More

    ವಸತಿ ನಿಲಯ ನಿರ್ಮಿಸುವುದಾದರೆ ನೆರವು

    ಹುಬ್ಬಳ್ಳಿ: ಎಸ್‌ಡಿಎಂ ಆಸ್ಪತ್ರೆ ವೈದ್ಯರ ತಂಡವು ಇಲ್ಲಿಯ ಹೊಸೂರಿನ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಹಿರಿಯರ ಹೆಜ್ಜೆ ವೇದಿಕೆಯಲ್ಲಿ ಶನಿವಾರ ಹಿರಿಯ ನಾಗರಿಕರಿಗಾಗಿ ನರದೌರ್ಬಲ್ಯ ಔಷಧ ರಹಿತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.
    ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ ಉದ್ಘಾಟಿಸಿ ಮಾತನಾಡಿ, ಹಿರಿಯ ಜೀವಿಗಳಿಗೆ ಆರೋಗ್ಯ ಮುಖ್ಯ. ಈ ದೃಷ್ಟಿಯಿಂದ ಆಗಾಗ ಶಿಬಿರಗಳನ್ನು ಏರ್ಪಡಿಸುತ್ತಿರುವುದ ಶ್ಲಾಘನೀಯ. ಹಿರಿಯ ನಾಗರಿಕರಿಗಾಗಿ ಸುಸಜ್ಜಿತ ವಸತಿ ನಿಲಯ ನಿರ್ಮಿಸಲು ಮುಂದಾದರೆ ನೆರವು ನೀಡುವುದಾಗಿ ಭರವಸೆ ನೀಡಿದರು.
    ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
    ಎಸ್.ಡಿ.ಎಂ. ವೈದ್ಯಕೀಯ ವಿದ್ಯಾಲಯದ ಡಾ. ಸಲೀಮಾ ಬಿಜಾಪುರಿ, ಅವರು ಔಷಧ ರಹಿತ ಚಿಕಿತ್ಸಾ ವಿಧಾನ ಕುರಿತು ಉಪನ್ಯಾಸ ನೀಡಿದ್ದಲ್ಲದೇ ಪ್ರಾತ್ಯಕ್ಷಿಕೆ ವಿಧಾನ ಪ್ರದರ್ಶಿಸಿದರು. 102 ಹಿರಿಯ ನಾಗರಿಕರು ಶಿಬಿರದ ಪ್ರಯೋಜನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts