More

    ಹಿಂದೂ ಕಾರ್ಯಕರ್ತರಿಂದ ಮಸೀದಿಗೆ ನುಗ್ಗಲು ಯತ್ನ; ಬಾವುಟ ಗಲಾಟೆ, ಹಸಿರು-ಕೇಸರಿ ಸಂಘರ್ಷ..

    ಮಂಡ್ಯ: ಬಾವುಟ ಗಲಾಟೆಯಿಂದ ಉಂಟಾದ ಹಸಿರು-ಕೇಸರಿ ಸಂಘರ್ಷ ಹಿಂದೂ ಕಾರ್ಯಕರ್ತರು ಮಸೀದಿಗೆ ನುಗ್ಗಲು ಯತ್ನಿಸುವ ಮಟ್ಟಕ್ಕೆ ತಲುಪಿದ ಪ್ರಕರಣವೊಂದು ನಡದಿದೆ. ಮಂಡ್ಯ ಜಿಲ್ಲೆಯಲ್ಲಿ ಇಂದು ಈ ಘಟನೆ ನಡೆದಿದೆ.

    ಇಲ್ಲಿನ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ಮಳೆಯನ್ನೂ ಲೆಕ್ಕಿಸದೆ ನೂರಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಲ್ಲದೆ, ಮಸೀದಿಗೆ ನುಗ್ಗುವ ಪ್ರಯತ್ನ ಮಾಡಿದ್ದೂ ನಡೆದಿದೆ. ಪೊಲೀಸರು ಅಮಾಯಕ ಯುವಕನನ್ನು ಬಂಧಿಸಿ ಬೆದರಿಸಿದ್ದಾರೆ ಎಂಬ ಆರೋಪದ ಮೇರೆಗೆ ಈ ಪ್ರಕರಣ ನಡೆದಿದೆ.

    ಡಿ.4ರಂದು ನಡೆದ ಸಂಕೀರ್ತನಾ ಯಾತ್ರೆ ವೇಳೆ ಹಸಿರು ಬಾವುಟ ಕಿತ್ತು ಕೇಸರಿ ಬಾವುಟ ಹಾಕಿದ ಪ್ರಕರಣದಲ್ಲಿ ಪಾಂಡವಪುರ ತಾಲೂಕಿನ ಹಿರೆಮರಳಿ ಗ್ರಾಮದ ಶಶಾಂಕ್ ಎಂಬಾತನನ್ನು ಶ್ರೀರಂಗಪಟ್ಟಣದ ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಈ ಎಲ್ಲ ಬೆಳವಣಿಗೆ ನಡೆದಿದೆ.

    ನಿನ್ನೆ ಮಧ್ಯರಾತ್ರಿ ಮನೆಯಲ್ಲಿ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದ ಪೊಲೀಸರು, ಬೆಳಗ್ಗೆವರೆಗೂ ಠಾಣೆಯಲ್ಲೇ ಇರಿಸಿಕೊಂಡು ನೋಟಿಸ್ ನೀಡಿ ಬಿಡುಗಡೆ ಮಾಡಿದ್ದರು. ಆದರೆ ಪ್ರಕರಣಕ್ಕೆ ಸಂಬಂಧವಿಲ್ಲದಿದ್ದರೂ ಮಧ್ಯರಾತ್ರಿ ಟೆರೆರಿಸ್ಟ್ ರೀತಿ ಬಂಧಿಸಿದ್ದಾರೆಂದು ಆರೋಪಿಸಿ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

    ಅಲ್ಲದೆ ಠಾಣೆಗೆ ಕರೆದುಕೊಂಡು ಬಂದಾಗ ಮುಸ್ಲಿಮರ ಪರವಾಗಿ ಬೆದರಿಕೆ ಆರೋಪ ಹಾಕಿದ್ದಾರೆ ಎನ್ನಲಾಗಿದೆ. 53 ಮುಸ್ಲಿಂ ರಾಷ್ಟ್ರಗಳಿವೆ, ನಿನ್ನ ರುಂಡ-ಮುಂಡ ಕತ್ತರಿಸುತ್ತಾರೆಂದು ಬೆದರಿಸಿದ್ದ ಪೊಲೀಸ್ ಅಧಿಕಾರಿಯನ್ನ ತಕ್ಷಣ ಸಸ್ಪೆಂಡ್ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ತಕ್ಷಣವೇ ಕ್ರಮಕ್ಕೆ ನಿರಾಕರಿಸಿದ್ದಕ್ಕೆ ಜಾಮಿಯಾ ಮಸೀದಿ ಬಳಿಗೆ ತೆರಳಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರು ಮಸೀದಿ ಬಳಿ ಇರುವ ಬ್ಯಾರಿಕೇಡು ಮೀರಿ ಒಳನುಗ್ಗುವ ಯತ್ನ ಮಾಡಿದರು. ಆಗ ಪೊಲೀಸರು ಹಾಗೂ ಪ್ರತಿಭಟನೆಕಾರರ ನಡುವೆ ತಳ್ಳಾಟ ನೂಕಾಟ ಉಂಟಾಗಿದೆ. ಸ್ಥಳಕ್ಕೆ ಎಸ್​ಪಿ ಯತೀಶ್ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಸದ್ಯ ಮಸೀದಿ ಮುಂದೆ ಕುಳಿತು ಭಜನೆ ಮಾಡುವ ಮೂಲಕ ಪ್ರತಿಭಟನೆ ಮುಂದುವರಿದಿದೆ.

    ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

    ಪುತ್ರನಿಂದಲೇ ಕೊಲೆಯಾದ ಹಿರಿಯ ನಟಿ; ಬ್ಯಾಟ್​ನಿಂದ ಹೊಡೆದು ಕೊಂದು ಶವ ನದಿಗೆಸೆದ ಮಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts