More

    ಸಂಘದ ಏಳಿಗೆಗೆ ಸದಸ್ಯರು ಸಂಘಟಿತರಾಗಿ

    ಅಳವಂಡಿ: ಕನ್ನಡಾಂಬೆ ಹಾಗೂ ಭಾಷೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ, ಕನ್ನಡ ಭಾಷೆ, ನೆಲ, ಜಲ ಏಳ್ಗೆಗೆ ಶ್ರಮಿಸೋಣ ಎಂದು ಜೈಹೋ ಕರ್ನಾಟಕ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಮಹಮದ್ ರಫೀಕ ಧಾರವಾಡ ತಿಳಿಸಿದರು.

    ಇದನ್ನೂ ಓದಿ: ಸಣ್ಣ ಜಾತಿಗಳ ಏಳಿಗೆಗೆ ಸರ್ಕಾರ ಬದ್ಧ

    ಸಮೀಪದ ಕವಲೂರು ಗ್ರಾಮದಲ್ಲಿ ನಡೆದ ಜೈಹೋ ಕರ್ನಾಟಕ ಪರಿವರ್ತನಾ ವೇದಿಕೆ ಗ್ರಾಮ ಘಟಕ ರಚನೆ ಹಾಗೂ ಪಧಾದಿಕಾರಿಗಳಿಗೆ ಪ್ರಮಾಣ ಪತ್ರ ವಿತರಣ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

    ಜಿಲ್ಲಾ ಉಪಾಧ್ಯಕ್ಷ ತೋಸಿಪ್ ಮೊರಬ ಮಾತನಾಡಿ, ಸಂಘಗಳು ಬೆಳೆಯಬೇಕಾದರೆ ಸದಸ್ಯರಲ್ಲಿ ಶಿಸ್ತು ಬದ್ದ ಸಂಘಟನೆ ಹಾಗೂ ಕಾರ್ಯ ತತ್ಪರತೆ ಇರಬೇಕು. ಸಂಘವನ್ನು ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ಸಂಘದ ಎಲ್ಲ ಸದಸ್ಯರ ಮೇಲಿದೆ. ಕಾರಣ ಸದಸ್ಯರು ಸಂಘದ ಏಳಿಗೆಗೆ ಸಮಯವನ್ನು ಮೀಸಲಿಡಬೇಕು ಎಂದರು.

    ಜೈಹೋ ಕರ್ನಾಟಕ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಇರ್ಪಾನ್ ಡಂಬಳ, ಗ್ರಾಮ ಘಟಕದ ಅಧ್ಯಕ್ಷ ಪ್ರವೀಣ ಗುಡಿ, ಗೌರವ ಅಧ್ಯಕ್ಷ ಕಲ್ಲಯ್ಯ ಮೂಲಿಮನಿ, ಉಪಾಧ್ಯಕ್ಷ ಈರಪ್ಪ ಬಂಡಿ, ಪ್ರಧಾನ ಕಾರ್ಯದರ್ಶಿ ಗಣೇಶ ಮ್ಯಾಗೇರಿ, ಕಾರ್ಯದರ್ಶಿ ಸುಬಾನಸಾಬ, ಖಜಾಂಚಿ ನಿಂಗಪ್ಪ ಹೊಸುಪ್ಪಾರ, ಸದಸ್ಯರಾದ ಅಶೋಕ ಹಂದ್ರಾಳ, ಸಂತೋಷ ಬಂಡಿ, ಕೆ.ಮಲ್ಲಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts