More

    ನಬಾರ್ಡ್ ಯೋಜನೆಗೆ ಮದಗದ ಕೆರೆ ಸೇರ್ಪಡೆಗೆ ಯತ್ನ

    ಕಡೂರು: ಮದಗದ ಕೆರೆ ಅಭಿವೃದ್ಧಿಗಾಗಿ ನಬಾರ್ಡ್ ಸೇರಿದಂತೆ ವಿವಿಧ ಅನುದಾನದಡಿ ಸೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

    ಗುರುವಾರ ತಾಲೂಕು ಆಡಳಿತದಿಂದ ಮದಗದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ರಾಜ್ಯ ಬರಗಾಲ ಅನುಭವಿಸುವಂತಾಗಿದೆ. ಇಂಥ ಸಂದರ್ಭದಲ್ಲಿ ಮದಗದ ಕೆರೆ ತುಂಬಿರುವುದು ಸಂತಸ ಮೂಡಿಸಿದೆ ಎಂದರು.ಕೆರೆಯ ಅಧಿದೇವತೆ ಕೆಂಚಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಗಿದೆ. ತಾಲೂಕಿನ ಬರ ಸ್ಥಿತಿ ತಿಳಿದುಕೊಳ್ಳಲು ಕೇಂದ್ರ ಬರಗಾಲ ಅಧ್ಯಯನ ತಂಡ ಬರುವ ನಿರೀಕ್ಷೆ ಇದೆ. ಕೆರೆ ಅಚ್ಚುಕಟ್ಟು ಪ್ರದೇಶವನ್ನು ಸರ್ವೇ ಮಾಡಿಸಲಾಗುವುದು. ಯಾವುದೇ ರೈತರಿಗೆ ಅನ್ಯಾಯವಾಗದ ರೀತಿ ನೋಡಿಕೊಳ್ಳಲಾಗುವುದು. ವಿಶ್ವೇಶ್ವರಯ್ಯ ಜಲನಿಗಮದಿಂದ ಹಂತ ಹಂತವಾಗಿ ಕೆರೆ ಅಭಿವೃದ್ಧಿ ಮಾಡಲಾಗುವುದು. ಈ ಬಾರಿ ಕುಡಿಯುವ ನೀರಿಗಾಗಿ 20 ಅಡಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಗೊಳಿಸಲು ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಬರಗಾಲದ ಅಧ್ಯಯನ ತಂಡದ ಅಧಿಕಾರಿಗಳಿಗೆ ಶಾಸಕ ಇಲ್ಲಿನ ವಾಸ್ತವ ಸ್ಥಿತಿ ತಿಳಿಸಿಕೊಡಬೇಕು ಎಂದರು. ಸಣ್ಣ ನೀರಾವರಿ ಇಲಾಖೆ ಎಇಇ ದಯಾಶಂಕರ್ ಮಾತನಾಡಿ, 2 ಕೋಟಿ ರೂ. ಅನುದಾನದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಹೆಚ್ಚುವರಿಯಾಗಿ 2 ಕೋಟಿ ರೂ. ಅನುದಾನಕ್ಕಾಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಶಾಸಕರ ಸಹಕಾರ ಹೆಚ್ಚಿನದ್ದಾಗಿದೆ ಎಂದು ತಿಳಿಸಿದರು.ತಾಪಂ ಇಒ ಸಿ.ಆರ್.ಪ್ರವೀಣ್, ಸಣ್ಣ ನೀರಾವರಿ ಇಲಾಖೆ ಎಇ ರಾಮಚಂದ್ರ, ಕಿರಿಯ ಅಭಿಯಂತರ ಮಂಜುನಾಥ್, ಮುಖಂಡರಾದ ಬೀರೂರು ದೇವರಾಜ್, ಕಂಸಾಗರ ಸೋಮಶೇಖರ್, ಬಾಸೂರು ಚಂದ್ರಮೌಳಿ, ಆಸಂಧಿ ಕಲ್ಲೇಶ್, ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಕೆ.ಎಚ್.ಶಂಕರ್, ಸೋಮಶೇಖರಪ್ಪ, ದಾಸಯ್ಯನಗುತ್ತಿ ಚಂದ್ರಪ್ಪ, ಹೊಗರೇಹಳ್ಳಿ ಶಶಿ, ಡಿ.ಉಮೇಶ್, ಚಂದ್ರಪ್ಪ, ಎಮ್ಮೆದೊಡ್ಡಿ ಸೋಮೇಶ್, ಇಮ್ರಾನ್ ಖಾನ್, ಅಬಿದ್ ಪಾಷ, ಯರದಕರೆ ರಾಜಪ್ಪ, ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts