More

    ಅನ್ಯ ಪಕ್ಷದ ಗೆಲುವಿಗಾಗಿ ಶ್ರಮಿಸುವ ಅನಿವಾರ್ಯ ನಮ್ಮದಲ್ಲ

    ಕಡೂರು: ಅನ್ಯಪಕ್ಷದ ಅಭ್ಯರ್ಥಿಗಾಗಿ ದುಡಿಯಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗಿಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಕಟಿಬದ್ಧರಾಗಿ ಶ್ರಮಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಕಾರ್ಯಕರ್ತರಿಗೆ ತಿಳಿಸಿದರು.

    ಶನಿವಾರ ಕಾಂಗ್ರೆಸ್ ಬೂತ್ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಸುವ ವೇಳೆ ಕಡೂರು ಕ್ಷೇತ್ರದಿಂದ ಅತಿ ಹೆಚ್ಚು ಜನ ಭಾಗವಹಿಸಿದ್ದು ಕಾಂಗ್ರೆಸ್ ಕಡೆಗೆ ಜನರ ಒಲವು ಇರುವುದಕ್ಕೆ ಸಾಕ್ಷಿ. ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಸಿಗುವಂತೆ ಶ್ರಮಿಸಬೇಕು ಎಂದು ಹೇಳಿದರು.
    ಅಭ್ಯರ್ಥಿ ಶ್ರೇಯಸ್ ಪಟೇಲ್ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಲು ಅಸಾಧ್ಯವಾದ ಕಾರಣ ಎಲ್ಲ ಕಡೆ ನಾವೇ ಅಭ್ಯರ್ಥಿ ಎಂಬ ಭಾವನೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
    ಹಾಸನದಲ್ಲಿ ಪುಟ್ಟಸ್ವಾಮಿ ಗೌಡ ಅವರ ಕುಟುಂಬ ರಾಜಕಾರಣಕ್ಕೆ ಹೊಸತಲ್ಲ. ಆದರೆ ಎಂದೂ ಕುಟುಂಬ ಮತ್ತು ಸ್ವಾರ್ಥ ರಾಜಕಾರಣ ಮಾಡಲಿಲ್ಲ. ಸಂಸದ ಪ್ರಜ್ವಲ್ ರೇವಣ್ಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದರು. ದೇವೇಗೌಡರಾಗಲಿ ಅಥವಾ ಪ್ರಜ್ವಲ್ ಆಗಲಿ ಕಡೂರಿಗೆ ಗುರುತರವಾದ ಯಾವ ಕಾರ್ಯವನ್ನೂ ಮಾಡಲಿಲ್ಲ. ಜನರಿಗೆ ಸ್ಪಂದಿಸುವರನ್ನು ಆರಿಸುವ ನಿರ್ಧಾರವನ್ನು ಜನತೆ ಮಾಡಿದ್ದಾರೆ. ಶ್ರೇಯಸ್ ಪಟೇಲ್ ಗೆಲುವು ನಿಶ್ಚಿತ ಎಂದು ಹೇಳಿದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ನೇತಾರರು ಪ್ರಚಾರಕ್ಕೆ ಆಗಮಿಸಲಿದ್ದಾರೆ. ಕಾಂಗ್ರೆಸ್ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿದ್ದಂತೆ ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ವಿರೋಧಿಗಳ ಟೀಕೆಗೆ ಬಗ್ಗದೆ ಕೇವಲ ಜನಪರ ಆಡಳಿತವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈ ಅಂಶಗಳನ್ನು ಕಾರ್ಯಕರ್ತರು ಜನತೆಗೆ ಮನದಟ್ಟು ಮಾಡಿ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.
    ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖಂಡರಾದ ಶರತ್ ಕೃಷ್ಣಮೂರ್ತಿ, ಡಿ.ಉಮೇಶ್, ಜಿ.ಪಿ.ಪ್ರಭುಕುಮಾರ್, ಪ್ರಸನ್ನ, ಕರಿಬಡ್ಡೆ ಶ್ರೀನಿವಾಸ್, ಅಶೋಕ್, ಕಂಸಾಗರ ಸೋಮಶೇಖರ್, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಪುರಸಭಾ ಸದಸ್ಯರಾದ ಈರಳ್ಳಿ ರಮೇಶ್, ಹಾಲಮ್ಮ, ಯಾಸೀನ್, ಕೆ.ಟಿ.ನರಸಿಂಹಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts