More

  ವಿಶ್ವಕಪ್​ಗೆ ಧರ್ಮದ ಲೇಪನ: ಸರಣಿ ಪೋಸ್ಟ್​ ಮೂಲಕ ಭಾರತೀಯರ ಸ್ವಾಭಿಮಾನ ಕೆಣಕಿದ ಪಾಕ್​ ನಟಿ

  ಅಹಮದಾಬಾದ್​: ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಟೀಮ್​ ಇಂಡಿಯಾದ ಸೋಲು ಅಸಂಖ್ಯಾತ ಭಾರತೀಯ ಮನಸ್ಸಿನಲ್ಲಿ ತೀವ್ರ ನೋವುಂಟು ಮಾಡಿದ್ದರೆ, ಆರ್ಥಿಕವಾಗಿ ದಿವಾಳಿಯಾಗಿ ತುತ್ತು ಅನ್ನಕ್ಕೂ ಪರದಾಡುತ್ತಿರುವ ಪಾಕಿಸ್ತಾನಿಗಳಿಗೆ ಹಾಲು ಕುಡಿದಷ್ಟೂ ಆನಂದವಾಗಿದೆ. ತಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದು ಕೊಳೆತು ನಾರುತ್ತಿರುವ ಸಮಯದಲ್ಲಿ ಇನ್ನೊಬ್ಬರ ಸೋಲನ್ನು ಆನಂದಿಸುತ್ತಿರುವ ಪಾಕಿಗಳ ಮನಸ್ಸು ಎಂಥದ್ದು ಎಂಬುದು ಆ ದೇಶದ ದುಸ್ಥಿತಿಯನ್ನು ನೋಡಿದರೆ ಗೊತ್ತಾಗುತ್ತದೆ. ವಿಶ್ವಕಪ್​ ಆರಂಭವಾದಾಗಿನಿಂದಲೂ ಭಾರತದ ವಿರುದ್ಧ ಕಿಡಿಕಾರುತ್ತಿರುವ ಪಾಕ್​ ನಟಿ ಸೆಹರ್​ ಶಿನ್ವಾರಿ ಮತ್ತೊಮ್ಮೆ ತನ್ನ ನಾಲಿಗೆಯನ್ನು ಹರಿಬಿಟ್ಟಿದ್ದಾಳೆ.

  ವಿಶ್ವಕಪ್​ ಟೂರ್ನಿಯಲ್ಲಿ ತಮ್ಮ ತಂಡ ಹೀನಾಯವಾಗಿ ಸೋತಿದ್ದನ್ನು ತಡೆಯಲಾಗದೇ ಭಾರತ ಮೇಲೆ ಕೆಂಡಕಾರುತ್ತಿರುವ ಶಿನ್ವಾರಿ, ತನ್ನ ಎಕ್ಸ್​ ಖಾತೆಯಲ್ಲಿ ಸರಣಿ ಪೋಸ್ಟ್​ ಮಾಡುವ ಮೂಲಕ ಭಾರತೀಯರ ಸ್ವಾಭಿಮಾನ ಕೆಣಕುತ್ತಿದ್ದಾಳೆ. ಭಾರತೀಯ ಅಹಂ ಅನ್ನು ತಲೆ ತಗ್ಗಿಸುವಂತೆ ಮಾಡಿದ ಆಸ್ಟ್ರೇಲಿಯನ್ನರಿಗೆ ಅಭಿನಂದನೆಗಳು ಎಂದಿರುವ ಶಿನ್ವಾರಿ, ಇನ್ನೂ ಒಂದು ಹೆಜ್ಜೆ ಮುಂದೆ ಭಾರತ ನಿಜವಾದ ಮುಸ್ಲಿಮರಿಗೆ ಅಭಿನಂದನೆಗಳು ಎನ್ನುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾಳೆ.

  ಇಷ್ಟಕ್ಕೆ ಸುಮ್ಮನಾಗದ ಆಕೆ, ಪ್ರಧಾನಿ ಮೋದಿ ಭಾರತಕ್ಕೆ ಅಂತಹ ವಿಪತ್ತು ಎಂಬುದನ್ನು ಸಾಬೀತುಪಡಿಸಿದರು. ಭಯೋತ್ಪಾದಕ ಮೋದಿ ತನ್ನ ತಂಡವನ್ನು ಸೋಲಿಸಿದರು. ಮಹಮ್ಮದ್ ಘೋರಿ, ಪೃಥ್ವಿ ರಾಜ್ ಚೌಹಾಣ್​ ಅವರನ್ನು ಯುದ್ಧದಲ್ಲಿ ಸೋಲಿಸಿದ ರೀತಿಯಲ್ಲಿಯೇ ಇಂದು ಆಸ್ಟ್ರೇಲಿಯಾ, ಭಾರತವನ್ನು ಸೋಲಿಸಿದೆ ಎಂಬ ಬರಹಗಳ ಮೂಲಕ ಭಾರತೀಯರನ್ನು ಶಿನ್ವಾರಿ ಕೆಣಕಿದ್ದಾಳೆ. ಭಾರತೀಯರೇ, ನಿನ್ನೆ ಆಸ್ಟ್ರೇಲಿಯಾ ನಿಮಗೆ ನಾಯಿಗೆ ಹೊಡೆದಂತೆ ಹೊಡೆದದ್ದು ಹೇಗೆ? ಎಂದು ಹದ್ದು ಮೀರಿ ಮಾತನಾಡಿದ್ದಾಳೆ.

  ಭಾರತೀಯರ ತಿರುಗೇಟು
  ಕನಿಷ್ಠ ಪಕ್ಷ ನಾವು ಫೈನಲ್​ ಆದರೂ ತಲುಪಿದ್ದೇವೆ. ನಿಮ್ಮ ತಂಡ ಲೀಗ್​ನಲ್ಲೇ ತವರು ಸೇರಿಕೊಂಡಿತು ಎಂದು ನೆಟ್ಟಿಗರು ಶಿನ್ವಾರಿಗೆ ತಿರುಗೇಟು ನೀಡಿದ್ದಾರೆ. ಕ್ರಿಕೆಟ್​ ಅನ್ನು ಧಾರ್ಮಿಕವಾಗಿ ಬದಲಾಯಿಸುತ್ತಿರುವ ನಿನಗೆ ಇನ್ನೇನು ಹೇಳಬೇಕೋ ಗೊತ್ತಾಗುತ್ತಿಲ್ಲ. ನಾಚಿಕೆಯಾಗಬೇಕು ನಿನಗೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದರೆ, ಪ್ರೀತಿಯ ಮಗಳೇ, ನೀನು ಇರುವ ಜಾಗವನ್ನು ಮೊದಲು ನೋಡಿಕೋ, ಮೊದಲು ಅಲ್ಲಿನ ಮುಸ್ಲಿಮರ ಬಗ್ಗೆ ಯೋಚಿಸು. ನಿಮ್ಮಲ್ಲಿ ತಿನ್ನಲು ಸಹ ಆಹಾರದ ಕೊರತೆಯಿದೆ ಮತ್ತು ಹಿಟ್ಟು ಬೇಕಾದರೆ ನಮಗೆ ಹೇಳಿ, ನಾವು ಮಕ್ಕಳನ್ನು ಹಸಿವಿನಿಂದ ಇಡುವುದಿಲ್ಲ, ನಾವು ಕಳುಹಿಸುತ್ತೇವೆ ಎಂದು ಸರಿಯಾಗಿ ತಿರುಗೇಟು ನೀಡಿದ್ದಾರೆ.

  ಯಾರು ಈ ಶಿನ್ವಾರಿ?
  ಸೆಹರ್ ಶಿನ್ವಾರಿ ಹುಟ್ಟಿದ್ದು ಪಾಕಿಸ್ತಾನದ ಹೈದರಾಬಾದ್​ನಲ್ಲಿ. ಖೈಬರ್‌ನಲ್ಲಿ “ಸೈರ್ ಸಾವಾ ಸೈರ್” ಎಂಬ ಹಾಸ್ಯ ಸರಣಿಯೊಂದಿಗೆ 2014 ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದಳು. 2015 ರಲ್ಲಿ ಕರಾಚಿ ಸ್ಟೇಷನ್​ ಮಾಧ್ಯಮದಲ್ಲಿ ಬೆಳಗಿನ ಕಾರ್ಯಕ್ರಮದ ನಿರೂಪಕಿಯಾಗಿಯು ಕೆಲಸ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ನಟನೆ ಮತ್ತು ವೈರಲ್ ವಿಡಿಯೋಗಳಿಂದಲೇ ಸೆಹರ್​ ಹೆಸರುವಾಸಿಯಾಗಿದ್ದಾಳೆ. ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸೆಹರ್​ ತುಂಬಾ ಸಕ್ರಿಯಳಾಗಿದ್ದಾಳೆ. ಇನ್​ಸ್ಟಾಗ್ರಾಂನಲ್ಲಿ 33,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾಳೆ. ಆಕೆಯ ಟ್ವೀಟ್‌ಗಳು ಈ ಹಿಂದೆ ಮಾಧ್ಯಮಗಳ ಗಮನವನ್ನು ಸೆಳೆದಿದ್ದವು. ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಭಾರತವನ್ನು ಸೋಲಿಸಲು ಲೀಗ್​ ಪಂದ್ಯದಲ್ಲಿ ಬಾಂಗ್ಲಾ, ಶ್ರೀಲಂಕಾ, ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ತಂಡಗಳಿಗೆ ಆಫರ್ ನೀಡಿ ಭಾರೀ ಟ್ರೋಲ್​ ಆಗಿದ್ದಳು. ಈಕೆಯ ಕೆಲಸವೇ ಇಷ್ಟು. ತಮ್ಮ ದೇಶದ ಬಗ್ಗೆ ಯೋಚಿಸದೇ ಭಾರತದ ಮೇಲೆ ಕೆಂಡಕಾರುವುದೇ ಈಕೆಯ ದುರುದ್ದೇಶ. ಅದಕ್ಕೆ ಈಕೆಯ ದೇಶ ಇಂದು ಅತ್ಯಂತ ಹೀನ ಸ್ಥಿತಿಯಲ್ಲಿದೆ. (ಏಜೆನ್ಸೀಸ್​)

  ಶ್ರೀಲಂಕಾಗೂ ಆಫರ್ ಕೊಟ್ಟ ಶಿನ್ವಾರಿ: ಈ ಆಫರ್​ ಕೇಳಿ ಲಂಕನ್ನರು ಸೋಲೋದು ಗ್ಯಾರಂಟಿ ಎಂದ ನೆಟ್ಟಿಗರು!

  ಯಾರು ಈ ಸೆಹರ್​ ಶಿನ್ವಾರಿ? ಪ್ರಧಾನಿ ಮೋದಿ ವಿರುದ್ಧ ಮಾತನಾಡಿ ಮಂಗಳಾರತಿ ಮಾಡಿಸಿಕೊಂಡ ನಟಿ

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts