More

    ನಕಲಿ ಮದ್ಯ ಸೇವಿಸಿ 22 ಜನರ ಸಾವು: ಅಸ್ವಸ್ಥರಾದ 60 ಮಂದಿ ಆಸ್ಪತ್ರೆಗೆ ದಾಖಲು

    ಅಹಮದಾಬಾದ್​: ನಕಲಿ ಮದ್ಯ ಸೇವಿಸಿ ಬರೋಬ್ಬರಿ 22 ಮಂದಿ ಸಾವನ್ನಪ್ಪಿದ್ದು, 60 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುಜರಾತ್​ನ ಬೋಟಾಡ್​​ ಜಿಲ್ಲೆಯಲ್ಲಿ ನಡೆದಿದೆ.

    ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಪ್ರಕರಣವನ್ನು ಎಟಿಸಿಗೆ ವರ್ಗಾಯಿಸಿದ್ದು, ನಕಲಿ ಮದ್ಯ ತಯಾರಿಸುವವರನ್ನು ಪತ್ತೆ ಹಚ್ಚಲು ಸೂಚನೆ ನೀಡಿದೆ. ಸೋಮವಾರ ಘಟನೆ ಬೆಳಕಿಗೆ ಬಂದಿದ್ದು, ಈವರೆಗೆ 22 ಮಂದಿ ಬಲಿಯಾಗಿದ್ದು, 60 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಬ್​ ಇನ್ಸ್​ಪೆಕ್ಟರ್​ ಎನ್​ಎಂ ಚೌಹಾಣ್​ ತಿಳಿಸಿದ್ದಾರೆ.

    ನೀರಿನ ಜತೆ ಕೆಲವು ರಾಸಾಯನಿಕ ಅಂಶಗಳನ್ನು ಸೇರಿಸಿ ಜನರಿಗೆ ಮದ್ಯವೆಂದು ಮಾರಾಟ ಮಾಡಲಾಗಿದ್ದು, ಇದನ್ನು ಸೇವಿಸಿದ್ದರಿಂದಲೇ ಸಾವು ಸಂಭವಿಸಿದ್ದು, ದೊರೆತ ಮದ್ಯವನ್ನು ಸದ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಕರಂರಾಜ್​ ವಘೇಲಾ ತಿಳಿಸಿದ್ದಾರೆ.

    ಭಾನುವಾರ ರಾತ್ರಿ ಮದ್ಯ ಸೇವಿಸಿದ ಗ್ರಾಮಸ್ಥರು ನಂತರ ಒಬ್ಬೊಬ್ಬರೇ ಅಸ್ವಸ್ಥರಾಗಿದ್ದಾರೆ. ಅಂದು ರಾತ್ರಿಯೇ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ತೀರಾ ಅಸ್ವಸ್ಥರಾದವರನ್ನು ಅಹಮದಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಕತ್ರಿನಾ-ವಿಕ್ಕಿ ಕೌಶಲ್​ಗೆ ಜೀವ ಬೆದರಿಕೆ: ಬಂಧಿತನಿಂದ ಕಾರಣ ಕೇಳಿ ಶಾಕ್​ ಆದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts