More

    ಬಾರ್ಡರ್​-ಗವಾಸ್ಕರ್​ ಟ್ರೋಫಿ: 3ನೇ ಟೆಸ್ಟ್​ ಪಂದ್ಯದಲ್ಲಿ ಆಸಿಸ್​ ವಿರುದ್ಧ ಭಾರತಕ್ಕೆ ಹೀನಾಯ ಸೋಲು

    ಇಂದೋರ್​: ಮಧ್ಯಪ್ರದೇಶದ ಇಂದೋರ್​ನಲ್ಲಿರುವ ಹೋಲ್ಕರ್​ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್​-ಗವಾಸ್ಕರ್​ ಟ್ರೋಫಿಯ ಮೂರನೇ ಟೆಸ್ಟ್​ ಪಂದ್ಯವು ಮೂರೇ ದಿನಕ್ಕೆ ಮುಕ್ತಾಯವಾಗಿದೆ. ಆಸ್ಟ್ರೇಲಿಯಾದ ಸ್ಪಿನ್​ ದಾಳಿಗೆ ತತ್ತರಿಸಿದ ಭಾರತ ಕೇವಲ 76 ರನ್​ ಗುರಿ ನೀಡಿತ್ತು. ಇಂದು ಗುರಿ ಬೆನ್ನತ್ತಿದ ಆಸಿಸ್​ ಪಡೆ ಸುಲಭವಾಗಿ ಗೆಲುವು ದಾಖಲಿಸಿದೆ. ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಆಸ್ಟ್ರೇಲಿಯಾ ಹಿನ್ನಡೆ ಸಾಧಿಸಿದ್ದರೂ ಸರಣಿ ಸಮ ಮಾಡಿಕೊಳ್ಳುವ ಆಸೆ ಇನ್ನೂ ಜೀವಂತವಾಗಿದೆ.

    ಮೂರನೇ ದಿನ ಕೇವಲ 19 ಓವರ್​ ಆಡಲಾಯಿತು. ಏಕದಿನ ಪಂದ್ಯದ ಮಾದರಿಯಲ್ಲಿ ಬ್ಯಾಟ್​ ಬೀಸಿದ ಟ್ರಾವಿಸ್​ ಹೆಡ್​ ಕೇವಲ 53 ಎಸೆತಗಳಲ್ಲಿ 49 ರನ್​ ಗಳಿಸಿ ಅಜೇಯರಾಗಿ ಉಳಿದರು. ಲಬುಶೇನ್​ 58 ಎಸೆತಗಳಲ್ಲಿ 28 ರನ್​ ಕಲೆಹಾಕುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಟೆಸ್ಟ್​ ಪಂದ್ಯ ಗೆಲುವಿನ ಬಳಿಕ ಆಸಿಸ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಫ್​ನಲ್ಲಿ ಮೊದಲ ಪಟ್ಟಕ್ಕೇರಿದೆ.

    ಇದನ್ನೂ ಓದಿ: ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಮಣೆ ಹಾಕುವ ಅಗತ್ಯವಿಲ್ಲ: ಸ್ವಪಕ್ಷ BJP ವಿರುದ್ಧವೇ ಈರಣ್ಣ ಕಡಾಡಿ ಕಿಡಿ

    ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 2ನೇ ದಿನವಾದ ಗುರುವಾರ 4 ವಿಕೆಟ್​ಗೆ 156 ರನ್​ಗಳಿಂದ ಆಟ​ ಮುಂದುವರಿಸಿದ ಆಸಿಸ್​, 197 ರನ್‌ ಗಳಿಗೆ ಸರ್ವಪತನ ಕಂಡಿತು. 88 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ, ಚೇತೇಶ್ವರ ಪ್ರಚಾರ (59 ರನ್, 142 ಎಸೆತ, 5 ಬೌಂಡು, 1 ಸಿಸ್ಟರ್) ಏಕಾಂಗಿ ಹೋರಾಟದ ನಡುವೆ ಇತರ ಬ್ಯಾಟ‌ರ್​ಗಳ ವೈಫಲ್ಯದಿಂದಾಗಿ 153 ರನ್‌ಗಳಿಗೆ ಆಲೌಟ್ ಆಯಿತು. ಪ್ರವಾಸಿ ಆಸ್ಟ್ರೇಲಿಯಾ ತಂಡದ ಸ್ಪಿನ್​ ಭಾರತಕ್ಕೆ ತಿರುಗುಬಾಣ ಆಯಿತು. ಅನುಭವಿ ಸ್ಪಿನ್​ ನಾಥನ್​ ಲ್ಯಾನ್‌ (8 ವಿಕೆಟ್​) ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಗೆಲುವಿಗೆ ಕೇವಲ 76 ರನ್ ಸವಾಲು ನೀಡಿತು.

    ಅಲ್ಪ ಮೊತ್ತದ ಚೇಸಿಂಗ್​ ಅನ್ನು ಆಸೀಸ್ 3ನೇ ದಿನದಾಟದಲ್ಲಿ ಆರಂಭಿಸಿದ ಆಸಿಸ್​ ಪಡೆ 19 ಓವರ್​ಗಳಲ್ಲಿ ಪಂದ್ಯವನ್ನು ಮುಗಿಸಿ ವಿಜಯೋತ್ಸವ ಆಚರಿಸಿದೆ. (ಏಜೆನ್ಸೀಸ್​)

    ಕ್ಯಾನ್ಸರ್​ ಎಂದು ಸುಳ್ಳು ಹೇಳಿ ಕ್ಲಾಸ್​ಮೇಟ್ಸ್​, ಶಿಕ್ಷಕರಿಂದ 15 ಲಕ್ಷ ವಸೂಲಿ! ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

    ದುಡ್ಡು ಸಿಕ್ಕ ತಕ್ಷಣ ಭ್ರಷ್ಟಾಚಾರ ಅಂತ ಹೇಳೋಕ್ಕಾಗಲ್ಲ: ಸಚಿವ ಮಾಧುಸ್ವಾಮಿ ಸಮರ್ಥನೆ

    ನನ್ನನ್ನು ರೂಮಿಗೆ ಕರೆದು… ಕ್ರಿಸ್ಟಿಯಾನೋ ರೊನಾಲ್ಡೋ ವಿರುದ್ಧ ಗಂಭೀರ ಆರೋಪ ಮಾಡಿದ ಮಾಡೆಲ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts