More

    ಸಂಘದ ಸದುಪಯೋಗ ಪಡೆದುಕೊಳ್ಳಲಿ

    ಅಥಣಿ ಗ್ರಾಮೀಣ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಡಾ.ವೀರೇಂದ್ರ ಹೆಗ್ಗಡೆ ಅವರು ನೆರವು ನೀಡುತ್ತಿದ್ದು ಮಹಿಳೆಯರು ಸದುಪಯೋಗದೊಂದಿಗೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಜಬ್‌ಅಲಿ ಮೇಲಿನಮನಿ ಹೇಳಿದರು.

    ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅಂಗವಿಕಲರಿಗೆ ಶನಿವಾರ ವೀಲ್‌ಚೇರ್ ವಿತರಿಸಿ ಅವರು ಮಾತನಾಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ದಿಯಿಂದ ಕೆರೆ ಹೂಳೆತ್ತುವ ಕೆಲಸವನ್ನು ತಾಲೂಕಿನಾದ್ಯಂತ ಕೈಗೊಳ್ಳಲಾಗಿದೆ. ಪರಿಸರ ಸಂರಕ್ಷಣೆ, ಗುಣಮಟ್ಟದ ಶಿಕ್ಷಣ ನೀಡಲು ಯೋಜನೆ ಮೂಲಕ ಉತ್ತಮ ಸಂಪನ್ಮೂಲ ಶಿಕ್ಷಕರನ್ನು ನಿಯೋಜಿಸಲಾಗಿದೆ. ಎಲ್ಲರೂ ಕೈ ಜೋಡಿಸಿದಾಗ ಪರಿಪೂರ್ಣ ಲಿತಾಂಶ ದೊರೆಯಲಿದೆ ಎಂದರು.

    ಗ್ರಾಪಂ ಮಾಜಿ ಅಧ್ಯಕ್ಷ ಬಾಬಾಸಾಬ ಅವತಾಡೆ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದರು.
    ಸುಧಾಕರ ರತನವರ್, ತಾನಾಜಿ ಬಾಬರ, ನವಜೀವನ ಸಮಿತಿ ಸದಸ್ಯ ಹಾಜಿಅಲಿ ಶೇಖ್, ವಲಯಮೇಲ್ವಿಚಾರಕ ಪ್ರದೀಪ, ಒಕ್ಕೂಟ ಅಧ್ಯಕ್ಷೆ ಜಯಶ್ರೀ ಅವತಾಡೆ, ಮಾಸಾಯಿ ಮುಲ್ಲಾ, ರೋಹಿಣಿ ಜಾಧವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts