ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಆಸೀಸ್ ಆಲ್ರೌಂಡರ್ ಕ್ಯಾಮರೊನ್ ವೈಟ್

web
Published on

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಕ್ಯಾಮರೊನ್ ವೈಟ್ ಶುಕ್ರವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ೋಷಿಸಿದ್ದಾರೆ. ಇದರೊಂದಿಗೆ ಕಳೆದ 2 ದಶಕದ ವೃತ್ತಿ ಬದುಕಿನಿಂದ ವೈಟ್ ದೂರ ಉಳಿದಿದ್ದಾರೆ. 37 ವರ್ಷದ ವೈಟ್, ಆಸ್ಟ್ರೇಲಿಯಾ ಪರ 4 ಟೆಸ್ಟ್, 91 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನಾಡಿದ್ದರು. ಜತೆಗೆ ನಿಗದಿತ ಓವರ್‌ಗಳ ಪಂದ್ಯಗಳಿಗೆ 7 ಬಾರಿ ನಾಯಕನಾಗಿದ್ದರು. ಕೋಚಿಂಗ್ ಕ್ಷೇತ್ರದತ್ತ ಗಮನಹರಿಸುವುದಾಗಿ ವೈಟ್ ಹೇಳಿದ್ದಾರೆ. ನಾನು ಕ್ರಿಕೆಟ್ ಆಡುವ ಸಮಯ ಮುಗಿದೆ. ಹೀಗಾಗಿ ಕ್ರಿಕೆಟ್‌ಗೆ ನಿವೃತ್ತಿ ೋಷಿಸಿ ಮುಂದಿನ ದಿನಗಳಲ್ಲಿ ಕೋಚಿಂಗ್‌ನತ್ತ ಗಮನಹರಿಸುವೆ.

ಕಳೆದ ಅವಧಿಯಲ್ಲಿ ಅಡಿಲೇಡ್ ಸ್ಟ್ರೈಕರ್ಸ್‌ ಪರ ಕೇವಲ 6 ಪಂದ್ಯಗಳನ್ನಷ್ಟೇ ಆಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ವೈಟ್, 6 ಶೇಫೀಲ್ಡ್ ಶೀಲ್ಡ್ ಸೇರಿದಂತೆ 10 ಬಾರಿ ದೇಶೀಯ ಕ್ರಿಕೆಟ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಸದ್ಯ ವಿಕ್ಟೋರಿಯಾ 19 ವಯೋಮಿತಿ ತಂಡದ ಸಲಹೆಗಾರರಾಗಿದ್ದಾರೆ. ಆನ್‌ಲೈನ್ ಮೂಲಕ ತರಬೇತಿ ನೀಡುತ್ತಿದ್ದಾರೆ. ಕ್ಯಾಮರೊನ್ ವೈಟ್, ಆಸೀಸ್ ಪರ 91 ಏಕದಿನ ಪಂದ್ಯಗಳಿಂದ 2 ಶತಕ ಸೇರಿದಂತೆ 2072 ರನ್‌ಗಳಿಸಿದ್ದರೆ, 47 ಟಿ20 ಪಂದ್ಯಗಳಿಂದ 984 ರನ್ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಆರ್‌ಸಿಬಿ ಪ್ರತಿನಿಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net