More

    ಕರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ರಾಷ್ಟ್ರವನ್ನು ಹಿಂದಿಕ್ಕಿದ ದೆಹಲಿ….

    ನವದೆಹಲಿ: ಕರೊನಾ ವಿರುದ್ಧ ಹೋರಾಟಕ್ಕೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿರುವ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ದರ ಹೆಚ್ಚಿದೆ.

    ಜೂನ್​​ಗಿಂತಲೂ ಮೊದಲು ತುಂಬ ಕಡಿಮೆ ಇದ್ದ ಚೇತರಿಕೆಯ ಪ್ರಮಾಣ ಜೂ.20ರಂದು ಶೇ.50ರಷ್ಟಾಗಿತ್ತು. ಇದೀಗ ಶೇ.66.03ಕ್ಕೆ ಏರಿದೆ. ಇಡೀ ದೇಶದಲ್ಲಿ ಕರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.58.67ರಷ್ಟಿದ್ದು, ದೆಹಲಿಯ ರಿಕವರಿ ರೇಟ್​ ಅಧಿಕವಾದಂತಾಗಿದೆ.

    ದೆಹಲಿಯಲ್ಲಿ ಪ್ರತಿದಿನ 3000ದ ಆಸುಪಾಸಿನಲ್ಲಿ ಹೊಸ ಕೊವಿಡ್​-19 ಪ್ರಕರಣಗಳು ಪತ್ತೆಯಾಗುತ್ತಿವೆ. ಜೂ.23ರಂದು ಬರೋಬ್ಬರಿ 3947 ಜನಲ್ಲಿ ಸೋಂಕು ದೃಢಪಟ್ಟಿತ್ತು. ಆ ಸಮಯದಲ್ಲಿ ಅಲ್ಲಿನ ಚೇತರಿಕೆ ಪ್ರಮಾಣ ಶೇ.59.02ರಷ್ಟಿತ್ತು.

    ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಕರೊನಾ ವಿರುದ್ಧ ಹೋರಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ತಪಾಸಣೆ, ಚಿಕಿತ್ಸೆಗಳಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಮನೆಮನೆಗೆ ಹೋಗಿ ಟೆಸ್ಟ್​ ಮಾಡುವುದು, ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ತ್ವರಿತಗತಿಯಲ್ಲಿ ಟ್ರೇಸ್​ ಮಾಡುವ ಕೆಲಸ ಭರದಿಂದ ಸಾಗುತ್ತಿದೆ. (ಏಜೆನ್ಸೀಸ್​)

    ಪೊಲೀಸ್​ ಠಾಣೆಯಿಂದ ಮನೆಗೆ ಬಂದ ಕೂಡಲೇ ಯುವಕ ಆತ್ಮಹತ್ಯೆಗೆ ಶರಣಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts