More

    ಎನ್‌ಇಪಿ ರದ್ದತಿಗೆ ಎಬಿವಿಪಿ ವಿರೋಧ

    ಔರಾದ್: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಇಂದಿನ ಅವಶ್ಯಕವಿದೆ. ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎನ್‌ಇಪಿ ಜಾರಿಗೆ ತಂದಿದ್ದು, ಈಗಿನ ಸರ್ಕಾರ ರದ್ದುಗೊಳಿಸುತ್ತಿರುವ ಕ್ರಮ ಖಂಡನೀಯ. ಇದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಒಂದು ಕೋಟಿ ಸಹಿ ಸಂಗ್ರಹಕ್ಕೆ ಮುಂದಾಗಿದೆ ಎಂದು ಪರಿಷತ್ ತಾಲೂಕು ಪ್ರಮುಖ ಅಂಬಾದಾಸ ನಳಗೆ ಹೇಳಿದರು.

    ಕೇಂದ್ರ ಸರ್ಕಾರದ ಸತತ ಪ್ರಯತ್ನದಿಂದ ಪಾಲಕರ, ವಿದ್ಯಾರ್ಥಿಗಳ, ಶಿಕ್ಷಣ ತಜ್ಞರ, ಉನ್ನತ ಅಧಿಕಾರಿಗಳ ಅಭ್ರಿಪಾಯ ಪಡೆದ ನಂತರವೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿತ್ತು. ರಾಜ್ಯದಲ್ಲಿ ಈಗಾಗಲೇ ಇದು ಜಾರಿಗೊಂಡು ಎರಡು ವರ್ಷದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿಯಡಿ ತಮ್ಮ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಏಕಾಏಕಿ ಇದನ್ನು ರದ್ದುಗೊಳಿಸಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳಿದರು.

    ರಾಜ್ಯ ಸರ್ಕಾರ ಎನ್‌ಇಪಿಯನ್ನು ಹಿಂಪಡೆಯಲು ತೀರ್ಮಾನಿಸಿರುವುದು ವಿಷಾದನೀಯ. ಶಿಕ್ಷಣದ ಹಿತ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪುನಃ ಜಾರಿಗೊಳಿಸಬೇಕೆಂದು ಪರಿಷತ್ತಿನ ಪ್ರಮುಖ ಬಸವರಾಜ ಶೆಟಕಾರ ಆಗ್ರಹಿಸಿದರು.

    ಜಿಲ್ಲಾ ಕಾರ್ಯದರ್ಶಿ ಹೇಮಂತ, ಪ್ರಮುಖರಾದ ಅಶೋಕ ಶೇಂಬೆಳ್ಳಿ, ಅನೀಲ ಮೇತ್ರೆ, ಅನೀಲ ದೇವಕತೆ, ಮಲ್ಲಿಕಾರ್ಜುನ ಟೇಕರಾಜ ಇತರರಿದ್ದರು. ಅಮರೇಶ್ವರ ಕಾಲೇಜು, ಪತ್ರಿ ಸ್ವಾಮಿ ಕಾಲೇಜು, ಶಾಹೀನ್ ಕಾಲೇಜಿನ ವಿದ್ಯಾರ್ಥಿಗಳು ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts