More

    ನಗರ ಕೃಷಿಯತ್ತ ಸಿಟಿ ಜನ ಆಕರ್ಷಣೆ: ಜಿಕೆವಿಕೆಯಲ್ಲಿ ಆಸಕ್ತರಿಗೆ ತರಬೇತಿ

    ಬೆಂಗಳೂರು: ನಗರವಾಸಿಗಳಿಗೆ ಉತ್ತಮ ಆಹಾರ, ಆರೋಗ್ಯ ಹಾಗೂ ಬಿಡುವಿನ ಸಮಯದ ಸದ್ಭಳಕೆಗೆ ‘ನಗರ ಕೃಷಿ’ಯತ್ತ ಹೆಚ್ಚು-ಹೆಚ್ಚು ಜನ ಆಕರ್ಷಿತರಾಗುತ್ತಿದ್ದಾರೆ. ಈ ವಿಧಾನದಲ್ಲಿ ಜನಪ್ರಿಯವಾಗುತ್ತಿರುವ ಹೈಡ್ರೋ-ಫೋನಿಕ್ಸ್, ಅಕ್ವಾ-ಫೋನಿಕ್ಸ್, ವರ್ಟಿಕಲ್ ಗಾರ್ಡನಿಂಗ್, ಔಷಧಿಯ ಸಸಿಗಳು ನಗರ ತೋಟಗಾರಿಕೆಗೆ ಸೂಕ್ತವಾದ ಬೆಳೆ ಹಾಗೂ ತಳಿಗಳಾಗಿವೆ.

    ನಗರ ಕೃಷಿಯಲ್ಲಿ ಬೆಳೆ ನಿರ್ವಹಣಾ ವಿಧಾನ ಸಹಿತ ಇತರ ವಿಷಯಗಳ ಕುರಿತಾಗಿ ಆಸಕ್ತರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ 30 ಮಂದಿ ಪಾಲ್ಗೊಂಡು ಪ್ರಾಯೋಗಿಕ ತರಬೇತಿಯನ್ನು ಪಡೆದರು.

    ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕ ಡಾ. ಕೆ.ಸಿ.ನಾರಾಯಣಸ್ವಾಮಿ, ಪ್ರಸ್ತುತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒತ್ತಡದ ಜೀವನ ಹಾಗೂ ಹಿರಿಯರೇ ಹೆಚ್ಚಾಗಿರುವ ಬಹುತೇಕ ಕುಟುಂಬಗಳಲ್ಲಿ ನಗರ ಕೃಷಿ ನೆಮ್ಮದಿಯ ಬದುಕನ್ನು ನೀಡುತ್ತಿದೆ. ಇದರಿಂದ ಮನೆಗೆ ಬೇಕಾದ ಹಣ್ಣು-ತರಕಾರಿಯನ್ನು ಬೆಳೆದು ಅಡುಗೆಗೆ ಬಳಸಬಹುದಾಗಿದೆ ಎಂದರು.

    ಇದೇ ವೇಳೆ ‘ಚಂದದ ಮನೆಗಿರಲಿ, ಅಂದದ ತಾರಸಿ ತೋಟ’ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್.ಮಧುಪ್ರಸಾದ್, ವಿವಿಯ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಡಾ. ಸಿದ್ದಯ್ಯರವರು, ಐಡಿಎ್ ಕಾರ್ಯನಿರ್ವಹಣಾಧಿಕಾರಿ, ರಾಜೇಂದ್ರ ಹೆಗಡೆ, ಪ್ರಾಧ್ಯಾಪಕ ಡಾ. ಕೆ.ಪಿ.ರಘುಪ್ರಸಾದ್ ಹಾಗೂ ಸಹಾಯಕ ಪ್ರಾಧ್ಯಾಪಕ (ತೋಟಗಾರಿಕೆ) ಡಾ. ಎಂ.ಶಾಲಿನಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts