More

    ಮಾದಕ ವಸ್ತುಗಳ ಜಾಲ ಪತ್ತೆಗೆ ಸಹಕರಿಸಿ

    ಲಿಂಗಸುಗೂರು: ಮಾದಕ ವಸ್ತುಗಳ ಸೇವನೆಯಿಂದ ಕುಟುಂಬದ ವಿನಾಶದೊಂದಿಗೆ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಎಸಿ ಅವಿನಾಶ ಶಿಂಧೆ ಹೇಳಿದರು.

    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಮಾದಕ ದ್ರವ್ಯಗಳ ದುಷ್ಪರಿಣಾಮದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

    ಯುವಕರು ದುಶ್ಚಟಕ್ಕೆ ಬಲಿಯಾಗುವುದನ್ನು ತಪ್ಪಿಸಲು ಮಾದಕ ದ್ರವ್ಯಗಳ ಉತ್ಪಾದನೆ ಮತ್ತು ಮಾರಾಟ ಜಾಲ ಪತ್ತೆಗೆ ಸಾರ್ವಜನಿಕರು ಸಹಕರಿಸಬೇಕು. ಗಾಂಜಾ, ಅಫೀಮು ಸೇವನೆಯಿಂದ ದೇಹದ ಆರೋಗ್ಯ ಕ್ಷಿಣಿಸುವ ಜತೆಗೆ ದೇಶದ ಆರ್ಥಿಕತೆಗೆ ಧಕ್ಕೆಯಾಗಲಿದೆ. ಯುವಕರು ಆರೋಗ್ಯವಂತರಾಗಿ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

    ಇದನ್ನೂ ಓದಿ: ಮಾದಕ ವಸ್ತುಗಳ ಸೇವನೆಯಿಂದ ಜೀವನ ಹಾಳು

    ಡಿವೈಎಸ್‌ಪಿ ದತ್ತಾತ್ರೇಯ ಕರ್ನಾಡ್ ಮಾತನಾಡಿ, ಮಾದಕ ವ್ಯಸನಿಗಳಿಗಾದ ದುಷ್ಪರಿಣಾಮಗಳನ್ನು ಅರಿತು ವ್ಯಸನದಿಂದ ದೂರವಿರಬೇಕು. ಆರೋಗ್ಯ ಉತ್ತಮವಾಗಿದ್ದರೆ ಜೀವನಕ್ಕೆ ಬೆಲೆ ಬರುತ್ತದೆ. ಸಾರ್ವಜನಿಕರು ಮಾದಕ ದ್ರವ್ಯಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದರು.
    | ಪ್ರಾಚಾರ್ಯ ಮುರುಘೇಂದ್ರಪ್ಪ, ಪೊಲೀಸ್ ಸಿಬ್ಬಂದಿ ನಾಗರಾಜ, ಈರಣ್ಣ, ಅಮರೇಶ, ಸಿದ್ದಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts