More

    ಅಟಲ್ ಜೀ ಮಹಾನ್ ನಾಯಕ

    ಕಾಗವಾಡ : ದಿ. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಶ್ರೇಷ್ಠ ಪ್ರಧಾನಿ. ಪಕ್ಷಾತೀತವಾಗಿ ಸರ್ವರಿಂದ ಗೌರವಿಸಲ್ಪಡುವ ಏಕೈಕ ಮಹಾನ್ ನಾಯಕರಾಗಿದ್ದರು ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.

    ಸಮೀಪದ ಉಗಾರ ಖುರ್ದ ಗ್ರಾಮದ ಹನುಮಾನ ಮಂದಿರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಅಟಲ್ ಜೀ ಸ್ಮರಣೆ, ಕಿಸಾನ್ ಸಮ್ಮಾನ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಟಲ್ ಜೀ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದರು. ರಾಜಕೀಯದಲ್ಲಿ ಅಪರೂಪದ ವಾಕ್ಪಟುವಾಗಿದ್ದು ವಾಜಪೇಯಿ ಅವರು ಹಲವು ಕ್ರಾಂತಿಕಾರಿಕ ಯೋಜನೆಗಳನ್ನು ಜಾರಿಗೆ ತಂದಿದ್ದರು.

    ಇಂದಿನ ರಾಜಕಾರಣಿಗಳು ಅವರ ಆದರ್ಶಗಳನ್ನು ಪಾಲಿಸಿ ಮಾದರಿಯಾಗಲು ಪ್ರಯತ್ನಿಸಬೇಕು ಎಂದು ತಿಳಿಸಿದರು. ಬಳಿಕ ಗೋಪೂಜೆ ನೆರವೇರಿಸಿದರು. ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಕಿರಣ ಜಾಧವ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡಿದರು. ತಮ್ಮಣ್ಣ ಪಾರಶೆಟ್ಟಿ, ಸಂಜಯ ಪಾಟೀಲ, ಯೋಗೇಶ ಕುಂಬಾರ, ಅನಿಲ ನಾವಲಗೇರ, ಪ್ರವೀಣ ಕೆಂಪವಾಡೆ, ಅಪ್ಪಾಸಾಬ ಚೌಗಲಾ, ಶ್ರೀದೇವಿ ಚೌಗಲಾ, ವಿಮಲಾ ಪಾಟೀಲ, ತೇಜಸ್ವಿನಿ ದಾನೋಳಿ, ಭರತ ಪಾಟೀಲ, ಎನ್.ಬಿ.ಪಾಟೀಲ, ಪ್ರಪುಲ ಥೋರಸೆ, ಮದನ ದೇಶಿಂಗೆ, ಅವಿನಾಶ ಮೋರೆ, ಸುಜಯ ಪರಾಕಟೆ, ಲಕ್ಷ್ಮಣ ಜಾಧವ, ಜಮೀರ ಜಮಾದಾರ ಇತರರು ಇದ್ದರು.

    ಅಥಣಿ ವರದಿ: ಬಿಜೆಪಿ ರೈತ ಮೋರ್ಚಾ ವತಿಯಿಂದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಹಾಗೂ ಕಿಸಾನ್ ಸಮ್ಮಾನ್ ದಿನಾಚರಣೆ ಕಾರ್ಯಕ್ರಮ ಇಲ್ಲಿನ ಸಿದ್ದೇಶ್ವರ ವಾಚನಾಲಯದಲ್ಲಿ ಶುಕ್ರವಾರ ಏರ್ಪಡಿಸಲಾಗಿತ್ತು. ಆನಂದ ದೇಶಪಾಂಡೆ, ಕೆ.ಎಲ್.ಕುಂದರಗಿ ಮಾತನಾಡಿ, ದೇಶ ಕಂಡ ಅಪ್ರತಿಮ, ದೂರದೃಷ್ಟಿಯ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರುವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದರು. ಕಿಸಾನ್ ಬಂಡಿ ಸಂಚಾಲಕ ಅಶೋಕ ದಾನಗೌಡರ ಮಾತನಾಡಿದರು. ಧರೆಪ್ಪ ಠಕ್ಕಣವರ,ಪ್ರಭಾಕರ ಚವ್ಹಾಣ, ಅಣ್ಣಾಸಾಬ ನಾಯಿಕ, ವಿನಯ ಪಾಟೀಲ, ಪುಟ್ಟು ಹಿರೇಮಠ, ಅಜಿತ ಪವಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts