More

    ಹಳ್ಳಿ ಪ್ರಗತಿಯಾದರೆ ದೇಶ ಪ್ರಗತಿ ಹೊಂದಲು ಸಾಧ್ಯ; ಎಚ್. ಶಿವಾನಂದ

    ರಾಣೆಬೆನ್ನೂರ: ಹಳ್ಳಿಗಳ ಉದ್ಧಾರವೆ ರಾಷ್ಟ್ರದ ಉದ್ಧಾರ ಎಂಬ ಗಾಂಧೀಜಿಯವರ ಮಾತಿನಂತೆ ಹಳ್ಳಿಗಳ ಪ್ರಗತಿಯಾಗದೆ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಎಚ್. ಶಿವಾನಂದ ಹೇಳಿದರು.
    ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಗರದ ಬಿಎಜೆಎಸ್‌ಎಸ್ ಪದವಿ ಪೂರ್ವ ಮಹಿಳಾ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
    ದೇಶ ಒಗ್ಗೂಡಿದರೆ ಪ್ರಗತಿ ಹೊಂದುವುದು ಬಹಳ ಸುಲಭ ಹಾಗಾಗಿ ದೇಶದ ಎಲ್ಲ ಜನರಲ್ಲೂ ಭಾವೈಕ್ಯತೆ ಮೂಡಿಸಿ, ಭ್ರಾತೃತ್ವವನ್ನು ಮೂಡಿಸಬೇಕು. ನಮ್ಮಲ್ಲಿ ಜಾತಿ ಮತ ಭೇದ ಭಾವಗಳನ್ನು ಹೋಗಲಾಡಿಸುವ ಉದ್ದೇಶ ರಾಷ್ಟ್ರೀಯ ಸೇವೆ ಯೋಜನೆಯದ್ದಾಗಿದೆ. ಗ್ರಾಮಗಳ ಪ್ರಗತಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ಈ ಸೇವಾ ಯೋಜನೆ ಶ್ರಮವಹಿಸುತ್ತದೆ ಎಂದರು.
    ಗ್ರಾಮೀಣ ಪ್ರದೇಶದಲ್ಲಿ ಜನಪದ ಕಲೆ ಎಂಬ ವಿಚಾರ ಕುರಿತು ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ. ಕಾಂತೇಶರೆಡ್ಡಿ ಗೋಡಿಹಾಳ ಉಪನ್ಯಾಸ ನೀಡಿದರು.
    ಪ್ರಾಂಶುಪಾಲ ಎಚ್.ಬಿ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಎಚ್. ಶಿವಾನಂದ ಸನ್ಮಾನಿಸಲಾಯಿತು.
    ಪ್ರಮುಖರಾದ ಪ್ರಕಾಶ ಸಿದ್ದಣ್ಣವರ, ಮುತ್ತುರಾಜ ಸಿದ್ದಣ್ಣನವರ, ಅಶೋಕ ಬಣಕಾರ, ಬಿ.ಕೆ. ಚೌಡಣ್ಣನವರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts