More

    ಆಸ್ತಿ ತೆರಿಗೆ ಶೇ.5 ರಿಯಾಯಿತಿ ಜೂನ್ ಅಂತ್ಯದವರೆಗೆ ವಿಸ್ತರಣೆ; ಪಾಲಿಕೆ ಇತಿಹಾಸದಲ್ಲೇ ಮೊದಲು

    ಬೆಂಗಳೂರು: ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ತಿ ತೆರಿಗೆ ಪಾವತಿಯ ಶೇ.5 ರಿಯಾಯಿತಿ ಅವಧಿಯನ್ನು ಜೂ.30ರವರೆಗೆ ವಿಸ್ತರಣೆ ಮಾಡಲಾಗಿದೆ.

    ಪ್ರತಿ ಆರ್ಥಿಕ ವರ್ಷ ಆರಂಭವಾದ ಏ.30ರೊಳಗೆ ಆಯಾ ವರ್ಷದ ಪೂರ್ಣ ಆಸ್ತಿ ತೆರಿಗೆ ಪಾವತಿಸುವ ಆಸ್ತಿ ಮಾಲೀಕರಿಗೆ ತೆರಿಗೆ ಮೊತ್ತದ ಶೇ.5 ರಿಯಾಯಿತಿ ನೀಡಲಾಗುತ್ತದೆ. ಉಳಿದ 11 ತಿಂಗಳು ಆಸ್ತಿ ತೆರಿಗೆ ಒಟ್ಟು ಮೊತ್ತವನ್ನು ಪಾವತಿಸಬೇಕು. ಬಾಕಿ ಉಳಿಸಿಕೊಂಡವರು ಮುಂದಿನ ಆರ್ಥಿಕ ಸಾಲಿನಲ್ಲಿ ತೆರಿಗೆ ಮೊತ್ತದೊಂದಿಗೆ ಶುಲ್ಕ ಮತ್ತು ಬಡ್ಡಿಯನ್ನೂ ಸೇರಿಸಿ ಕಟ್ಟಬೇಕಾಗುತ್ತದೆ. ಆದರೆ, ಕಳೆದೆರಡು ವರ್ಷಗಳಿಂದ ಕರೊನಾ ಸೋಂಕು ಕಾಣಿಸಿಕೊಂಡು ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಆಸ್ತಿ ಮಾಲೀಕರಿಗೆ ಅನುಕೂಲವಾಗುವಂತೆ ಮೇ 30ರವರೆಗೆ ಶೇ.5 ರಿಯಾಯಿತಿ ನೀಡಲಾಗಿತ್ತು. ಈ ವರ್ಷ ಇನ್ನೂ ಒಂದು ತಿಂಗಳು ರಿಯಾಯಿತಿ ಅವಧಿ ಮುಂದೂಡಿಕೆಯಾಗಿದೆ.

    ಪಾಲಿಕೆ ಇತಿಹಾಸದಲ್ಲಿ ಮೊದಲು:
    ಬೆಂಗಳೂರು ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು ಸುಮಾರು 60 ವರ್ಷಗಳು ಕಳೆದಿದೆ. 2008 ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವಕ್ಕೆ ಬಂದಿದೆ. ಆದರೆ, ಪಾಲಿಕೆ ಇತಿಹಾಸದಲ್ಲಿ ವಾರ್ಷಿಕ ಆಸ್ತಿ ತೆರಿಗೆಯ ಶೇ.5 ರಿಯಾಯಿತಿ ಅವಧಿಯನ್ನು 3 ತಿಂಗಳು ವಿಸ್ತರಣೆ ಮಾಡಿರಲಿಲ್ಲ. ಆದರೆ, ಕೋವಿಡ್ ಸಾಂಕ್ರಾಮಿಕ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ, ಇದೇ ಮೊದಲ ಬಾರಿಗೆ 2021-22ನೇ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿಯ ರಿಯಾಯಿತಿ ಅವಧಿಯನ್ನು ಜೂ.30ರವರೆಗೆ (ಆರ್ಥಿಕ ವರ್ಷದ ಮೊದಲ 3 ತಿಂಗಳು) ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡಲಾಗಿದೆ.

    ಮೇ ರಿಯಾಯಿತಿ ಸದ್ಬಳಕೆಯಾಗಿಲ್ಲ:
    ಪ್ರಸ್ತುತ ವರ್ಷದ ಆರ್ಥಿಕ ಸಾಲಿನಲ್ಲಿ ಮೊದಲು ಏ.30ರವರೆಗೆ ಆಸ್ತಿ ತೆರಿಗೆ ಮೇಲಿನ ಶೇ.5 ರಿಯಾಯಿತಿ ನೀಡಲಾಗಿತ್ತು. ಈ ವೇಳೆ ಕೇವಲ 293.86 ಕೋಟಿ ರೂ. ತೆರಿಗೆ ಸಂಗ್ರವಾಗಿತ್ತು. ಅತಿ ಕಡಿಮೆ ತೆರಿಗೆ ಸಂಗ್ರವಾಗಿದ್ದ ಕಾರಣ ಮೇ 31ರ ಅಂತ್ಯಕ್ಕೆ ರಿಯಾಯಿತಿ ಮುಂದುವರೆಸಲಾಗಿದ್ದು, 1,240 ಕೋಟಿ ರೂ. ತೆರಿಗೆ ಸಂಗ್ರಹವಾಯಿತು. ಆದರೆ, ಜನತಾ ಕರ್ಫ್ಯೂ ಮತ್ತು ಲಾಕ್‌ಡೌನ್ ವಿಧಿಸಿದ್ದರಿಂದ, ಮೇ ತಿಂಗಳಲ್ಲಿ ಬ್ಯಾಂಕ್ ಚಲನ್ ಮೂಲಕ ಆಸ್ತಿ ತೆರಿಗೆ ಪಾವತಿ ಸಾಧ್ಯವಾಗಲಿಲ್ಲ. ಹೀಗಾಗಿ, ಚಲನ್ ಮೂಲಕ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಜೂನ್ ಅಂತ್ಯದವರೆಗೆ ರಿಯಾಯಿತಿ ವಿಸ್ತರಿಸಲಾಗಿದೆ.

    ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಏ.26 ರಿಂದ ಒಂದೂವರೆ ತಿಂಗಳು ಜನತಾ ಕರ್ಯ್ೂ ಮತ್ತು ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಹೀಗಾಗಿ, ನಗರದ ಆಸ್ತಿ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಶೇ.5 ರಿಯಾಯಿತಿ ಅವಧಿಯನ್ನು ಜೂ.30ರ ವರೆಗೆ ಮುಂದುವರೆಸಲಾಗುತ್ತಿದೆ.
    ಗೌರವ್‌ಗುಪ್ತ, ಬಿಬಿಂಎಪಿ ಮುಖ್ಯ ಆಯುಕ್ತ

    ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​ ಸೋಂಕಿತರ ಆರೋಗ್ಯ ವಿಚಾರಿಸಿ, ಕುಣಿದು ರಂಜಿಸಿದ ಹರ್ಷಿಕಾ-ಭುವನ್​

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts