More

    ಭಾರತದಿಂದ ಆಸ್ಟ್ರೇಲಿಯಾಕ್ಕೆ ಬಂದರೆ ಐದು ವರ್ಷ ಜೈಲು ಶಿಕ್ಷೆ! ಟಫ್​ ರೂಲ್ಸ್​ ಜಾರಿ

    ಸಿಡ್ನಿ: ಭಾರತದಲ್ಲಿ ಕರೊನಾ ಸೋಂಕಿನ ಅಬ್ಬರ ಹೆಚ್ಚಾದ ಬೆನ್ನಲ್ಲೇ ಆಸ್ಟ್ರೇಲಿಯಾ, ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಶೀಘ್ರವೇ ದೇಶಕ್ಕೆ ವಾಪಾಸಾಗುವಂತೆ ಕೆಲ ದಿನಗಳ ಹಿಂದೆ ಸೂಚಿಸಿತ್ತು. ಇದೀಗ ಇನ್ನೂ ಕಠಿಣ ನಿಯಮಕ್ಕೆ ಮುಂದಾಗಿರುವ ಆಸ್ಟ್ರೇಲಿಯಾ, ಭಾರತದಲ್ಲಿರುವ ತನ್ನ ಪ್ರಜೆಗಳನ್ನು ದೇಶಕ್ಕೆ ವಾಪಾಸು ಬರದಂತೆ ತಡೆದಿದೆ. ನಿಯಮ ಮೀರಿ ದೇಶದೊಳಗೆ ಬಂದಿದ್ದೇ ಆದರೆ ಐದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವುದಾಗಿ ತಿಳಿಸಿದೆ.

    ಮೇ 3ರಿಂದ ಇಂತದ್ದೊಂದು ನಿಯಮ ಆಸ್ಟ್ರೇಲಿಯಾದಲ್ಲಿ ಜಾರಿಯಲ್ಲಿರಲಿದೆ. ಆಸ್ಟ್ರೇಲಿಯಾದ ಪ್ರಜೆ ಭಾರತದಲ್ಲಿ 14 ದಿನ ತಂಗಿದ್ದರೆ ಅವರು ದೇಶಕ್ಕೆ ವಾಪಾಸಾಗುವಂತಿಲ್ಲ. ಹಾಗೊಂದು ವೇಳೆ ಕಣ್ತಪ್ಪಿಸಿ ಮರಳಿದ್ದೇ ಆದಲ್ಲಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು. ಐದು ವರ್ಷಗಳ ಜೈಲು ಶಿಕ್ಷೆಯ ಜತೆ ದಂಡವನ್ನೂ ವಿಧಿಸಲಾಗುವುದು ಎಂದು ಆಸ್ಟ್ರೇಲಿಯಾ ಆರೋಗ್ಯ ಸಚಿವ ಗ್ರೆಗ್ ಹಂಟ್ ತಿಳಿಸಿದ್ದಾರೆ.

    ಭಾರತೀಯರ ಮತ್ತು ಅಲ್ಲಿರುವ ಆಸ್ಟ್ರೇಲಿಯಾ ಪ್ರಜೆಗಳ ಬಗ್ಗೆ ನಮಗೆ ಹೃದಯಲ್ಲಿ ನೋವಿದೆ. ಆದರೆ ಅವರು ವಾಪಾಸು ಬರುವುದರಿಂದ ಇಲ್ಲಿರುವ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಈ ವಾರವೂ ಬಿಗ್​ಬಾಸ್​ಗೆ ಬರಲ್ಲ ಕಿಚ್ಚ ಸುದೀಪ್​! ಅನಾರೋಗ್ಯದಿಂದ ಚೇತರಿಸಿಕೊಂಡರೂ ಬಾರದಿರುವುದಕ್ಕೆ ಕಾರಣವೇನು?

    ಆ್ಯಂಕರ್ ಅರುಣ ಬಡಿಗೇರ ತಂದೆ-ತಾಯಿಯನ್ನು ಬಲಿ ತೆಗೆದುಕೊಂಡ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts