More

    ಪುತ್ರನ ಸ್ನೇಹಿತರಿಂದಲೇ ಲ್ಯಾಬ್ ಟೆಕ್ನಿಷಿಯನ್ ಮಹಿಳೆ ಕೊಲೆ ?

    ಹಟ್ಟಿಚಿನ್ನದಗಣಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಮಂಜುಳಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಕೊಲೆ ಆರೋಪಿಗಳ ಬಂಧನ

    ಹಟ್ಟಿಕ್ಯಾಂಪಿನ ಜತ್ತಿ ಕಾಲನಿ ನಿವಾಸಿ, ಲ್ಯಾಬ್ ಟೆಕ್ನಿಷಿಯನ್ ಕೋರ್ಸಿನ ವಿದ್ಯಾರ್ಥಿ ಸಮೀರ್ ಸೋಹೆಲ್ ನಬಿಚಾಂದ್ ಹಾಗೂ ಗುಂಡುರಾವ್ ಕಾಲನಿ ನಿವಾಸಿ, ಕಾರು ಚಾಲಕ ಮೊಹ್ಮದ್ ಕೈಫ್ ಅಬ್ದುಲ್ ರೆಹಮಾನ್ ಬಂಧಿತರು. ಇವರಿಂದ 7.49 ಲಕ್ಷ ರೂ. ಹಾಗೂ 9.77 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರು, ದ್ವಿಚಕ್ರ ವಾಹನ ಸೇರಿ 22.51 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿ: ಹಳೇ ದ್ವೇಷಕ್ಕೆ ವ್ಯಾಪಾರಿ ಕೊಲೆ; ಕಾರಣ ಕೇಳಿದರೇ ಶಾಕ್

    ಹಿನ್ನೆಲೆ: ಹಟ್ಟಿಯ ಗುಂಡುರಾವ್ ಕಾಲನಿ ನಿವಾಸಿ ಮಂಜುಳಾ ಅ.26ರಂದು ನಿವಾಸದ ಪಕ್ಕದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪತಿ ಮೃತರಾಗಿದ್ದರಿಂದ ಮಾನಸಿಕವಾಗಿ ನೊಂದಿದ್ದ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಂಜುಳಾ ಅವರ ಸಹೋದರ ಅನಿಲ್ ಕುಮಾರ್ ಬುದ್ಧಿನ್ನಿ ಪ್ರಕರಣ ದಾಖಲಿಸಿದ್ದರು.

    ಮಂಜುಳಾ ಮಾನಸಿಕ ಸ್ಥಿಮೀತ ಕಳೆದುಕೊಂಡಿರಲಿಲ್ಲ. ಬ್ಯಾಂಕಿನಿಂದ ಹಿಂಪಡೆದಿರುವ ಹಣ ಹಾಗೂ ಮನೆಯಲ್ಲಿರುವ ಚಿನ್ನಾಭರಣ ನೋಡಿ ವ್ಯವಸ್ಥಿತ ಪಿತೂರಿ ನಡೆಸಿ ಕೊಲೆಗೈಯಲಾಗಿದೆ ಎಂದು ಮೊದಲ ಪ್ರಕರಣ ದಾಖಲಾದ ಎರಡು ದಿನದ ಬಳಿಕ ಮಂಜುಳಾ ಪುತ್ರ ಸಚಿನ್ ಪಾಲ್ ಎರಡನೆ ದೂರು ದಾಖಲಿಸಿದ್ದರು. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು.

    ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆರೋಪಿ: ಕೊಲೆಗಾರರ ಬಂಧನಕ್ಕೆ ಒತ್ತಾಯಿಸಿ ಹಟ್ಟಿಯಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿಭಟನಾ ಜಾಥಾ ನಡೆಸಿದ್ದವು. ಜಾಥಾದಲ್ಲಿ ಆರೋಪಿ ಮೊಹ್ಮದ್ ಕೈಫ್ ಅಬ್ದುಲ್ ರೆಹಮಾನ್ ಕೂಡ ಪಾಲ್ಗೊಂಡಿದ್ದ. ಇಬ್ಬರೂ ಆರೋಪಿತಗಳು ಮಂಜುಳಾ ಅವರ ಪುತ್ರನ ಆತ್ಮೀಯ ಸ್ನೇಹಿತರಾಗಿದ್ದು, ಕುಟುಂಬದ ಸದಸ್ಯರಂತೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts