೆದರೆ, ಪ್ಯಾಟ್​ ಕ್ಯುಮಿನ್ಸ್​, ಜೋಶ್​ ಹಜಾಲ್​ವುಡ್​ ಹಾಗೂ ಮಿಚೆಲ್​ ಸ್ಟಾರ್ಕ್​ ತಲಾ ಒಂದೊಂದು ವಿಕೆಟ್​ ಪಡೆದರು. (ಏಜೆನ್ಸೀಸ್​)

    ನಿಖಿಲ್ ಕುಮಾರಸ್ವಾಮಿ ಪೆಂಡೆಂಟ್; ಹುಲಿ ಉಗುರಲ್ಲ, ಸಿಂಥೆಟಿಕ್ : ಕುಮಾರಸ್ವಾಮಿ ಸ್ಪಷ್ಟನೆ

    ‘ತುಘಲಕ್’ ನಾಟಕ ಪ್ರದರ್ಶನಕ್ಕೆ 100ರ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts