More

    ಕೋಲಾರದಲ್ಲಿ ತ್ರಿಕೋನ ಸ್ಪರ್ಧೆ

    ಪ್ರಮುಖ ಮೂರು ಪಕ್ಷಗಳಿಂದ ಭರ್ಜರಿ ಪ್ರಚಾರ l 18 ಮಂದಿ ಕಣದಲ್ಲಿ

    ಕೋಲಾರ: ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದ್ದು ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
    ಮತದಾರರನ್ನು ಸೆಳೆಯಲು ಮೂರು ಪಕ್ಷಗಳು ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಿದ್ದು ಅಭ್ಯರ್ಥಿಗಳ ವಿರುದ್ಧ ಅಪಪ್ರಚಾರಗಳೂ ನಡೆಯುತ್ತಿವೆ. ಒಟ್ಟು 18 ಮಂದಿ ಕಣದಲ್ಲಿದ್ದಾರೆ.
    ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿದ್ದ ವರ್ತೂರು ಪ್ರಕಾಶ್​ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಇವರಿಗೆ ನಾಲ್ಕನೇ ಚುನಾವಣೆ. ಈ ಬಾರಿ ಗೆಲುವು ಸಾಧಿಸಿದರೆ ಕೋಲಾರವನ್ನು ಹೈಟೆಕ್​ ಸಿಟಿಯಾಗಿ ಮಾಡುತ್ತೇನೆ ಎಂದು ಭರವಸೆ ನೀಡುತ್ತಿದ್ದಾರೆ. ಆದರೆ ಈ ಮುಂಚೆ ಎರಡು ಬಾರಿ ಗೆದ್ದಾಗ ಏನು ಮಾಡಿದ್ದಾರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದನ್ನೇ ಪ್ರತಿಪಕ್ಷದವರು ದಾಳವಾಗಿ ಉಪಯೋಗಿಸಿಕೊಂಡಿದ್ದಾರೆ.
    ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮತ್ತು ಸಂಸದ ಮುನಿಸ್ವಾಮಿ ಅವರ ಸಹಾಯದೊಂದಿಗೆ ೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದೇನೆ ಎಂದು ಹೇಳಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಸಚಿವ ಮುನಿರತ್ನ ಟಿಕೆಟ್​ ೂಷಣೆ ಬಳಿಕ ಒಂದು ಬಾರಿಯೂ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿಲ್ಲ. ಮುನಿಸ್ವಾಮಿ ಮತ್ತು ಇನ್ನೊರ್ವ ಬಿಜೆಪಿ ಆಕಾಂಯಾಗಿದ್ದ ಓಂ ಶಕ್ತಿ ಚಲಪತಿ ಪ್ರಚಾರದಲ್ಲಿ ತೊಡಗಿದ್ದಾರೆ. ಭಾನುವಾರ ನರೇಂದ್ರ ಮೋದಿ ಚುನಾವಣೆ ಪ್ರಚಾರಕ್ಕೆ ಬರುವುದರಿಂದ ಬಿಜೆಪಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎಂದು ಕಾದುನೋಡಬೇಕಿದೆ. ಸಿದ್ದರಾಮಯ್ಯ ಕ್ಷೇತ್ರದಲ್ಲಿ ಸ್ಪರ್ಧಿಸದಿರುವುದರಿಂದ ಕುರುಬ ಸಮುದಾಯದ ಮತಗಳು ಒಗ್ಗೂಡುವ ಸಾಧ್ಯತೆಯಿದ್ದು, ಜತೆಗೆ ಅಹಿಂದ ವರ್ಗವೂ ಇವರ ಕೈ ಹಿಡಿಯುವ ಸಾಧ್ಯತೆಗಳಿವೆ.

    “ಪಂಚರತ್ನ’ ಪರ್ಯಟನೆ: ಸಮಾಜಸೇವೆ ಮೂಲಕ ರಾಜಕೀಯಕ್ಕೆ ಎಂಟ್ರಿ ಪಡೆದಿರುವ ಟೊಮ್ಯಾಟೊ ವ್ಯಾಪಾರಿ ಸಿಎಂಆರ್​ ಶ್ರೀನಾಥ್​ ಜೆಡಿಎಸ್​ ಅಭ್ಯರ್ಥಿ. ಪಂಚರತ್ನ ಯಾತ್ರೆ ಕೈಗೊಳ್ಳುವಾಗಲೇ ಶ್ರೀನಾಥ್​ ಅವರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದರಿಂದ ಕ್ಷೇತ್ರ ಪರ್ಯಟನೆ ಮಾಡಲು ಸಾಧ್ಯವಾಗಿದೆ. ಕುಮಾರಸ್ವಾಮಿ ಅವರ ಪಂಚರತ್ನ ಕಾರ್ಯಕ್ರಮಗಳನ್ನು ಪ್ರಚಾರಕ್ಕೆ ಬಳಸಿಕೊಂಡು ಮತಯಾಚನೆಯಲ್ಲಿ ತೊಡಗಿದ್ದಾರೆ. ಇವರಿಗೆ ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ಸಾಥ್​ ನೀಡುತ್ತಿದ್ದಾರೆ. ಜತೆಗೆ ಜೆಡಿಎಸ್​ನಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಇದು ಇವರಿಗೆ ಶ್ರೀರೆಯಾಗಿದೆ. ಜೆಡಿಎಸ್​ ತಾಲೂಕು ಅಧ್ಯೆ ಕುರ್ಕಿ ರಾಜೇಶ್ವರಿ ಸದ್ಯಕ್ಕೆ ತಟಸ್ಥವಾಗಿದ್ದರೂ ಯಾವ ಪಕ್ಷಕ್ಕೂ ಬೆಂಬಲ ಸೂಚಿಸದೇ ಇರುವುದರಿಂದ ಸದ್ಯದ ಮಟ್ಟಿಗೆ ಜೆಡಿಎಸ್​ ಪ್ರಚಾರದ ನಾಗಾಲೋಟ ಮುಂದುವರಿದಿದೆ.

    ಪ್ರಚಾರ ಜೋರು: ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥ್​ ಅವರಿಗೆ ಕೋಲಾರ ಕಾಂಗ್ರೆಸ್​ ನಿಂದ ಬಿ ಫಾರಂ ನೀಡಲಾಗಿದೆ. ಪ್ರಚಾರ ದಿನಗಳು ಕಡಿಮೆ ಇದ್ದರೂ ಭರಾಟೆ ಜೋರಾಗಿದೆ. ಎಂಎಲ್​ಸಿಗಳಾದ ನಜೀರ್​ ಅಹ್ಮದ್​ ಮತ್ತು ಅನಿಲ್​ಕುಮಾರ್​ ಜತೆಗೂಡಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮುಸ್ಲಿಮರ ಮತಗಳನ್ನು ಕ್ರೋಡಿಕರಿಸುವಲ್ಲಿ ಮುಂದಾಗಿದ್ದಾರೆ. ಜತೆಗೆ ಅಹಿಂದ ಮತ್ತು ಎಸ್​ಸಿ, ಎಸ್​ಟಿ ಮತಗಳನ್ನೂ ಒಗ್ಗೂಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಇವರ ನಾಗಾಲೋಟಕ್ಕೆ ವಿವಿಧ ಸಂಟನೆಗಳು ಆರೋಪ ಮಾಡುತ್ತಾ ಬ್ರೇಕ್​ ಹಾಕಲು ಮುಂದಾಗಿವೆ. ದಲಿತ ವಿರೋಧಿ ಎಂಬ ಹಣೆಪಟ್ಟಿಯ ಜತೆಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
    ಶಾಸಕ ಕೆ.ಶ್ರೀನಿವಾಸಗೌಡ ಸೇರಿದಂತೆ ಅನೇಕ ಮುಖಂಡರು ಕೊತ್ತೂರು ಮಂಜುನಾಥ್​ ಬೆಂಬಲಕ್ಕೆ ನಿಂತಿದ್ದು, ಕಾರ್ಯಕರ್ತರಿಗಿಂತ ಮುಖಂಡರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಖಂಡರ ನಡುವೆಯೇ ಅಲ್ಲಲ್ಲಿ ಅಪಸ್ವರವೂ ಕೇಳ ಬರುತ್ತಿದೆ. ಸದ್ಯಕ್ಕೆ ಕೆ.ಎಚ್​.ಮುನಿಯಪ್ಪ ಬಣ ಮೌನಕ್ಕೆ ಜಾರಿದ್ದು, ಇನ್ನು ಚುನಾವಣೆ ದಿನಗಳು ಹತ್ತಿರ ಬರುತ್ತಿದ್ದಂತೆ ಕ್ಷೇತ್ರದಲ್ಲಿ ದಿನಕ್ಕೊಂದು ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.

    ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ

    ಕೋಲಾರದಲ್ಲಿ ತ್ರಿಕೋನ ಸ್ಪರ್ಧೆ

    ಕೊತ್ತೂರು ಮಂಜುನಾಥ್​ (ಕಾಂಗ್ರೆಸ್​) ವರ್ತೂರು ಆರ್​. ಪ್ರಕಾಶ್​( ಬಿಜೆಪಿ), ಸಿ.ಎಂ.ಆರ್​.ಶ್ರೀನಾಥ್​(ಜೆಡಿಎಸ್​) , ಎನ್​.ಜಮೀಲ್​ ಅಹ್ಮದ್​ (ಎಎಪಿ), ಎಸ್​.ಬಿ.ಸುರೇಶ (ಬಿಎಸ್​ಪಿ), ಎ.ಇಂದಿರಾ (ಕೆಆರ್​ಎಸ್​), ತಮ್ಮಪ್ಪ (ಸಮಾಜವಾದಿ ಪಕ್ಷ), ಎಂ.ಎಸ್​.ಬದರಿನಾರಾಯಣ (ಆರ್​.ಪಿ.ಐ), ಪಕ್ಷೇತರರಾಗಿ ಜಿ.ಆರ್​.ಅರವಿಂದ, ಕೆ.ಎಸ್​.ಆರೀಫ್​, ಅಂಜದ್​ಪಾಷ, ಎಚ್​.ಎ.ದೇವಕುಮಾರ್​, ಪ್ರಕಾಶ್​, ಟಿ.ಬೈರೆಡ್ಡಿ, ಡಿ.ವಿ.ಮಂಜುನಾಥ್​, ಎಂ.ರಮೇಶ್​, ಜಿ.ವೆಂಕಟಾಚಲಪತಿ, ಎಸ್​.ಸತೀಶ್​ ಕಣದಲ್ಲಿದ್ದಾರೆ.

    ಮತದಾರರ ಸಂಖ್ಯೆ

    • ಒಟ್ಟು ಮತದಾರರು: 240378
    • ಪುರುಷ ಮತದಾರರು: 119078
    • ಮಹಿಳಾ ಮತದಾರರು: 121244

    2018ರ ವಿಧಾನಸಭೆ ಚುನಾವಣೆ ಲಿತಾಂಶ

    • ಶ್ರೀನಿವಾಸಗೌಡ ಜೆಡಿಎಸ್​ 82788
    • ಸೈಯದ್​ ಜಮೀರ್​ ಪಾಷಾ ಕಾಂಗ್ರೆಸ್​ 38537
    • ವರ್ತೂರು ಪ್ರಕಾಶ್​ ಪಕ್ಷೇತರ 35544
    • ಓಂ ಶಕ್ತಿ ಚಲಪತಿ ಬಿಜೆಪಿ 12458

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts